ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ರಾವಿಡ್ ಮೆಚ್ಚಿದ ಅಫ್ಘಾನಿಸ್ತಾನ 14ರ ಪೋರ ನೂರ್ ಐಪಿಎಲ್‌ಗೆ ಎಂಟ್ರಿ

Exclusive: After impressing Dravid, Afghanistans 14-year-old prodigy Noor Ahmad hopes to get IPL 2020 call


ನೂರ್ ಅಹ್ಮದ್ ಲಕನ್ವಾಲ್ ಎಂಬಾತನ ಹೆಸರನ್ನು ನೀವು ಇನ್ನೂ ಕೇಳಿರದೆ ಇರಬಹುದು. ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಕೇವಲ 14 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ಆಗಿರುವ ಈತ ಈಗಾಗಲೇ ಸಾಕಷ್ಟು ವಿಕೆಟ್‌ಗಳನ್ನು ಕಬಳಿಸಿ ದೊಡ್ಡ ಸಾಧನೆಯತ್ತ ಮುನ್ನುಗ್ಗುವ ಎಲ್ಲ ಲಕ್ಷಣಗಳನ್ನು ತೋರ್ಪಡಿಸಿದ್ದಾನೆ.

ತನ್ನ ಅದ್ಭುತ ಆಟದ ಪ್ರದರ್ಶನದ ನಂತರ ರಾಜಸ್ಥಾನ ರಾಯಲ್ಸ್ ತಂಡವು ಈಗಾಗಲೇ ಈತನ ಟ್ರಯಲ್ಸ್ ತೆಗೆದುಕೊಂಡಿದೆ. 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಾಗೂ 19 ವರ್ಷದೊಳಗಿನವರ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಈ ಪೋರ ದಿಗ್ಗಜ ಬ್ಯಾಟ್ಸಮನ್ ರಾಹುಲ್ ದ್ರಾವಿಡ್‌ರನ್ನು ಬೆರಗುಗೊಳಿಸಿದ್ದಾನೆ ಎಂದರೆ ಈತನ ಪ್ರತಿಭೆಯ ಅರಿವು ನಿಮಗಾಗಿರಬಹುದು.

2020ರ ಐಪಿಎಲ್ ಹರಾಜು ಪಟ್ಟಿಯಲ್ಲಿ ಕೂಡ ಈತನ ಈಗಾಗಲೇ ತನ್ನ ಹೆಸರು ಖಾತ್ರಿ ಪಡಿಸಿಕೊಂಡಿದ್ದಾನೆ. ಕೇವಲ 14 ವರ್ಷ ವಯಸ್ಸಿನ ಈ ಆಟಗಾರ ಐಪಿಎಲ್ ಆಕ್ಷನ್ ಪಟ್ಟಿಯ ಅತಿ ಕಿರಿಯ ಆಟಗಾರನಾಗಿರುವುದು ಮತ್ತೊಂದು ವಿಶೇಷ. ಗುರುವಾರ (ಡಿ.19) ರಂದು ಕೋಲ್ಕತಾದಲ್ಲಿ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಪ್ರತಿಷ್ಠಿತ ತಂಡಗಳು ನೂರ್ ಅಹ್ಮದ್‌ಗಾಗಿ ಬಿಡ್ ಮಾಡುವ ಎಲ್ಲ ಸಾಧ್ಯತೆಗಳಿವೆ.

ಈ ಪ್ರತಿಭಾವಂತ ಆಟಗಾಯ ಮೈಖೇಲ್‌ನೊಂದಿಗೆ ಇತ್ತೀಚೆಗೆ ಸಂವಾದ ನಡೆಸಿದ ಸಂದರ್ಭದಲ್ಲಿ, ’ಐಪಿಎಲ್ ಹರಾಜು ಪಟ್ಟಿಯಲ್ಲಿ ಹೆಸರು ದಾಖಲಿಸಿರುವುದು ನನ್ನ ಜೀವನದ ಮೈಲುಗಲ್ಲುಗಳಲ್ಲೊಂದಾಗಿದ್ದು, ಇದು ನನ್ನ ಮುಂದಿನ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಕೊಡಲಿದೆ.’ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.


