ಮೊದಲ ಪಂದ್ಯ ಸೋತರೂ ಈ ವಿಚಾರದಲ್ಲಿ ಟೀಮ್ ಇಂಡಿಯಾ ಗೆದ್ದಿದೆ!

ಟೀಮ್ ಇಂಡಿಯಾ ನ್ಯೂಜಿಲೆಂಡ್ ತಡದ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಸೋತಿದೆ. ಈ ಮೂಲಕ ಟಿ20 ಸರಣಿಯಲ್ಲಿ ವೈಟ್‌ವಾಶ್ ಮಾಡಿಕೊಂಡ ಹುಮ್ಮಸ್ಸಿನಲ್ಲಿದ್ದ ಟೀಮ್ ಇಂಡಿಯಾಗೆ ಶಾಕ್ ಕೊಟ್ಟಿದೆ ಕೀವಿಸ್ ತಂಡ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 0-1 ಅಂತರದಿಂದ ಹಿನ್ನೆಡೆಯಲ್ಲಿದೆ.

ಈ ಗೆಲುವು ಕೀವಿಸ್ ತಂಡಕ್ಕೆ ಸಹಜವಾಗಿಯೇ ದೊಡ್ಡ ಹುರುಪು ನೀಡಲಿದೆ. ತವರಿನಲ್ಲೇ ಸೋಲಿನ ಮೇಲೆ ಸೋಲು ಕಂಡ ನ್ಯೂಜಿಲೆಂಡ್ ತಂಡ ಈ ಗೆಲುವಿನೊಂದಿಗೆ ಪ್ರವಾಸಿಗರನ್ನು ಸರಣಿಯಲ್ಲಿ ಮಣಿಸಲು ಉತ್ಸುಕರಾಗಿದ್ದಾರೆ.

ಜಾಂಟಿ ರೋಡ್ಸ್ ರೀತಿ ಮಿಂಚಿನ ಫೀಲ್ಡಿಂಗ್ ಮಾಡಿ ಬೆರಗುಗೊಳಿಸಿದ ಕೊಹ್ಲಿ! ವೀಡಿಯೋಜಾಂಟಿ ರೋಡ್ಸ್ ರೀತಿ ಮಿಂಚಿನ ಫೀಲ್ಡಿಂಗ್ ಮಾಡಿ ಬೆರಗುಗೊಳಿಸಿದ ಕೊಹ್ಲಿ! ವೀಡಿಯೋ

ಆದರೆ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಸೋತರು ಪಂದ್ಯದಲ್ಲಿ ಸಾಕಷ್ಟು ಅಂಶಗಳು ಟೀಮ್ ಇಂಡಿಯಾ ಪರವಾಗಿತ್ತು. ಇದು ತಂಡದ ಆಟಗಾರರಲ್ಲಿ ಮುಂದಿನ ಪಂದ್ಯಕ್ಕೆ ಉತ್ಸಾಹವನ್ನು ಹೆಚ್ಚಿಸುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಹಾಗಾದರೆ ಟೀಮ್ ಇಂಡಿಯಾಗೆ ಮೊದಲ ಪಂದ್ಯದಲ್ಲಿ ಸೋತರು ಗೆದ್ದಿರುವ ವಿಚಾರಗಳೇನು ಬನ್ನಿ ನೋಡೊಣ.

ಬ್ಯಾಟಿಂಗ್‌ನಲ್ಲಿ ಯುವ ಆಟಗಾರರ ಘರ್ಜನೆ:

ಬ್ಯಾಟಿಂಗ್‌ನಲ್ಲಿ ಯುವ ಆಟಗಾರರ ಘರ್ಜನೆ:

ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಅದ್ಭುತವಾಗಿತ್ತು. ಹೊಸ ಆರಂಭಿಕರು ಕಣಕ್ಕಿಳಿದು ಮೊದಲಿಗೆ ಅರ್ಧ ಶತಕದ ಜೊತೆಯಾಟವನ್ನು ನೀಡಿದರು. ಬಳಿಕ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿ ತಂಡದ ಮೊತ್ತವನ್ನು 350ರ ಗಡಿಯ ಸಮೀಪಕ್ಕೆ ತಂದು ನಿಲ್ಲಿಸಿದರು. ಯುವ ಆಟಗಾರರ ಈ ಪ್ರದರ್ಶನ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.

ಕಾಡದ ರೋಹಿತ್ ಶರ್ಮಾ ಅನುಪಸ್ಥಿತಿ:

ಕಾಡದ ರೋಹಿತ್ ಶರ್ಮಾ ಅನುಪಸ್ಥಿತಿ:

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದಾರೆ. ಆದರೆ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದ ಪ್ರದರ್ಶನವನ್ನು ಗಮನಿಸಿದಾಗ ರೋಹಿತ್ ಶರ್ಮಾ ಅನುಪಸ್ಥಿತಿ ಕಾಡಲಿಲ್ಲ. ಅನುಭವಿ ಆಟಗಾರ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಿರಿಯರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇದು ತಂಡದ ಬೆಂಚ್ ಸ್ಟ್ರೆಂತ್ ಬಗ್ಗೆ ಸ್ಪಷ್ಟತೆ ನೀಡುತ್ತದೆ.

ನಾಲ್ಕನೇ ಕ್ರಮಾಂಕದಲ್ಲಿ ಐಯ್ಯರ್ ಭದ್ರ:

ನಾಲ್ಕನೇ ಕ್ರಮಾಂಕದಲ್ಲಿ ಐಯ್ಯರ್ ಭದ್ರ:

ಶ್ರೇಯಸ್ ಐಯ್ಯರ್ ಈಗಾಗಲೆ ನಾಲ್ಕನೇ ಸ್ಥಾನದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ಇಲ್ಲಿಯವರೂ ಐಯ್ಯರ್ ಶತಕವನ್ನು ಬಾರಿಸಿರಲಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ತನ್ನಿಂದ ಬೃಹತ್ ಮೊತ್ತವನ್ನು ಕಲೆಹಾಕಲು ಸಾಧ್ಯ ಅನ್ನುವುದನ್ನು ಸಾಬೀತುಪಡಿಸಿದ್ದಾರೆ.

ಅಂತಿಮ ಹಂತದಲ್ಲಿ ನಿಯಂತ್ರಣ:

ಅಂತಿಮ ಹಂತದಲ್ಲಿ ನಿಯಂತ್ರಣ:

ಬೌಲಿಂಗ್ ವಿಭಾಗದಲ್ಲಿ ಯಡವಟ್ಟುಗಳಾದರೂ ಅಂತಿಮ ಹಂತದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ತಿರುಗಿ ಬೀಳುವ ಮುನ್ಸೂಚನೆ ನೀಡಿದರು. ಆದರೆ ಅದಾಗಲೆ ತಡವಾಗಿತ್ತು. ಸ್ಲಾಗ್ ಓವರ್‌ಗಳಲ್ಲಿ ವಿಕೆಟ್ ಪಡೆದು ಕಟ್ಟಿಹಾಕುವ ಕಲೆ ಭಾರತೀಯ ಬೌಲರ್‌ಗಳು ರೂಢಿಸಿಕೊಂಡಿರುವುದು ಟೀಮ್ ಇಂಡಿಯಾ ಪಾಲಿಗೆ ಆಶಾದಾಯಕ ಬೆಳವಣಿಗೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, February 6, 2020, 18:23 [IST]
Other articles published on Feb 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X