ಟೀಂ ಇಂಡಿಯಾದ ವೇಗಿ ಸರಳತೆ ಮಾರು ಹೋದ ಫ್ಯಾನ್ಸ್!

Posted By:
From jet to Mumbai local, Shardul Thakur remains grounded

ಮುಂಬೈ, ಮಾರ್ಚ್ 03: ಇತ್ತೀಚೆಗೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಿದ್ದ ಭಾರತದ ವೇಗಿ ಶಾರ್ದೂಲ್ ಠಾಕೂರ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಟೀಂ ಇಂಡಿಯಾದ ಆಟಗಾರರು ಹೀಗೂ ಇರುತ್ತಾರಾ ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸರಳ ವ್ಯಕ್ತಿತ್ವಕ್ಕೆ ಇನ್ನೊಂದು ಹೆಸರಾಗಿರುವ ರಾಹುಲ್ ದ್ರಾವಿಡ್ ಅವರ ಬಗ್ಗೆ ಎಲ್ಲರಿಗೂ ಗೊತ್ತು. ಈಗ ಭಾರತ ತಂಡದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರು ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿ ಮುಗಿಸಿಕೊಂಡು ತವರಿಗೆ ಬಂದಿಳಿದ ಶಾರ್ದೂಲ್ ಅವರು ಮುಂಬೈನ ಲೋಕಲ್ ಟ್ರೈನ್ ಹಿಡಿದು ಮನೆಗೆ ಪ್ರಯಾಣ ಮಾಡಿದ್ದಾರೆ. ವಿಮಾನ ಪ್ರಯಾಣದ ನಂತರ ಶಾರ್ದೂಲ್ ಅವರು ಸ್ಥಳೀಯ ರೈಲು ಹತ್ತಿ ಅಂಧೇರಿ ತಲುಪಿದ್ದಾರೆ.

ಅಂಧೇರಿಯಿಂದ ನಂತರ ಪಾಲ್ಘಾರ್ ಗೆ ಪ್ರಯಾಣ ಮಾಡಿದೆ. ಬಿಸಿನೆಸ್ ಕ್ಲಾಸ್ ನಿಂದ ಫಸ್ಟ್ ಕ್ಲಾಸಿಗೆ ಬಂದೆ. ಬೋಗಿಯಲ್ಲಿದ್ದವರಿಗೆಲ್ಲ ನಾನೇ 'ಶಾರ್ದೂಲ್ ಠಾಕೂರ್' ಹೌದಾ? ಅಲ್ಲವಾ? ಎಂದು ಅಚ್ಚರಿಯಿಂದ ನೋಡುತ್ತಿದ್ದರು. ನಾನು ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಿದ್ದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೆಲ ಕಾಲೇಜ್ ಹುಡುಗರು, ಗೂಗಲ್ ನಲ್ಲಿ ನನ್ನ ಫೋಟೋ ಕೂಡ ಸರ್ಚ್ ಮಾಡಿ ನಾನೇ ಶಾರ್ದೂಲ್ ಹೌದು ಖಚಿತಪಡಿಸಿಕೊಂಡು ನಂತರ ಸೆಲ್ಫಿ ತೆಗೆದುಕೊಂಡರು. ಪಾಲ್ಘಾರ್ ನಿಲ್ದಾಣ ಬರುವ ತನಕ ಕಾಯುವಂತೆ ಹೇಳಿ ನಂತರ ಫೋಟೊ ತೆಗೆಸಿಕೊಂಡೆ.

'ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಮಾತ್ರಕ್ಕೆ ನಾನು ಪಟ್ಟ ಕಷ್ಟವನ್ನೆಲ್ಲಾ ಮರೆತಿಲ್ಲ, ಸರಳವಾಗಿ ಬದುಕಲು ಇಷ್ಟ. ಲೋಕಲ್ ಟ್ರೈನ್ ನಲ್ಲಿ ಪ್ರಯಾಣ ಇಷ್ಟ, ಕೆಲವರಿಗೆ ಇದು ಹೊಸದೆನಿಸಬಹುದು. ಆದರೆ, ನನ್ನ ಬಗ್ಗೆ ತಿಳಿದವರಿಗೆ ಇದು ಸಾಮಾನ್ಯ ಸಂಗತಿ' ಎಂದು ಶಾರ್ದೂಲ್ ಹೇಳಿದ್ದಾರೆ.

Story first published: Saturday, March 3, 2018, 17:50 [IST]
Other articles published on Mar 3, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