ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ಬೆಂಗಳೂರು ತಂಡವನ್ನು ಕನ್ನಡಿಗನೇ ಹೆಡೆಮುರಿ ಕಟ್ಟಿದ!

Getting Kohli, AB de in same match is a dream says Shreyas Gopal

ಬೆಂಗಳೂರು, ಏಪ್ರಿಲ್ 3: ಮಂಗಳವಾರ (ಏಪ್ರಿಲ್ 2) ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಕನ್ನಡಿಗರ ಪಾಲಿಗೆ ತುಂಬಾ ಪ್ರಮುಖವಾದು, ಗಮನಾರ್ಹವಾದುದು ಕೂಡ. ಯಾಕೆಂದರೆ ಪಂದ್ಯದಲ್ಲಿ ಬೆಂಗಳೂರು ತಂಡದ ಸೋಲಿಗೆ ಕಾರಣವಾಗಿದ್ದು ಕರ್ನಾಟಕದ ಆಟಗಾರನೆ!

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)

ಜೈಪುರ್‌ನ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ 7 ವಿಕೆಟ್ ಗೆಲುವನ್ನಾಚರಿಸಿತ್ತು. ಆರ್‌ಆರ್‌ಗೆ ಟೂರ್ನಿಯ ಈ ಆರಂಭಿಕ ಗೆಲುವು ತಂದಿದ್ದು ಕನ್ನಡಿಗ ಶ್ರೇಯಸ್ ಗೋಪಾಲ್.

ಐಪಿಎಲ್: ಹ್ಯಾಟ್ರಿಕ್ ಹೀರೋ ಕರನ್ ಕುರಿತ ಕುತೂಹಲಕಾರಿ ಸಂಗತಿಗಳು!ಐಪಿಎಲ್: ಹ್ಯಾಟ್ರಿಕ್ ಹೀರೋ ಕರನ್ ಕುರಿತ ಕುತೂಹಲಕಾರಿ ಸಂಗತಿಗಳು!

ಪಂದ್ಯದಲ್ಲಿ ಗೇಮ್ಸ್ ಚೇಂಜರ್ ಆಗಿ ಮಿಂಚಿದ್ದರು ಶ್ರೇಯಸ್. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು. ಅಂತೂ ನೆನ್ನೆಯ (ಏಪ್ರಿಲ್ 2ರ) ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಕಟ್ಟಿಹಾಕುವಲ್ಲಿ ಕನ್ನಡಿಗನೇ ನೆರವಾಗಿದ್ದನ್ನು ಕರ್ನಾಟಕ ಮಂದಿ ನೋಡಿ ಧನ್ಯರಾಗಬೇಕಾಯ್ತು.

ಎರಡಕ್ಕೂ ಪ್ರಮುಖ ಪಂದ್ಯ

ಎರಡಕ್ಕೂ ಪ್ರಮುಖ ಪಂದ್ಯ

ಮೈದಾನಕ್ಕಿಳಿಯುವುದಕ್ಕೂ ಮುನ್ನ ಎರಡೂ ತಂಡಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ ಮೂರೂ ಪಂದ್ಯಗಳಲ್ಲಿ ಸೋತಿದ್ದವು. ಹಾಗಾಗಿ ಗೆಲುವು ಎರಡೂ ತಂಡಗಳಿಗೂ ಬಹುಮುಖ್ಯವಾಗಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದ ಕನ್ನಡಿಗ ಶ್ರೇಯಸ್, ಎದುರಾಳಿ ಬೆಂಗಳೂರು ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರು ನೀಡಿದ್ದ 159 ರನ್ ಗುರಿ ಬೆನ್ನುಬಿದ್ದ ರಾಜಸ್ಥಾನ್ 19.5 ಓವರ್‌ನಲ್ಲಿ 164 ರನ್ ಗಳಿಸಿತ್ತು.

ಜೀವನದ ಅಪೂರ್ವ ಕ್ಷಣ

ಜೀವನದ ಅಪೂರ್ವ ಕ್ಷಣ

ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್, 'ಒಂದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ವಿಕೆಟ್‌ಗಳನ್ನು ಮುರಿಯೋದು ಎಲ್ಲಾ ಯುವ ಆಟಗಾರರ ಕನಸಾಗಿರತ್ತೆ. ಹಾಗೆಯೇ ಇದು ನನ್ನ ವೃತ್ತಿ ಜೀವನದ ಅಪೂರ್ವ ಕ್ಷಣ. ಅಲ್ಲದೆ ಐಪಿಎಲ್‌ನಲ್ಲೂ ನನ್ನ ಪಾಲಿನ ಅವಿಸ್ಮರಣೀಯ ಸಂದರ್ಭವಿದು' ಎಂದರು.

ಘಾಟಾನುಘಟಿಗಳ ವಿಕೆಟ್ ಪತನ

ಘಾಟಾನುಘಟಿಗಳ ವಿಕೆಟ್ ಪತನ

ಕೇವಲ 12 ರನ್ನಿಗೆ ಆರ್ಬಿಸಿ 3 ವಿಕೆಟ್ ಗಳನ್ನು ಶ್ರೇಯಸ್ ಕೆಡವಿದ್ದರಿಂದ ಆರ್ಸಿಬಿ ಸೋಲಿನಂಚಿಗೆ ಸರಿಯಿತು. ಅಲ್ಲದೆ ಶ್ರೇಯಸ್ ಮುರಿದ ಮೂರು ವಿಕೆಟ್ ಗಳು ವಿರಾಟ್ ಕೊಹ್ಲಿ (23 ರನ್), ಎಬಿ ಡಿವಿಲಿಯರ್ಸ್ (13 ರನ್) ಮತ್ತು ಶಿಮ್ರಾನ್ ಹೆಟ್ಮೇಯರ್ (1 ರನ್) ಅವರದ್ದು. ಆರ್ಸಿಬಿಯಲ್ಲಿ ಈ ಮೂವರೂ ಅಪಾಯಕಾರಿ ಆಟಗಾರರೆ. ಆದರೆ ತಂಡದ ಪ್ರಮುಖ ಆಟಗಾರರೆ ಬೇಗನೆ ನಿರ್ಗಮಿಸಿದ್ದರಿಂದ ಬೆಂಗಳೂರು ಸಂಕಟ ಪಡುವಂತಾಯ್ತು.

ಇಷ್ಟಕ್ಕೇ ಬೀಗಬಾರದು

ಇಷ್ಟಕ್ಕೇ ಬೀಗಬಾರದು

'ಆಡುವಾಗ ಯಾವ ವಿಕೆಟ್ ಲಭಿಸಿದರೂ ಅದು ಬೌಲರ್‌ನ ಪಾಲಿಗೆ ದೊಡ್ಡದೆ. ಆದರೆ ಈ ಇಬ್ಬರ (ಕೊಹ್ಲಿ, ಎಬಿಡಿ) ವಿಕೆಟ್‌ಗಳು ಇನ್ನೂ ಹೆಚ್ಚು ಕೊಡುತ್ತವೆ. ಹಾಗಂತ ಇಷ್ಟಕ್ಕೇ ನಾನು ಬೀಗಬಾರದು. ತಾಳ್ಮೆಯಿಂದ ಇನ್ನೂ ಕಾಯಬೇಕಿದೆ. ಸಾಧಿಸಬೇಕಿದೆ ಎಂದು ನಾನು ಭಾವಿಸುತ್ತೇನೆ' ಎಂದು ಶ್ರೇಯಸ್ ಹೇಳಿದರು.

Story first published: Wednesday, April 3, 2019, 16:51 [IST]
Other articles published on Apr 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X