ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಬರ್ ಅಜಂ ಬಗ್ಗೆ ಗಂಭೀರ ಅಪಾದನೆ ಮಾಡಿದ ಗೌತಮ್ ಗಂಭೀರ್: ಟೀಕೆಗೆ ವಾಸಿಂ ಅಕ್ರಮ್ ಪ್ರತಿಕ್ರಿಯೆ

Gautam Gambhir explosive statement on Babar Azam Pakistan Former cricketer Wasim Akram reaction

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ. ಟೂರ್ನಿಯಿಂದ ಬಾಬರ್ ಪಡೆ ಬಹುತೇಕ ಹೊರಬಿದ್ದಿದ್ದು ಸೆಮಿಫೈನಲ್‌ಗೇರುವ ಅವಕಾಶವನ್ನು ಕಳೆದುಕೊಳ್ಳುವುದು ಬಹುತೇಕ ನಿಶ್ಚಿತ ಎಂಬಂತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ಬಗ್ಗೆ ಸಾಕಷ್ಟು ವಿಮರ್ಶೆಗಳು ನಡೆಯುತ್ತಿದ್ದು ಪಾಕ್ ತಂಡದ ನಾಯಕ ಬಾಬರ್ ಅಜಂ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದೆ.

ಇನ್ನು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಬಗ್ಗೆ ಗಂಭೀರ ಟೀಕೆಯನ್ನು ಮಾಡಿದ್ದಾರೆ. ತಂಡದ ಒಳಿತಿಗಿಂತ ಬಾಬರ್ ಅಜಂ ವೈಯಕ್ತಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಗಂಭೀರವಾದ ಆಪಾದನೆ ಮಾಡಿದ್ದಾರೆ. ಗಂಭೀರ್ ಮಾಡಿರುವ ಈ ಆರೋಪಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಬಾಬರ್ ಬಗ್ಗೆ ಗಂಭೀರ ಟೀಕೆ

ಬಾಬರ್ ಬಗ್ಗೆ ಗಂಭೀರ ಟೀಕೆ

ನೆದರ್ಲೆಂಡ್ಸ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ ಕಾಮೆಂಟರಿ ಮಾಡುತ್ತಿದ್ದ ಗೌತಮ್ ಗಂಭೀರ್, ಬಾಬರ್ ಅಜಂ ಅಗ್ರ ಕ್ರಮಾಂಕದಲ್ಲಿ ಫಾಕರ್ ಜಮಾನ್ ಅವರನ್ನು ಕಣಕ್ಕಿಳಿಸದ ಬಗ್ಗೆ ಬಾಬರ್ ಅಜಂ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. "ನನ್ನ ಅಭಿಪ್ರಾಯದ ಪ್ರಕಾರ ನೀವು ನಿಮ್ಮ ಬಗ್ಗೆ ಚಿಂತಿಸುವ ಬದಲಿಗೆ ತಂಡದ ಬಗ್ಗೆ ಚಿಂತಿಸಬೇಕಾಗುತ್ತದೆ. ನಿಮ್ಮ ಯೋಜನೆಯ ಪ್ರಕಾರ ಎಲ್ಲವೂ ನಡೆದುಕೊಂಡು ಹೋಗದಿದ್ದಾಗ ಫಾಕರ್ ಜಮಾನ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕಾಗಿತ್ತು. ಇದನ್ನು ಸ್ವಾರ್ಥ ಎನ್ನಬಹುದು. ನಾಯಕನಾಗಿ ಬಾಬರ್ ಅಜಂ ಹಾಗೂ ರಿಜ್ವಾನ್ ಇನ್ನಿಂಗ್ಸ್ ಆರಂಭಿಸಿ ಹಲವು ದಾಖಲೆಗಳನ್ನು ಬರೆಯುವುದು ತುಂಬಾ ಸುಲಭ. ಆದರೆ ತಾವೋರ್ವ ನೈಜ ನಾಯಕನಾಗಿದ್ದರೆ ನಿಮ್ಮ ತಂಡದ ಬಗ್ಗೆ ನೀವು ಯೋಚನೆ ಮಾಡುತ್ತಿದ್ದಿರಿ" ಎಂದು ಗೌತಮ್ ಗಂಭೀರ್ ಅಭಿಪ್ರಾಯ ಹಂಚಿಕೊಂಡಿದ್ದರು.

ಗಂಭೀರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಕ್ರಮ್

ಗಂಭೀರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಕ್ರಮ್

ಇನ್ನು ಪಾಕಿಸ್ತಾನದ ತಂಡದ ನಾಯಕ ಬಾಬರ್ ಅಜಂ ಬಗ್ಗೆ ಗೌತಮ್ ಗಂಭೀರ್ ಮಾಡಿದ ಟೀಕೆಯ ಬಗ್ಗೆ ವಾಸಿಂ ಅಕ್ರಮ್ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನದ ಚಾನೆಲ್ ಎ ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಿದ್ದಾಗ ಅಕ್ರಮ್ ಪ್ರತಿಕ್ರಿಯಿಸಿದ್ದಾರೆ. "ಅದು ಅವರ ವೈಯಕ್ತಿಕ ಅಭಿಪ್ರಾಯ. ಗೌತನಮ್ ಗಂಭಿರ್ ಓರ್ವ ಯಶಸ್ವಿ ನಾಯಕ ಎಂದು ಐಪಿಎಲ್‌ನಲ್ಲಿ ಕರೆಸಿಕೊಂಡಿದ್ದಾರೆ. ಕೆಕೆಆರ್ ತಂಡದ ನಾಯಕನಾಗಿ ಎರಡು ಬಾರಿ ಟೂರ್ನಿ ಗೆದ್ದುಕೊಂಡಿದ್ದಾರೆ. ಅವರ ಕಾಲದಲ್ಲಿ ಅಗ್ರ ಆಟಗಾರರ ಪೈಕಿ ಅವರು ಒಬ್ಬರಾಗಿದ್ದರು. ಎಲ್ಲರಿಗೂ ಅವರವರ ಅಭಿಪ್ರಾಯವನ್ನು ಹೇಳಿಕೊಳ್ಳುವ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ. ಇದು ಅವರ ಅಭಿಪ್ರಾಯ" ಎಂದಿದ್ದಾರೆ ವಾಸಿಂ ಅಕ್ರಮ್.

ಈ ವಿಶ್ವಕಪ್‌ನಲ್ಲಿ ಬಾಬರ್ ಸಂಪೂರ್ಣ ವಿಫಲ

ಈ ವಿಶ್ವಕಪ್‌ನಲ್ಲಿ ಬಾಬರ್ ಸಂಪೂರ್ಣ ವಿಫಲ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸಂಪೂರ್ಣವಾಗಿ ವೈಫಲ್ಯವನ್ನು ಅನುಭವಿಸಿದ್ದಾರೆ. ಆದರೆ ಪಾಕಿಸ್ತಾನ ಆಡಿರುವ ಮೂರು ಪಂದ್ಯಗಳಲ್ಲಿಯೂ ಬಾಬರ್ ಎರಡಂಕಿಯನ್ನು ದಾಟುವಲ್ಲಿಯೂ ವಿಫಲವಾಗಿದ್ದಾರೆ. ಮೂರು ಪಂದ್ಯಗಳಲ್ಲಿ ಬಾಬರ್ ಒಟ್ಟು ಗಳಿಸಿರುವುದು ಕೇವಲ 8 ರನ್‌ ಮಾತ್ರ. ಇದು ಮೊದಲೇ ದುರ್ಬಲ ಎನಿಸಿಕೊಂಡಿರುವ ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಮೇಲೆ ಇನ್ನಿಲ್ಲದ ಒತ್ತಡವನ್ನುಂಟು ಮಾಡಲು ಕಾರಣವಾಗಿದೆ.

ಪಾಕಿಸ್ತಾನದ ಮುಂದಿದೆ ಕಠಿಣ ಸವಾಲು

ಪಾಕಿಸ್ತಾನದ ಮುಂದಿದೆ ಕಠಿಣ ಸವಾಲು

ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಹಂತಕ್ಕೇರುವುದು ಪಾಕಿಸ್ತಾನ ತಂಡದ ಪಾಲಿಗೆ ಅತ್ಯಂತ ದುರ್ಗಮವಾಗಿದೆ. ಮತ್ತೊಂದೆಡೆ ಪಾಕಿಸ್ತಾನದ ಅಂತಿಮ ಎರಡು ಪಂದ್ಯಗಳು ಕಠಿಣವಾಗಿದೆ ಎಂಬುದು ಕೂಡ ಗಮನಿಸಬೇಕಿದೆ. ಪಾಕ್ ಪಡೆ ಮುಂದಿನ ಪಂದ್ಯದಲ್ಲಿ ಗುರುವಾರದಂದು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈಗಾಗಲೇ ಟೂರ್ನಿಯಲ್ಲಿ ಅಜೇಯವಾಗಿರುವ ಪಾಕಿಸ್ತಾನ ಬ್ಯಾಟಿಂಗ್, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಪಾಕಿಸ್ತಾನ ತಂಡಕ್ಕೆ ಈ ಸವಾಲು ಗೆಲ್ಲುವುದು ಸುಲಭವಿಲ್ಲ. ಅಂತಿಮ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ನವೆಂಬರ್ 6ರಂದು ಆಡಲಿದೆ.

Story first published: Wednesday, November 2, 2022, 13:39 [IST]
Other articles published on Nov 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X