ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಆಸ್ಟ್ರೇಲಿಯಾ: ಇಂದು 2ನೇ ಏಕದಿನ ಪಂದ್ಯ, ಇಂಗ್ಲೆಂಡ್‌ಗೆ ನಿರ್ಣಾಯಕ

England Vs Australia 2nd Odi Preview And Match Details

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಇಂದು ನಡೆಯಲಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್ ಪಾಲಿಗೆ ಮಹತ್ವದ್ದಾಗಿದೆ. ಮೊದಲ ಪಂದ್ಯವನ್ನು ಕಳೆದುಕೊಂಡಿರುವ ಇಂಗ್ಲೆಂಡ್ 0-1 ರ ಹಿನ್ನಡೆಯಲ್ಲಿದೆ. ಈ ಪಂದ್ಯವನ್ನು ಗೆದ್ದರೆ ಮಾತ್ರವೇ ಸರಣಿ ಜೀವಂತವಾಗಿ ಉಳಿಯಲಿದೆ.

ಗಾಯಗೊಂಡು ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಸ್ಟೀವ್ ಸ್ಮಿತ್ ಈ ಪಂದ್ಯದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಆಸ್ಟ್ರೇಲಿಯಾ ಪಾಲಿಗೆ ಮತ್ತಷ್ಟು ಬಲ ತುಂಬಲಿದೆ. ಮೊದಲ ಪಂದ್ಯದಲ್ಲಿ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಆತಿಥೇಯ ಇಂಗ್ಲೆಂಡ್ ಬಳಿಕ ನಿಯಂತ್ರಣ ಕಳೆದುಕೊಂಡಿತ್ತು. ಈ ಬಾರಿ ಆ ತಪ್ಪು ಪುನರಾವರ್ತಿಸದಂತೆ ನೋಡಿಕೊಳ್ಳಬೇಕಿದೆ.

ಇಂಗ್ಲೆಂಡ್ vs ಆಸಿಸ್: ಚೇತರಿಸಿಕೊಂಡ ಸ್ಟೀವ್ ಸ್ಮಿತ್ 2ನೇ ಏಕದಿನಕ್ಕೆ ಲಭ್ಯ ಇಂಗ್ಲೆಂಡ್ vs ಆಸಿಸ್: ಚೇತರಿಸಿಕೊಂಡ ಸ್ಟೀವ್ ಸ್ಮಿತ್ 2ನೇ ಏಕದಿನಕ್ಕೆ ಲಭ್ಯ

ಮೊದಲ ಪಂದ್ಯದಲ್ಲಿ ಆಸಿಸ್‌ಗೆ ಗೆಲುವು

ಮೊದಲ ಪಂದ್ಯದಲ್ಲಿ ಆಸಿಸ್‌ಗೆ ಗೆಲುವು

ಮೊದಲ ಪಂದ್ಯದಲ್ಲಿ ಬೌಲಿಂಗ್ ಮಾಡಲಿಳಿದ ಇಂಗ್ಲೆಂಡ್ ಆರಂಭದಲ್ಲಿ ಆಸ್ಟ್ರೇಲಿಯಾವನ್ನು 123/5ಕ್ಕೆ ನಿಯಂತ್ರಿಸಿತ್ತು. ಆದರೆ ಬಳಿಕ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡುವಲ್ಲಿ ಆಸ್ಟ್ರೇಲಿಯಾ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಯಶಸ್ವಿಯಾದರು. ಅಂತಿಮವಾಗಿ ಆಸ್ಟ್ರೇಲಿಯಾ 294 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಬೌಲಿಂಗ್‌ನಲ್ಲೂ ಈ ಮೊತ್ತವನ್ನು ಕಾಪಾಡುಕೊಂಡ ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದು ಬೀಗಿತ್ತು.

ಪಂದ್ಯದ ಆರಂಭ, ನೇರಪ್ರಸಾರ

ಪಂದ್ಯದ ಆರಂಭ, ನೇರಪ್ರಸಾರ

ಈ ಪಂದ್ಯವೂ ಕೂಡ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲೇ ನಡೆಯಲಿದ್ದು ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಟಾಸ್ ನಡೆಯಲಿದ್ದು 5:30 ಕ್ಕೆ ಪಂದ್ಯ ಆರಂಭವಾಗಲಿದೆ. ಸೋನಿ ಸಿಕ್ಸ್ ಹಾಗೂ ಸೋನಿ ಸಿಕ್ಸ್ ಹೆಚ್‌ಡಿನಲ್ಲಿ ನೇರಪ್ರಸಾರವಿರಲಿದೆ.

ಸಂಭಾವ್ಯ ತಂಡ ಆಸ್ಟ್ರೇಲಿಯಾ

ಸಂಭಾವ್ಯ ತಂಡ ಆಸ್ಟ್ರೇಲಿಯಾ

ಆರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೈನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವು್, ಆಡಮ್ ಜಂಪಾ.

ಸಂಭಾವ್ಯ ತಂಡ ಇಂಗ್ಲೆಂಡ್

ಸಂಭಾವ್ಯ ತಂಡ ಇಂಗ್ಲೆಂಡ್

ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಜೋ ರೂಟ್, ಇಯೊನ್ ಮೋರ್ಗಾನ್(ನಾಯಕ), ಜೋಸ್ ಬಟ್ಲರ್, ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಆದಿಲ್ ರಶೀದ್.

Story first published: Monday, September 14, 2020, 10:06 [IST]
Other articles published on Sep 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X