ನೂರ್ ಅಹ್ಮದ್ ಲಕನ್ವಾಲ್ ಅವರೊಂದಿಗೆ ಮೈಖೇಲ್ ನಡೆಸಿದ ಸಂವಾದದ ಸಂಪೂರ್ಣ ವಿವರ ಇಲ್ಲಿದೆ:

ಪ್ರಶ್ನೆ: 2019 ರಲ್ಲಿನ 19 ವರ್ಷದೊಳಗಿನವರ ಏಶಿಯಾ ಕಪ್ ಪಂದ್ಯಾವಳಿಯಲ್ಲಿನ ನಿಮ್ಮ ಅನುಭವ ಹೇಗಿತ್ತು? ಈ ಸಂದರ್ಭದಲ್ಲಿ ನೀವು ಭಾರತದ 4 ವಿಕೆಟ್‌ಗಳನ್ನು ಕಬಳಿಸಿದ್ದಿರಿ...!

ಉತ್ತರ: ಒಂದೇ ಪಂದ್ಯದಲ್ಲಿ ಅತಿ ಕಡಿಮೆ ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದು ನಿಜವಾಗಿಯೂ ನನ್ನ ಪಾಲಿಗೆ ಅವಿಸ್ಮರಣೀಯ. ಅದರಲ್ಲೂ ಭಾರತದ ಅತ್ಯುತ್ತಮ ಆಟಗಾರರ ವಿಕೆಟ್ ಪಡೆದಿದ್ದು ತುಂಬಾ ಹೆಮ್ಮೆ ಅನಿಸುತ್ತದೆ.

ಪ್ರಶ್ನೆ: ಕಳೆದ ತಿಂಗಳು ಅಫ್ಘಾನಿಸ್ತಾನದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಸದಸ್ಯರಾಗಿ ತಾವು ಭಾರತ ಪ್ರವಾಸ ಕೈಗೊಂಡಿದ್ದಿರಿ. ಭಾರತದಂಥ ಬಲಿಷ್ಠ ತಂಡದ ವಿರುದ್ಧ ಆಡಿದ್ದು ಹೇಗನ್ನಿಸಿತು? ಹೊಸದೇನಾದರೂ ಕಲಿಯಲು ಸಿಕ್ಕಿತಾ?

ಉತ್ತರ: ಭಾರತದ 19 ವರ್ಷದೊಳಗಿನವರ ಕ್ರಿಕೆಟ್ ತಂಡ ಜಗತ್ತಿನಲ್ಲೇ ಅತ್ಯುತ್ತಮ ತಂಡವಾಗಿದೆ. ಅತ್ಯುತ್ತಮ ಬ್ಯಾಟ್ಸಮನ್‌ಗಳಿಂದ ತುಂಬಿರುವ ಇಂಥ ಮಹಾನ್ ತಂಡದ ವಿರುದ್ಧ ಆಡಿದ್ದು ನನಗೆ ಸಾಕಷ್ಟು ಹೊಸ ವಿಷಯಗಳನ್ನು ಕಲಿಯಲು ಖಂಡಿತವಾಗಿಯೂ ನೆರವಾಗಿದೆ.


ಪ್ರಶ್ನೆ: ಸ್ಪಿನ್ ಆಡುವುದರಲ್ಲಿ ಪಳಗಿರುವ ಭಾರತದ ಬ್ಯಾಟ್ಸಮನ್‌ಗಳ ವಿರುದ್ಧ ಬೌಲಿಂಗ್ ಮಾಡಿದ್ದು ಹೇಗನ್ನಿಸಿತು?

