ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Harry Brook : ಅಜಂ, ಟ್ರಾವಿಸ್ ಹೆಡ್ ಹಿಂದಿಕ್ಕಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಹ್ಯಾರಿ ಬ್ರೂಕ್

England Batter Harry Brook Won the ICC Player of the Month For December 2022

ಇಂಗ್ಲೆಂಡ್‌ ತಂಡದ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರು ಡಿಸೆಂಬರ್ 2022ರ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿ ವಿಜೇತರಾಗಿದ್ದಾರೆ.

ಈ ಸ್ಪರ್ಧೆಯಲ್ಲಿದ್ದ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್‌ ಅವರನ್ನು ಹಿಂದಿಕ್ಕಿ 23 ವರ್ಷದ ಹ್ಯಾರಿ ಬ್ರೂಕ್ ಮೊದಲ ಬಾರಿಗೆ ಐಸಿಸಿ ಗೌರವಕ್ಕೆ ಪಾತ್ರರಾದರು. ಪಾಕಿಸ್ತಾನ ಪ್ರವಾಸದ ವೇಳೆ ಅದ್ಭುತ ಪ್ರದರ್ಶನ ನೀಡಿದ್ದರು.

IND vs SL: ದ್ವಿಶತಕ ವೀರ ಕಿಶನ್, ಟಿ20 ಶತಕವೀರ ಸೂರ್ಯನನ್ನು ಕೈಬಿಟ್ಟಿದ್ದು ಸರಿಯೇ?: ಮೊಹಮ್ಮದ್ ಕೈಫ್IND vs SL: ದ್ವಿಶತಕ ವೀರ ಕಿಶನ್, ಟಿ20 ಶತಕವೀರ ಸೂರ್ಯನನ್ನು ಕೈಬಿಟ್ಟಿದ್ದು ಸರಿಯೇ?: ಮೊಹಮ್ಮದ್ ಕೈಫ್

ಹ್ಯಾರಿ ಬ್ರೂಕ್ ತನ್ನ ವೃತ್ತಿಜೀವನದಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯದ ಅನುಭವದೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಆಧುನಿಕ ಕ್ರಿಕೆಟ್‌ನ ಶ್ರೇಷ್ಠರಲ್ಲಿ ಒಬ್ಬರಾಗಲು ಪ್ರಯತ್ನಸುತ್ತಿರುವ ಈ ಯುವ ಬ್ಯಾಟರ್ ಪಾಕಿಸ್ತಾನ ವಿರುದ್ಧ 3 ಶತಕಗಳನ್ನು ಬಾರಿಸಿದರು. ಹ್ಯಾರಿ ಬ್ರೂಕ್ ಅವರು ಎರಡನೇ ಟೆಸ್ಟ್‌ನ ಎರಡು ಇನ್ನಿಂಗ್ಸ್‌ಗಳಲ್ಲಿ 153 ಮತ್ತು 87 ರನ್ ಗಳಿಸಿದ್ದು ವಿಶೇಷವಾಗಿತ್ತು.

England Batter Harry Brook Won the ICC Player of the Month For December 2022

ಇದೇ ವೇಳೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ಆಶ್ಲೀಗ್ ಗಾರ್ಡ್ನರ್ ಅವರು ಐಸಿಸಿ ಮಹಿಳಾ ಆಟಗಾರ್ತಿಯ ಡಿಸೆಂಬರ್ ತಿಂಗಳ ಪ್ರಶಸ್ತಿಯನ್ನು ಗೆದ್ದುಕೊಂಡರು. ಭಾರತ ವಿರುದ್ಧ ಟಿ20 ಸರಣಿಯ ಗೆಲುವಿಗೆ ಬ್ಯಾಟ್ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಸೀಸ್ ಆಲ್‌ರೌಂಡರ್ ಆಶ್ಲೀಗ್ ಗಾರ್ಡ್ನರ್ ಐಸಿಸಿ ಮಹಿಳಾ ಟಿ20 ಆಟಗಾರರ ಶ್ರೇಯಾಂಕದಲ್ಲಿಯೂ ಏರಿಕೆ ಕಂಡಿದ್ದಾರೆ.

ಪಾಕಿಸ್ತಾನದ ಅಂಗಳದಲ್ಲಿ ಅವರನ್ನು ಸೋಲಿಸಲು ಇಂಗ್ಲೆಂಡ್‌ ತಂಡಕ್ಕೆ ಮಹತ್ವದ ಪಾತ್ರ ವಹಿಸಿರುವುದು ಐಸಿಸಿ ಪ್ರಶಸ್ತಿ ಗೆಲುವಿಗೆ ಕಾರಣವಾಗಿದೆ ಎಂದು ಹ್ಯಾರಿ ಬ್ರೂಕ್ ಹೇಳಿದರು.

England Batter Harry Brook Won the ICC Player of the Month For December 2022

"ಡಿಸೆಂಬರ್‌ನ ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿರುವುದು ಒಂದು ಗೌರವವಾಗಿದ್ದು, ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಗೆಲ್ಲುವುದು ಒಂದು ಅದ್ಭುತ ಸಾಧನೆಯಾಗಿದೆ. ಇಂಗ್ಲೆಂಡ್‌ ತಂಡದೊಂದಿಗಿನ ನನ್ನ ಮೊದಲ ಟೆಸ್ಟ್ ಪ್ರವಾಸದಲ್ಲಿ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದ್ದು ಕನಸು ನನಸಾಗಿದೆ," ಹ್ಯಾರಿ ಬ್ರೂಕ್ ಹೇಳಿಕೆಯನ್ನು ಐಸಿಸಿ ಉಲ್ಲೇಖಿಸಿದೆ.

ಹ್ಯಾರಿ ಬ್ರೂಕ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಪಾಕಿಸ್ತಾನದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಬ್ಯಾಟರ್‌ನಿಂದ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿಯಲು ನೆರವಾಯಿತು. ಈ ಹಿಂದೆ ಐಸಿಸಿ ಹಾಲ್ ಆಫ್ ಫೇಮ್ ವಿಜೇತ ಡೇವಿಡ್ ಗೋವರ್ ಹೊಂದಿದ್ದ ದಾಖಲೆ ಮುರಿದರು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 93.60 ಸರಾಸರಿಯಲ್ಲಿ 468 ರನ್ ಗಳಿಸಿದರು.

Story first published: Tuesday, January 10, 2023, 16:14 [IST]
Other articles published on Jan 10, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X