ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಸರಣಿ: ಬೈರ್‌ಸ್ಟೋವ ಸ್ಪೋಟಕ ಆಟಕ್ಕೆ ತಣ್ಣಗಾದ ಐರ್ಲೆಂಡ್, ಇಂಗ್ಲೆಂಡ್‌ಗೆ ಸರಣಿ ಗೆಲುವು

England Beat Ireland By 4 Wickets To Take Unassailable 2-0 Series Lead

ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಢ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಸುಲಭವಾಗಿ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕೊರೊನಾ ನಂತರ ನಡೆದ ಎರಡು ಮಾದರಿಯ ಸರಣಿಗಳಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿ ಆಭಿಮಾಯನವನ್ನು ಮುಂದುವರಿಸಿದೆ.

ಸೌಥಾಂಪ್ಟನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡ ಮೊದಲ ಬ್ಯಾಟಿಂಗ್‌ಗೆ ಮಾಡಲು ಕಣಕ್ಕಿಳಿದಿತ್ತು. ಈ ಪಂದ್ಯದಲ್ಲೂ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ದಾಳಿಯನ್ನು ಎದುರಿಸಲು ಸಂಪೂರ್ಣವಾಗಿ ವಿಫಲಾದರು. ಆದರೆ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ತೋರಿದ ಜವಾಬ್ಧಾರಿಯುವ ಆಟದ ಕಾರಣದಿಂದಾಗಿ 212-9 ರನ್ ಗಳಿಸಲು ಐರ್ಲೆಂಡ್ ತಂಡ ಯಶಸ್ವಿಯಾಯಿತು.

ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟನ್ನು ಕೊರೊನಾ ಹೆಚ್ಚು ಕಾಡಲಿದೆ: ದ್ರಾವಿಡ್ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟನ್ನು ಕೊರೊನಾ ಹೆಚ್ಚು ಕಾಡಲಿದೆ: ದ್ರಾವಿಡ್

ಅದರಲ್ಲೂ ಆಲ್‌ರೌಂಡರ್ ಕರ್ಟಿಸ್ ಕ್ಯಾಂಫರ್ ಇಂಗ್ಲೆಂಡ್ ವಿರುದ್ಧ ಜೀವನ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದರು.87 ಎಸೆತಗಳಲಲ್ಲಿ ಕ್ಯಾಂಫರ್ 68 ರನ್ಬಾರಿಸಿ ಐರ್ಲೆಂಡ್‌ಗೆ ಆಸರೆಯಾದರು. ಇಂಗ್ಲೆಂಡ್ ಪರವಾಗಿ ಆದಿಲ್ ರಶೀದ್ 3 ವಿಕೆಟ್ ಪಡೆದರೆ, ಡೇವಿಡ್ ವಿಲ್ಲೀ ಮ ಸಕೀಬ್ ಮಹ್ಮೂದ್ ತಲಾ 2 ವಿಕೆಟ್ ಪಡೆದರು. ಟೋಪ್ಲಿ ಹಾಗೂ ವಿನ್ಸಿ ತಲಾ ಒಂದು ವಿಕೆಟ್ ಕಿತ್ತರು.

ಐರ್ಲೆಂಡ್ ತಂಡ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ಮಧ್ಯಮ ಕ್ರಮಾಂಕದ ದಿಢೀರ್ ಕುಸಿದ ಆಘಾತವನ್ನು ನೀಡಿತಾದರೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋ ಸ್ಪೋಟಕ ಆಟ ಗೆಲುವನ್ನು ಸುಲಭವಾಗಿಸಿತು. 41 ಎಸೆತಗಳಲ್ಲಿ ಬೈರ್‌ಸ್ಟೋ 82 ರನ್ ಗಳಿಸಿ ಮಿಂಚಿದರು. ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ಡೇವಿಡ್ ವಿಲ್ಲೀ ಕೂಡ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು.

330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್

ಐರ್ಲೆಂಡ್ ನೀಡಿದ ಗುರಿಯನ್ನು 213 ರನ್‌ಗಳ ಗುರಿಯನ್ನು ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು ಬೆನ್ನಟ್ಟಿ ಗೆಲುವು ಸಾಧಿಸಲು ಯಶಸ್ವಿಯಾಯಿತು. ಐರ್ಲೆಂಡ್ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಿದ ಜೋಶ್ವಾ ಲಿಟ್ಲ್ 3 ವಿಕೆಟ್ ಪಡೆದರೆ ಬೌಲಿಂಗ್‌ನಲ್ಲೂ ಮಿಂಚಿದ ಕ್ಯಾಂಫರ್ 2 ವಿಕೆಟ್ ಪಡೆದರು.

Story first published: Monday, August 3, 2020, 9:58 [IST]
Other articles published on Aug 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X