ಉತ್ತರ: ಹೌದು. ಭಾರತೀಯ ಬ್ಯಾಟ್ಸಮನ್‌ಗಳು ಶ್ರೇಷ್ಠ ಆಟವಾಡುತ್ತಾರೆ. ಅಂಥ ತಂಡ ವಿರುದ್ಧ ಬೌಲಿಂಗ್ ಮಾಡಿ ಉತ್ತಮ ಪ್ರದರ್ಶನ ತೋರಿದ್ದು ನನಗೆ ಹೆಮ್ಮೆಯ ವಿಷಯವಾಗಿದೆ. ನನ್ನ ಬೌಲಿಂಗ್ ಎದುರಿಸಲು ಅವರು ತಿಣುಕಾಡಿದ್ದನ್ನು ಜಗತ್ತು ನೋಡಿದೆ ಅವತ್ತು!


ಪ್ರಶ್ನೆ: ಐಪಿಎಲ್‌ನಲ್ಲಿ ಆಡಲು ತಾವು ಎಷ್ಟು ಉತ್ಸುಕರಾಗಿರುವಿರಿ? ಐಪಿಎಲ್‌ನಲ್ಲಿ ಆಡುವುದರಿಂದ ನಿಮ್ಮ ಭವಿಷ್ಯಕ್ಕೆ ಸಹಾಯವಾಗುತ್ತದೆ ಎನಿಸುತ್ತದೆಯಾ?

ಉತ್ತರ: ಜಗತ್ತಿನಲ್ಲೇ ನಂ.1 ಲೀಗ್ ಟೂರ್ನಮೆಂಟ್ ಆಗಿರುವ ಐಪಿಎಲ್‌ನಲ್ಲಿ ಆಡುವುದು ನನ್ನ ಬಹುದಿನಗಳ ಕನಸು ನನಸಾದಂತೆಯೇ ಸರಿ. ಜಗತ್ತಿನ ಉನ್ನತ ಕ್ರಮಾಂಕದ ಆಟಗಾರರೊಂದಿಗೆ ಆಡುವುದು ಖಂಡಿತವಾಗಿಯೂ ನನಗೆ ಸಾಕಷ್ಟು ಹೊಸತನ್ನು ಕಲಿಯುವ ಅವಕಾಶ ನೀಡಲಿದ್ದು, ಇದು ನನ್ನ ಭವಿಷ್ಯಕ್ಕೆ ಪೂರಕವಾಗಿರಲಿದೆ ಎಂದು ಭಾವಿಸಿದ್ದೇನೆ.


-ರಾಜಸ್ಥಾನ ರಾಯಲ್ಸ್ ಎದುರು ಟ್ರಯಲ್ಸ್ ಎದುರಿಸಿದ್ದು ಹೇಗಿತ್ತು?

ಅಂದಿನ ಅನುಭವ ತುಂಬಾ ಚೆನ್ನಾಗಿತ್ತು. ನನಗೆ ತಿಳಿದ ಮಟ್ಟಿಗೆ ಅವತ್ತು ನಾನು ಅದ್ಭುತ ಬೌಲಿಂಗ್ ಅನ್ನು ಪ್ರದರ್ಶಿಸಿದ್ದೇನೆ.


-19 ವರ್ಷದೊಳಗಿನವರ ಪಂದ್ಯಾವಳಿಯ ಪ್ರವಾಸದ ಸಂದರ್ಭದಲ್ಲಿ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಅಥವಾ ಭಾರತದ ಇನ್ನೂ ಕೆಲ ಖ್ಯಾತ ಕ್ರಿಕೆಟಿಗರನ್ನು ಭೇಟಿಯಾಗಿರಬಹುದಲ್ಲ?

ರಾಹುಲ್ ದ್ರಾವಿಡ್ ಅವರು ನನ್ನ ಬೌಲಿಂಗ್ ಅನ್ನು ವಿಶೇಷವಾಗಿ ಗಮನಿಸಿದ್ದು, ತುಂಬಾ ಮೆಚ್ಚಿಕೊಂಡರು. ಅವರ ಮೆಚ್ಚುಗೆ ನನಗೆ ಸಾಕಷ್ಟು ಸ್ಫೂರ್ತಿಯನ್ನು ನೀಡಿತು. ಅಂಥ ಮಹಾನ್ ಕ್ರಿಕೆಟಿಗರೊಬ್ಬರು ನಿಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದಾಗ ಖಂಡಿತವಾಗಿಯೂ ಆತ್ಮವಿಶ್ವಾಸ ಪುಟಿದೇಳುತ್ತದೆ.


