ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗನನ್ನು ಟೀಮ್ ಇಂಡಿಯಾದ 'ಬೆಸ್ಟ್ ಕ್ಯಾಪ್ಟನ್' ಎಂದ ಗೌತಮ್ ಗಂಭೀರ್

Gambhir Says Kumble Best Captain I Have Played Under

ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆಗಳೂ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಆಟಗಾರರು ಮಾಜಿ ಆಟಗಾರರು ಸಂವಾದಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನೂ ಅಭಿಮಾನಿಗಳ ಮುಂದೆ ಹೇಳುತ್ತಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಾಯಕ ಯಾರು ಎಂಬುದನ್ನು ಅವರು ಹೆಸರಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಿಗ ಕ್ರಿಕೆಟಿಗನನ್ನು ತನ್ನ ನೆಚ್ಚಿನ ನಾಯಕ ಎಂದು ಹೇಳಿಕೊಂಡಿದ್ದಾರೆ. ಮತ್ತು ಅದಕ್ಕೆ ಅವರು ಕಾರಣಗಳನ್ನೂ ನೀಡಿದ್ದಾರೆ.

ಗೌತಮ್ ಗಂಭೀರ್ ಪ್ರಕಾರ ಟೀಮ್ ಇಂಡಿಯಾದ ಅತ್ಯುತ್ತಮ ನಾಯಕ ಯಾರು? ಗಂಭೀರ್ ಈ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ..

ಗಂಭೀರ್ ಹೇಳಿದ ಬೆಸ್ಟ್ ನಾಯಕ ಯಾರು

ಗಂಭೀರ್ ಹೇಳಿದ ಬೆಸ್ಟ್ ನಾಯಕ ಯಾರು

ಗೌತಮ್ ಗಂಭೀರ್ ಹೇಳಿದ ಬೆಸ್ಟ್ ಕ್ಯಾಪ್ಟನ್ ಬೇರೆ ಯಾರೂ ಅಲ್ಲ. ಅದು ಕನ್ನಡಿಗ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ. ತಾನು ಆಡಿದ ನಾಯಕರ ಪೈಕಿ ಅನಿಲ್ ಕುಂಬ್ಳೆ ಅತ್ಯುತ್ತಮ ನಾಯಕ ಎನಿಸಿಕೊಳ್ಳುತ್ತಾರೆ ಎಂದು ಗಂಭೀರ್ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಎಲ್ಲಾ ದಾಖಲೆಗಳನ್ನು ಮುರಿಯುತ್ತಿದ್ದರು

ಎಲ್ಲಾ ದಾಖಲೆಗಳನ್ನು ಮುರಿಯುತ್ತಿದ್ದರು

ನಾಯಕನಾಗಿ ಇನ್ನೂ ಹೆಚ್ಚಿನ ಅವಕಾಶ ಅನಿಲ್ ಕುಂಬ್ಳೆಗೆ ದೊರೆಯಬೇಕಿತ್ತು. ಹಾಗಾಗಿದ್ದಲ್ಲಿ ನಾಯಕತ್ವದ ಎಲ್ಲಾ ದಾಖಲೆಗಳನ್ನು ಅನಿಲ್ ಕುಂಬ್ಳೆ ತಮ್ಮ ಹೆಸರಿನಲ್ಲಿ ಬರೆಯುತ್ತಿದ್ದರು, ಅವರು ಹೆಚ್ಚಿನ ಕಾಲ ನಾಯಕನಾಗಿರಬೇಕಿತ್ತು ಎಂದು ಬಯಸುತ್ತೇನೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ದ್ರಾವಿಡ್ ಬಳಿಕ ನಾಯಕತ್ವ ವಹಿಸಿಕೊಂಡ ಕುಂಬ್ಳೆ

ದ್ರಾವಿಡ್ ಬಳಿಕ ನಾಯಕತ್ವ ವಹಿಸಿಕೊಂಡ ಕುಂಬ್ಳೆ

2007ರಲ್ಲಿ ರಾಹುಲ್ ದ್ರಾವಿಡ್ ಎಲ್ಲಾ ಮಾದರಿಯ ನಾಯಕತ್ವಕ್ಕೂ ಗುಡ್ ಬೈ ಹೇಳಿದ ಬಳಿಕ ಸೀಮಿತ ಕ್ರಿಕೆಟ್‌ಗೆ ಧೋನಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟನ್ನು ಮುನ್ನಡೆಸುವ ಜವಾಬ್ಧಾರಿಯನ್ನು ಕನ್ನಡಿಗ ಅನಿಲ್ ಕುಂಬ್ಳೆಗೆ ವಹಿಸಲಾಗಿತ್ತು.

