ವಿರಾಮದ ಬಳಿಕ ತಂಡಕ್ಕೆ ಮರಳಲು ಸ್ಟಾರ್ ಆಟಗಾರ ಸಜ್ಜು: ಆಶಸ್ ಸರಣಿಗೆ 'ಬೆನ್' ಬಲ ಖಚಿತ

ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಧಾನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯ ಹಾಗೂ ಕೈ ಬೆರಳಿನ ಕಾಯದ ಕಾರಣಕ್ಕೆ ವಿರಾಮವನ್ನು ಪಡೆದುಕೊಂಡಿದ್ದರು. ಸುದೀರ್ಘ ವಿರಾಮದ ಬಳಿಕ ಈಗ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತೆ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಗೆ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

ಈ ತಿಂಗಳ ಆರಂಭದಲ್ಲಿ ಬೆನ್ ಸ್ಟೋಕ್ಸ್ ತಮ್ಮ ಎಡಗೈ ತೋರು ಬೆರಳಿನ ಶಸ್ತ್ರ ಚಕಿತ್ಸೆಗೆ ಒಳಗಾಗಿದ್ದರು. ಇದರಿಂದ ಚೇತರಿಸಿಕೊಂಡಿರುವ ಸ್ಟೋಕ್ಸ್ ಇತ್ತೀಚೆಗೆ ನೆಟ್ ಅಭ್ಯಾಸಕ್ಕೆ ಮರಳಿದ್ದರು. ಈ ಬಗ್ಗೆ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು. ಈ ಮೂಲಕ ಬೆನ್ ಸ್ಟೋಕ್ಸ್ ಶೀಘ್ರದಲ್ಲಿಯೇ ಇಂಗ್ಲೆಂಡ್ ತಂಡಕ್ಕೆ ವಾಪಾಸಾಗಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಅದೀಗ ನಿಜವಾಗಿದ್ದು ಮುಂದಿನ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಪರವಾಗಿ ದಾಳಿಗೆ ಇಳಿಯಲು ಬೆನ್ ಸ್ಟೋಕ್ಸ್ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಗ್ಗೆ ಸೋಮವಾರ ಮುಂಜಾನೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ.

ಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ; ಕಳಪೆ ಪ್ರದರ್ಶನ ನೀಡಿದ ರೋಹಿತ್ ಬಗ್ಗೆ ಕೊಹ್ಲಿ ಮಾತುಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ; ಕಳಪೆ ಪ್ರದರ್ಶನ ನೀಡಿದ ರೋಹಿತ್ ಬಗ್ಗೆ ಕೊಹ್ಲಿ ಮಾತು

ಆಸ್ಟ್ರೇಲಿಯಾಗೆ ತೆರಳಲು ನಾನು ಸಿದ್ಧ: "ನಾನು ನನ್ನ ಮಾನಸಿಕ ಆರೋಗ್ಯವನ್ನು ಸರಿ ಮಾಡಿಕೊಳ್ಳಲು ಹಾಗೂ ಕೈ ಬೆರಳಿನ ಗಾಯದ ಚೇತರಿಕೆಗಾಗಿ ಆದ್ಯತೆ ನೀಡಿದ್ದೆ. ಈಗ ನಾನು ಚೇತರಿಕೆ ಕಂಡಿದ್ದು ನನ್ನ ಸಹ ಆಟಗಾರರನ್ನು ಸೇರಿಕೊಳ್ಳಲು ಕಾತರಿಸುತ್ತಿದ್ದೇನೆ. ಆಸ್ಟ್ರೇಲಿಯಾಗೆ ತೆರಳಲು ನಾನು ಸಿದ್ಧನಾಗಿದ್ದೇನೆ" ಎಂದು ಬೆನ್ ಸ್ಟೋಕ್ಸ್ ಆಶಸ್ ಸರಣಿಗಾಗಿ ಇಂಗ್ಲೆಂಡ್ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಬೆನ್ ಸ್ಟೋಕ್ಸ್ ಖಚಿತಪಡಿಸಿದ್ದಾರೆ.