-ನಿಮ್ಮ ಮೆಚ್ಚಿನ ಆಟಗಾರ ಯಾರು?

ರಶೀದ ಖಾನ್ ನನ್ನ ಅಚ್ಚುಮೆಚ್ಚಿನ ಆಟಗಾರರಾಗಿದ್ದಾರೆ. ಇನ್ನು ಟಿ20 ಯಲ್ಲಿ ಜೊತೆಗೆ ಆಟವಾಡಿದ ಮೊಹಮ್ಮದ ನಬಿ ಅವರ ಆಟವೂ ನನಗಿಷ್ಟ.


-ನೀವು ಕ್ರಿಕೆಟ್ ರಂಗಕ್ಕೆ ಬಂದದ್ದು ಹೇಗೆ? ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಕ್ಷೇತ್ರ ಹೇಗಿದೆ?

ನಾನು ಚಿಕ್ಕವನಾಗಿದ್ದಾಗಿಂದಲೂ ಕ್ರಿಕೆಟ್ ನೋಡುತ್ತ, ಕುಟುಂಬ ಸದಸ್ಯರೊಂದಿಗೆ ಕ್ರಿಕೆಟ್ ಆಡುತ್ತಲೇ ಬೆಳೆದಿದ್ದೇನೆ. ನಾನು ನಿರಂತರವಾಗಿ ರಶೀದ್ ಖಾನ್ ಅವರಂತೆ ಬೌಲಿಂಗ್ ಮಾಡಲು ಪ್ರಯತ್ನಿಸಿದ್ದೇನೆ. ಅವರು ಬಲಗೈ ಬೌಲರ್ ಆದರೆ ನಾನು ಎಡಗೈ ಬೌಲರ್ ಆಗಿರುವುದು ಮಾತ್ರ ನಮ್ಮಿಬ್ಬರ ಮಧ್ಯದ ವ್ಯತ್ಯಾಸ. ಗೂಗ್ಲಿ ಹಾಗೂ ಲೆಗ್ ಬ್ರೆಕ್‌ಗಳನ್ನು ಸಾಕಷ್ಟು ಪ್ರಯತ್ನದ ನಂತರ ಕಲಿತುಕೊಂಡಿದ್ದೇನೆ. ಈಗ ನನ್ನ ಬೌಲಿಂಗ್ ಸಾಕಷ್ಟು ಪರಿಣಾಮಕಾರಿಯಾಗಿದೆ.


-ರಶೀದ್ ಖಾನ್, ನಬಿ, ಮುಜೀಬುರ್ ರಹಮಾನ್ ಮುಂತಾದ ಅಫ್ಘಾನಿಸ್ತಾನ ಆಟಗಾರರು ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಂದ ನಿಮಗೆ ಮಾರ್ಗದರ್ಶನವೇನಾದರೂ ಸಿಕ್ಕಿದೆಯಾ?

ರಶೀದ್, ನಬಿ ಸೇರಿದಂತೆ ಅಫ್ಘಾನಿಸ್ತಾನದ ಹಲವಾರು ಖ್ಯಾತ ಆಟಗಾರರೊಂದಿಗೆ ನಾನು ಮಾತನಾಡಿದ್ದೇನೆ. ಅವರೆಲ್ಲರೂ ನನಗೆ ಮಾರ್ಗದರ್ಶನ ಮಾಡಿ, ಉತ್ತಮ ಆಟವಾಡುವಂತೆ ಪ್ರೋತ್ಸಾಹ ನೀಡಿದ್ದಾರೆ. ಅವರೊಂದಿಗಿನ ಒಡನಾಟ ನನಗೆ ಬಹಳೇ ಉಪಯೋಗವಾಗಿದೆ.

Story first published: Wednesday, December 18, 2019, 11:44 [IST]
Other articles published on Dec 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X