ಇಂಗ್ಲೆಂಡ್ ವಿರುದ್ಧ ಆಸಿಸ್ ಅಬ್ಬರ: ಆಸ್ಟ್ರೇಲಿಯಾ ಪರ ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾ ನೆಲದಲ್ಲ ನಡೆದ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡಕ್ಕೆ ಅದಾದ ಬಳಿಕ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಘಾತದ ಮೇಲೆ ಆಘಾತ ಉಂಟಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾಗೆ ಹೀನಾಯವಾಗಿ ಸೋತಿದ್ದು ಸರಣಿ ಕೈಚೆಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಎರಡನೇ ಪಂದ್ಯದಲ್ಲೂ ಸೋಲು ಕಂಡಿದೆ ಜೋಸ್ ಬಟ್ಲರ್ ಪಡೆ.

ಈ ಸರಣಿಯಲ್ಲಿ ಸತತ ಎರಡನೇ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ಪರವಾಗಿ ಅದ್ಬುತ ಪ್ರದರ್ಶನ ನೀಡಿ ಮಿಂಚಿರುವ ಮಾಜಿ ನಾಯಕ ಸ್ಟೀವ್ ಸ್ಮಿತ್ ಏಕದಿನ ಮಾದರಿಯಲ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 94 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 6 ನ್‌ಗಳ ಅಂತರದಿಂದ ಶತಕ ವಂಚಿತವಾಗಿದ್ದಾರೆ. ಮೊದಲ ಪಂದ್ಯದಲ್ಲಿಯೂ ಸ್ಮಿತ್ ಭರ್ಜರಿ 80 ರನ್‌ಗಳನ್ನು ಗಳಿಸಿದ್ದರು.

IND vs NZ: ಕಿವೀಸ್ ವಿರುದ್ಧ ಭಾರತದ ಟಿ20 ತಂಡದ ಬಗ್ಗೆ ಜಾಂಟಿ ರೋಡ್ಸ್ ದೊಡ್ಡ ಹೇಳಿಕೆIND vs NZ: ಕಿವೀಸ್ ವಿರುದ್ಧ ಭಾರತದ ಟಿ20 ತಂಡದ ಬಗ್ಗೆ ಜಾಂಟಿ ರೋಡ್ಸ್ ದೊಡ್ಡ ಹೇಳಿಕೆ

ವಿಶೇಷ ದಾಖಲೆ ಬರೆದ ಸ್ಮಿತ್

ವಿಶೇಷ ದಾಖಲೆ ಬರೆದ ಸ್ಮಿತ್

ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡದ ಪರವಾಗಿ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿ ಸ್ಟೀವ್ ಸ್ಮಿತ್ ಒಟ್ಟು 14000 ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪರವಾಗಿ ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ ಆಟಗಾರ ಎಂಬ ವಿಶೇಷ ದಾಖಲೆಯನ್ನು ಸ್ಟೀವ್ ಸ್ಮಿತ್ ಈಗ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 288 ಪಂದ್ಯಗಳಲ್ಲಿ ಸ್ಮಿತ್ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಯಶಸ್ಸು

ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಯಶಸ್ಸು

ಆಸ್ಟ್ರೇಲಿಯಾದ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎನಿಸಿಕೊಳ್ಳುವ ಸ್ಟೀವ್ ಸ್ಮಿತ್ ಏಕದಿಕ ಕ್ರಿಕೆಟ್ ಮಾದರಿಯಲ್ಲಿ 4896 ರನ್ ಗಳಿಸಿದ್ದರೆ ಟಿ20ಐ ಮಾದರಿಯಲ್ಲಿ 1008 ರನ್ ಗಳಿಸಿದ್ದಾರೆ. ಆದರೆ ಆಸ್ಟ್ರೇಲಿಯಾದ ಅನುಭವಿ ಆಟಗಾರ ಟೆಸ್ಟ್ ಮಾದರಿಯಲ್ಲಿ ಅತ್ಯಂತ ದೊಡ್ಡ ಯಶಸ್ಸು ಸಾಧಿಸಿದ್ದು 60ರ ಸರಾಸರಿಯಲ್ಲಿ 8161 ರನ್ ಗಳಿಸಿ ಮಿಂಚಿದ್ದಾರೆ. ಈ ಮೂಲಕ ಒಟ್ಟಾರೆಯಾಗಿ ಸ್ಟೀವ್ ಸ್ಮಿತ್ 14000 ರನ್‌ಗಳ ಗಡಿ ದಾಟಿದ್ದಾರೆ.

ಸ್ಟೀವ್ ಸ್ಮಿತ್ ಮತ್ತೊಂದು ಮೈಲಿಗಲ್ಲು

ಸ್ಟೀವ್ ಸ್ಮಿತ್ ಮತ್ತೊಂದು ಮೈಲಿಗಲ್ಲು

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಡೇವಿಡ್ ಬೂನ್ ಅವರನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೇರಿದ್ದಾರೆ. ಆಸಿಸ್ ಆಟಗಾರರ ಪೈಕಿ ಈ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಮೊದಲ ಸ್ಥಾನದಲ್ಲಿದ್ದು ಸ್ಟೀವ್ ವಾ, ಮೈಕಲ್ ಕ್ಲಾರ್ಕ್, ಅಲೆನ್ ಬಾರ್ಡರ್ ಮತ್ತು ಡೇವಿಡ್ ವಾರ್ನರ್ ನಂತರದ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ

ಇಂಗ್ಲೆಂಡ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ

ಇನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 94 ರನ್‌ಗಳ ಕೊಡುಗೆ ನೀಡಿದ ಕಾರಣದಿಂದಾಗಿ ಆಸ್ಟ್ರೇಲಿಯಾ ದೊಡ್ಡ ಗುರಿಯನ್ನು ಇಂಗ್ಲೆಂಡ್ ತಂಡದ ಮುಂದಿಟ್ಟಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೇವಲ 208 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ 72 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿದಂತಾಗಿದೆ.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೈನ್, ಅಲೆಕ್ಸ್ ಕ್ಯಾರಿ (ವಿಕಡಟ್ ಕೀಪರ್), ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯ್ನಿಸ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್ (ನಾಯಕ)
ಬೆಂಚ್: ಸೀನ್ ಅಬಾಟ್, ಪ್ಯಾಟ್ ಕಮ್ಮಿನ್ಸ್, ಜೋಶ್ ಇಂಗ್ಲಿಸ್

ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಜೇಮ್ಸ್ ವಿನ್ಸ್, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮೊಯಿನ್ ಅಲಿ (ನಾಯಕ), ಕ್ರಿಸ್ ವೋಕ್ಸ್, ಸ್ಯಾಮ್ ಕರ್ರಾನ್, ಲಿಯಾಮ್ ಡಾಸನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್
ಬೆಂಚ್: ಜೋಸ್ ಬಟ್ಲರ್, ಕ್ರಿಸ್ ಜೋರ್ಡಾನ್, ಲ್ಯೂಕ್ ವುಡ್, ಆಲಿ ಸ್ಟೋನ್

For Quick Alerts
ALLOW NOTIFICATIONS
For Daily Alerts
Story first published: Saturday, November 19, 2022, 17:39 [IST]
Other articles published on Nov 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X