ಭಾರತ vs ಪಾಕ್: ಭಾರತ vs ಪಾಕ್: "ಪಾಕಿಸ್ತಾನ ಗೆಲ್ಲಬೇಕೆಂದರೆ ಈ ಒಬ್ಬ ಆಟಗಾರನನ್ನು ತಂಡದಿಂದ ಹೊರಗಿಡಲೇಬೇಕು!"

ಅನಿರ್ದಷ್ಟಾವಧಿ ವಿಶ್ರಾಂತಿ ಪಡೆದಿದ್ದ ಬೆನ್ ಸ್ಟೋಕ್ಸ್: ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ತಂಡದಲ್ಲಿ ಹೆಸರಿಸಲ್ಪಟ್ಟಿದ್ದ ಬೆನ್ ಸ್ಟೋಕ್ಸ್ ಈ ಸರಣಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗಿ ವಿಶ್ರಾಂತಿ ಪಡೆಯಲು ಬಯಸಿದ್ದರು. ಅನಿರ್ದಿಷ್ಟಾವಧಿ ವಿಶ್ರಾಂತಿಯನ್ನು ಪಡೆದುಕೊಂಡಿದ್ದ ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯ ಹಾಗೂ ಕೈ ಬೆರಳಿನ ಕಾಯದ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದರು.

ಐಪಿಎಲ್‌ನಲ್ಲೂ ಭಾಗಿಯಾಗಿರಲಿಲ್ಲ ಸ್ಟೋಕ್ಸ್: ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್‌ನಿಂದಲೂ ಹೊರಗುಳಿದಿದ್ದರು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಮಡದ ಪರವಾಗಿ ಕಣಕ್ಕಿಳಿಯುತ್ತಿದ್ದ ಸ್ಟೋಕ್ಸ್ ಈ ಬಾರಿ ಈ ಟೂರ್ನಿಯಿಂದಲೂ ದೂರವುಳಿದಿದ್ದರು. ಇವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಸೇರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ಕಣಕ್ಕಿಳಿದಿತ್ತು.

ಟಿ20 ವಿಶ್ವಕಪ್‌ನಿಂದಲೂ ದೂರ: ಇನ್ನು ಐಪಿಎಲ್ ಮುಕ್ತಾಯವಾದ ಎರಡು ದಿನಗಳ ಅಂತರದಲ್ಲಿ ಟಿ20 ವಿಶ್ವಕಪ್ ಆರಂಭವಾಗಿದೆ. ಈ ಮಹತ್ವದ ಟೂರ್ನಿಗೂ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಅಲಭ್ಯವಾಗಿದ್ದಾರೆ. ಬೆನ್ ಸ್ಟೋಕ್ಸ್ ಅಲಭ್ಯತೆಯಲ್ಲಿ ತಂಡದ ಸಂಯೋಜನೆಯಲ್ಲಿ ಇಂಗ್ಲೆಂಡ್ ಹಿನ್ನಡೆ ಅನುಭವಿಸುತ್ತಿರುವುದು ಸುಳ್ಳಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಆಡುವ ಸಾಮರ್ಥ್ಯ ಹೊಂದಿರುವ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡ ಈ ಹಿಂದಿನ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಕೂಡ ಕಾರಣರಾಗಿದ್ದರು. ಆದರೆ ಬೆನ್ ಸ್ಟೋಕ್ಸ್ ಪ್ರತಿಷ್ಟಿತ ಆಶಸ್ ಸರಣಿಗೆ ಲಭ್ಯವಾಗಲಿದ್ದಾರೆ ಎಂಬುದು ಇಂಗ್ಲೆಂಡ್ ತಮಡದ ಪಾಲಿಗೆ ಆಶಾದಾಯಕ ಬೆಳವಣಿಗೆ.

For Quick Alerts
ALLOW NOTIFICATIONS
For Daily Alerts
Story first published: Monday, October 25, 2021, 15:36 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X