ಗಂಗೂಲಿಯಿಂದ ಕೊಹ್ಲಿವರೆಗೆ

ಗಂಗೂಲಿಯಿಂದ ಕೊಹ್ಲಿವರೆಗೆ

ಗಂಭೀರ್ ಟೀಮ್ ಇಂಡಿಯಾದ ಘಟಾನುಘಟಿ ನಾಯಕರೊಂದಿಗೆ ಆಡಿದ್ದಾರೆ. ಸೌರವ್ ಗಂಗೂಲಿ ನಾಯಕನಾಗಿದ್ದಾಗ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ಗಂಭೀರ್ ಬಳಿಕ ರಾಹುಲ್ ದ್ರಾವಿಡ್ ನಾಯಕತ್ವದಲ್ಲೂ ಆಡಿದ್ದಾರೆ. ಧೋನಿ ನಾಯಕತ್ವದ ಎರಡು ವಿಶ್ವಕಪ್‌ ವಿಜೇತ ತಂಡದಲ್ಲೂ ಗಂಭೀರ್ ಇದ್ದರು. ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಟಿಮ್ ಇಂಡಿಯಾದ ಚುಕ್ಕಾಣಿ ಹಿಡಿದಾಗಲೂ ಗಂಭೀರ್ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಮರಳಿದ್ದರು. ಆದರೆ ಇವರೆಲ್ಲರಿಗಿಂತಲೂ ಟೀಮ್ ಟೆಸ್ಟ್ ನಾಯಕನಾಗಿದ್ದ ಕುಂಬ್ಳೆ ಶ್ರೇಷ್ಠ ಎಂದು ಗಂಭೀರ್ ಹೇಳಿದ್ದಾರೆ.

ದಾಖಲೆ ಪ್ರಕಾರ ಧೋನಿಯಿರಬಹುದು..

ದಾಖಲೆ ಪ್ರಕಾರ ಧೋನಿಯಿರಬಹುದು..

ಹೌದು ದಾಖಲೆಗಳನ್ನು ನೋಡುವುದಾದರೆ ಧೋನಿ ಬೆಸ್ಟ್ ಎನಿಸಬಹುದು. ಆದರೆ ನನ್ನ ಪಾಲಿನ ಬೆಸ್ಟ್ ಕ್ಯಾಪ್ಟನ್ ಅಂದ್ರೆ ಅದು ಅನಿಲ್ ಕುಂಬ್ಳೆ. ಅವರಿಗೆ ಇನ್ನೂ ಹೆಚ್ಚಿ ಅವಕಾಶ ದೊರೆತಿದ್ದರೆ ಎಲ್ಲಾ ದಾಖಲೆಗಳು ಅವರ ಹೆಸರಿನಲ್ಲಿರುತ್ತಿತ್ತು. ನಾನು ಅವರ ನಾಯಕತ್ತವದಲ್ಲಿ ಬಹುಶಃ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ ಎಂದು ನೇರ ಮಾತಿಗೆ ಹೆಸರಾದ ಗೌತಮ್ ಗಂಭೀರ್ ಹಿಂದೆ ಮುಂದೆ ಯೋಚಿಸದೆ ತಮ್ಮ ಬೆಸ್ಟ್ ನಾಯಕನ ಹೆಸರನ್ನು ಹೇಳಿದರು.

ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್

ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್

ಟೀಮ್ ಇಂಡಿಯಾ ಪರವಾಗಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲೇ ಇದೆ. ಟೆಸ್ಟ್ ಹಾಗೂ ಏಕದಿನ ಎರಡೂ ಮಾದರಿಯಲ್ಲೂ ಅನಿಲ್ ಕುಂಬ್ಳೆ ಈ ದಾಖಲೆಯನ್ನು ತಮ್ಮ ಹೆಸರಿನಲ್ಲೇ ಬರೆದುಕೊಂಡಿದ್ದಾರೆ. ಟೆಸ್ಟ್‌ನಲ್ಲಿ ಕುಂಬ್ಳೆ 619 ವಿಕೆಟ್ ಪಡೆದಿದ್ದರೆ ಏಕದಿನ ಕ್ರಿಕೆಟ್‌ನಲ್ಲಿ 337 ವಿಕೆಟ್‌ಗಳನ್ನು ತಮ್ಮ ಬತ್ತಳಿಕೆಗೆ ಹಾಕಿಕೊಂಡಿದ್ದಾರೆ.

Story first published: Wednesday, April 22, 2020, 20:24 [IST]
Other articles published on Apr 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X