ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲ್ಯಾಂಡ್ ಮಾಜಿ ಕ್ರಿಕೆಟರ್ ಹೇಳಿದ 'ಆಲ್ ಟೈಮ್ ಬೆಸ್ಟ್ ಕ್ಯಾಪ್ಟನ್'

Former New Zealand All Rounder Scott Styris Names Stephen Fleming The Best Captain He Come Across

ನ್ಯೂಜಿಲ್ಯಾಂಡ್ ತಂಡದ ಮಾಜಿ ಅಲ್ರೌಂಡರ್ ಸ್ಕಾಟ್ ಸ್ಟೈರಿಸ್, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದುವರೆಗೆ ತಾನು ಕಂಡ ಅತ್ಯುತ್ತಮ ನಾಯಕ ಯಾರು ಎನ್ನುವುದನ್ನು ಹೇಳಿದ್ದಾರೆ. ಸ್ಟೈರಿಸ್ ಪ್ರಕಾರ, ಹಾಲೀ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್, ಮಾಜಿ ಕಿವೀಸ್ ತಂಡದ ನಾಯಕ ಸ್ಟೀಫನ್ ಫ್ಲೆಮಿಂಗ್ ಉತ್ತಮ ನಾಯಕ.

ಇದುವರೆಗಿನ ಐಪಿಎಲ್ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಿರಾಶಾದಾಯಕ ಪ್ರದರ್ಶನದಿಂದಾಗಿ ತೀವ್ರ ಟೀಕೆಗೆ ಗುರಿಯಾಗುತ್ತಿರುವ ಫ್ಲೆಮ್ಮಿಂಗ್ ಪರವಾಗಿ ಬ್ಯಾಟ್ ಬೀಸಿರುವ ಸ್ಟೈರಿಸ್, "ನಾಯಕನಾಗಿ ಹೇಗೆ ತಂಡವನ್ನು ಮುನ್ನಡೆಸುತ್ತಿದ್ದರೋ, ಕೋಚ್ ಆಗಿಯೂ ಅಷ್ಟೇ ಕಠಿಣ ಶ್ರಮ ಪಡುತ್ತಿದ್ದಾರೆ"ಎಂದು ಹೇಳಿದ್ದಾರೆ.

ಬ್ರಾವೋ, ಜಡೇಜಾಗೂ ಮುನ್ನ ಕೇದಾರ್ ಜಾಧವ್ ಬ್ಯಾಟಿಂಗ್ ಕಳಿಸಿದ್ದಕ್ಕೆ ಕಾರಣ ನೀಡಿದ ಕೋಚ್ಬ್ರಾವೋ, ಜಡೇಜಾಗೂ ಮುನ್ನ ಕೇದಾರ್ ಜಾಧವ್ ಬ್ಯಾಟಿಂಗ್ ಕಳಿಸಿದ್ದಕ್ಕೆ ಕಾರಣ ನೀಡಿದ ಕೋಚ್

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಫ್ಲೆಮ್ಮಿಂಗ್ ಜೊತೆ ಮತ್ತು ಅವರ ನಾಯಕತ್ವದಡಿಯಲ್ಲಿ ಹಲವು ಪಂದ್ಯಗಳನ್ನು ಆಡಿರುವ ಸ್ಟೈರಿಸ್, "ನಾನು ಕಂಡಂತೆ ಫ್ಲೆಮ್ಮಿಂಗ್ ಅತ್ಯುತ್ತಮ ನಾಯಕ. "ಈ ಹಿಂದೆಯೂ ಹಲವು ಬಾರಿ ಹೀಗಾಗಿತ್ತು. ಫ್ಲೆಮ್ಮಿಂಗ್ ಯಾಕೆ ಮುಂಗೋಪಕ್ಕೆ ಒಳಗಾಗುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ"ಎಂದು ಸ್ಟೈರಿಸ್ ಹೇಳಿದ್ದಾರೆ.

"ಕ್ರೀಡೆ ಎಂದ ಮೇಲೆ ಸೋಲು ಗೆಲುವು ಇದ್ದೇ ಇರುತ್ತದೆ. ಕಳೆದ ಐಪಿಎಲ್ ಪಂದ್ಯ ಸೋತ ನಂತರ, ಮಾಧ್ಯಮದವರು ಕೇಳಿದ ಪ್ರಶ್ನೆ, ಫ್ಲೆಮ್ಮಿಂಗ್ ಅವರನ್ನು ಬೇಸರಕ್ಕೆ ದೂಡಿರಬಹುದು"ಎಂದು ಸ್ಕಾಟ್ ಸ್ಟೈರಿಸ್ ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್ 2020: ಐಪಿಎಲ್ 2020: "ಎಲ್ಲಾ ತಪ್ಪುಗಳಿಗೂ ಧೋನಿಯನ್ನು ಹೊಣೆ ಮಾಡುವುದು ಸರಿಯಲ್ಲ"

2008ರಲ್ಲಿ ಐಪಿಎಲ್ ಕ್ರೀಡಾಕೂಟ ಆರಂಭವಾದಾಗ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದ ಫ್ಲೆಮ್ಮಿಂಗ್, ಹತ್ತು ಪಂದ್ಯಗಳನ್ನಾಡಿ 196ರನ್ ಗಳಿಸಿದ್ದರು. 2009ರಲ್ಲಿ ಆಟಗಾರನಾಗಿ ನಿವೃತ್ತಿ ಹೊಂದಿದ ಫ್ಲೆಮ್ಮಿಂಗ್, ನಂತರ ಸಿಎಸ್ಕೆ ತಂಡದ ಕೋಚ್ ಆದರು.

111 ಟೆಸ್ಟ್, 280 ಏಕದಿನ ಪಂದ್ಯವನ್ನು ಆಡಿರುವ ಫ್ಲೆಮ್ಮಿಂಗ್, ಒಟ್ಟಾರೆಯಾಗಿ 15,209ರನ್ ಗಳನ್ನು ಹೊಡೆದಿದ್ದಾರೆ. ಇದರಲ್ಲಿ ಹದಿನೇಳು ಶತಕ, 95 ಅರ್ಧಶತಕ ಸೇರಿದೆ.

Story first published: Saturday, October 10, 2020, 10:02 [IST]
Other articles published on Oct 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X