ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿದಾಹಸ್ ಟ್ರೋಫಿಯಲ್ಲಿ ನಾಯಕನ ನಿರ್ಧಾರಕ್ಕೆ ಸಿಟ್ಟಾಗಿದ್ದರಂತೆ ದಿನೇಶ್ ಕಾರ್ತಿಕ್!

 Felt angry when Vijay Shankar was sent ahead in Nidahas Trophy final says Dinesh Karthik

ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುತ್ತಿರುವ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾವನ್ನು ದಶಕಗಳಿಗೂ ಹೆಚ್ಚು ಕಾಲ ಪ್ರತಿನಿಧಿಸುತ್ತಿದ್ದಾರೆ. ಅದರಲ್ಲಿ 2018ರ ಬಾಂಗ್ಲಾದೇಶದ ವಿರುದ್ದ ನಡೆದ ನಿದಾಹಸ್ ಟ್ರೊಫಿಯಲ್ಲಿ ನೀಡಿದ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳಿಗೆ ಸುದೀರ್ಘ ಕಾಲ ನೆನಪಿನಲ್ಲಿರುವ ಇನ್ನಿಂಗ್ಸ್. ಎರಡು ಓವರ್‌ಗಳಲ್ಲಿ 34 ರನ್ ಗಳಿಸುವ ಸಂದರ್ಭದಲ್ಲಿ ಕಾರ್ತಿಕ್ ತೋರಿದ ಪ್ರದರ್ಶನದಿಂದಾಗಿ ಭಾರತ ಗೆದ್ದು ಬೀಗಿತ್ತು.

ರುಬೆಲ್ ಹುಸೈನ್ ಎಸೆದ ಅಂತಿಮ ಓವರ್‌ನಲ್ಲಿ 22 ರನ್ ಗಳಿಸಿದ ಜೊತೆಗೆ ಅಂತಿಮ ಎಸೆತದಲ್ಲಿ 5 ರನ್‌ಗಳ ಅಗತ್ಯವಿದ್ದಾಗ ಸಿಕ್ಸರ್ ಸಿಡಿಸಿ ರೋಚಕ ಗೆಲುವಿಗೆ ಕಾರಣರಾಗಿದ್ದರು ದಿನೇಶ್ ಕಾರ್ತಿಕ್. ಆದರೆ ಈ ಪಂದ್ಯದಲ್ಲಿ ತನಗೂ ಮೊದಲು ಆಲ್‌ರೌಂಡರ್ ವಿಜಯ್ ಶಂಕರ್ ಅವರನ್ನು ಕಣಕ್ಕಿಳಿಸಿದ್ದು ಅಸಮಾಧಾನದ ಜೊತೆಗೆ ಕೋಪವನ್ನು ತರಿಸಿತ್ತು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

 ಐಪಿಎಲ್ 2020: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಸವಾಲು ಐಪಿಎಲ್ 2020: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಸವಾಲು

"ಆರಂಭದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಾನು ಸಿದ್ಧನಾಗಿದ್ದೆ. ಆಗ ನಾಯಕನಾಗಿದ್ದ ರೋಹಿತ್ ಶರ್ಮಾ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಸೂಚಿಸಿದ್ದರು. ಅದಕ್ಕೆ ನಾನು ಸಮ್ಮತಿಸಿದ್ದೆ. ಆದರೆ ಆಗ ರನ್‌ ಹಾಗೂ ಎಸೆತಗಳ ನಡುವಿನ ಅಂತರ ಹೆಚ್ಚಾಗುತ್ತಿರುವುದು ಗಮನಿಸಿದ್ದೆ"

'ಯಾವಾಗ ನಾಲ್ಕನೇ ವಿಕೆಟ್ ಉರುಳಿತ್ತೋ ಆಗ ನಾನು ಬ್ಯಾಟಿಂಗ್‌ಗೆ ಇಳಿಯಲು ಸಜ್ಜಾದೆ. ಆದರೆ ನಾಯಕ ರೋಹಿತ್ ಶರ್ಮಾ ವಿಜಯ್ ಶಂಕರ್ ಬ್ಯಾಟಿಂಗ್‌ಗೆ ಇಳಿಯಲಿ ಎಂದು ಸೂಚಿಸಿದರು. ಆ ಕ್ಷಣದಲ್ಲಿ ನಾನು ಅಸಮಾಧಾನಗೊಂಡೆ ಹಾಗೂ ಸಿಟ್ಟಾಗಿದ್ದೆ. ಆದರೆ ನಾಯಕನ ನಿರ್ಧಾರವನ್ನು ಖಂಡಿತಾ ನಾನು ಪ್ರಶ್ನಿಸಲಿಲ್ಲ. ಯಾಕೆಂದರೆ ನಾಯಕನಾಗಿ ಆತನ ತಲೆಯಲ್ಲಿ ಏನೋ ಯೋಚನೆಗಳು ಇರುತ್ತವೆ ಎಂಬುದು ಗೊತ್ತಿತ್ತು. ಹಾಗಾಗಿ ಅದನ್ನು ಅಲ್ಲಿಗೇ ಬಿಟ್ಟೆ. ಕೊನೆಗೆ ಏಳನೇ ಕ್ರಮಾಂಕದಲ್ಲಿ ನಾನು ಬ್ಯಾಟಿಂಗ್‌ಗೆ ಇಳಿದಿದ್ದೆ' ಎಂದು ದಿನೇಶ್ ಕಾರ್ತಿಕ್ ನೆನಪಿಸಿಕೊಂಡಿದ್ದಾರೆ.

ಈ ಬಣ್ಣದ ಶೂ ಇಲ್ಲದೆ ಕೊಹ್ಲಿಗೆ ಬ್ಯಾಟಿಂಗ್‌ ಮಾಡಲು ಇಷ್ಟವಿಲ್ಲ!ಈ ಬಣ್ಣದ ಶೂ ಇಲ್ಲದೆ ಕೊಹ್ಲಿಗೆ ಬ್ಯಾಟಿಂಗ್‌ ಮಾಡಲು ಇಷ್ಟವಿಲ್ಲ!

1 ಓವರ್‌ನಲ್ಲಿ 12 ರನ್ 2 ಓವರ್‌ನಲ್ಲಿ 20 ರನ್ ತೆಗೆಯುವ ಸವಾಲನ್ನು ಮುಂದಿಟ್ಟುಕೊಂಡು ಅಭ್ಯಾಸವನ್ನು ನಡೆಸಿದ್ದೆ. ಆದರೆ 2 ಓವರ್‌ಗಳಲ್ಲಿ 34 ರನ್‌ಗಳ ಸವಾಲನ್ನು ಇಟ್ಟು ಅಭ್ಯಾಸವನ್ನು ನಡೆಸಿಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದ ದಿನೇಶ್ ಕಾರ್ತಿಕ್ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Friday, October 16, 2020, 10:16 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X