ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೀವ್ ಸ್ಮಿತ್ ವಿರುದ್ಧ ಆರೋಪ ಮಾಡಿದ ಆಸ್ಟ್ರೇಲಿಯಾದ ಮಾಜಿ ನಾಯಕ

Smith was undermining incumbent team skipper Tim Paine | Oneindia Kannada
Hate to see Steve Smith undermining captain Tim Paine: Ian Chappell

ಪಾಕಿಸ್ತಾನದ ವಿರುದ್ಧದ ಅಹರ್ನಿಶಿ ಟೆಸ್ಟ್‌ ಪಂದ್ಯವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್‌ ಅಂತರದಿಂದ ಗೆದ್ದುಕೊಂಡಿದೆ. ಮೈದಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ನಡೆದುಕೊಂಡ ರೀತಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಆರೋಪವನ್ನು ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮೈದಾನದಲ್ಲಿ ಸ್ಮಿತ್‌ ನಡೆದುಕೊಂಡ ರೀತಿ ಸರಿಯಲ್ಲ ಎಂದಿದ್ದಾರೆ.

ಆಸ್ಟ್ರೇಲಿಯಾ ತಂಡವನ್ನು ಸದ್ಯ ಟಿಮ್ ಪೈನ್ ಮುನ್ನಡೆಸುತ್ತಿದ್ದಾರೆ. ಆದರೆ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸ್ಟೀವ್ ಸ್ಮಿತ್‌ ಅವರು ನಾಯಕನಿಗೆ ಇಷ್ಟವಿಲ್ಲದಿದ್ದರೂ ಫೀಲ್ಡಿಂಗ್‌ನಲ್ಲಿ ಬದಲಾವಣೆ ಮಾಡುತ್ತಿದ್ದರು. ಇದು ನಾಯಕನಿಗೆ ತೋರುವ ಅಗೌರವ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪಾಕ್-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾಪಾಕ್-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ

ಇಯಾನ್ ಚಾಪೆಲ್ ' ನಾಯಕ ಫೀಲ್ಡಿಂಗನ್ನು ನಿರ್ಧರಿಸುವ ಸಂದರ್ಭದಲ್ಲಿ ಆಟಗಾರ ಮಧ್ಯಪ್ರವೇಶಿಸುವುದು ತಪ್ಪು. ಆದರೆ ಇಂದು ಅದನ್ನು ಸ್ಮಿತ್ ಮಾಡಿದ್ದಾರೆ. ಫೀಲ್ಡರ್‌ಗಳನ್ನು ಆಟಗಾರನಾಗಿ ಸ್ಮಿತ್ ಓಡಾಡಿಸುವುದು ನೋಡಲು ಇಷ್ಟವಾಗುವುದಿಲ್ಲ' ಎಂದಿದ್ದಾರೆ.

ಆಟದ ಮಧ್ಯದಲ್ಲಿ ನಾಯಕ ಟಿಮ್ ಪೈನ್ ಜೊತೆಗೆ ಸ್ಟೀವ್ ಸ್ಮಿತ್ ಫೀಲ್ಡರ್‌ಗಳ ಸ್ಥಾನ ಬದಲಾವಣೆ ಕುರಿತಾಗಿ ಚರ್ಚಿಸಿದ್ದಾರೆ. ಆದರೆ ನಾಯಕ ಟಿಮ್ ಪೈನ್ ಅವರಿಗೆ ಫೀಲ್ಡರ್‌ಅನ್ನು ಸ್ಮಿತ್ ಬಯಸಿದಲ್ಲಿ ಇಲ್ಲಿಸಲು ಇಷ್ಟವಿರಲಿಲ್ಲ. ಆದರೂ ಸ್ಟೀವ್ ಸ್ಮಿತ್ ಫೀಲ್ಡಿಂಗ್‌ನಲ್ಲಿ ಮಧ್ಯಪ್ರವೇಶಿಸಿ ನಾಯಕನ ಘನತೆಯನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ.

ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್ಲಾರಾ 400* ದಾಖಲೆ ಮುರಿಯಲು ಈ ಭಾರತೀಯನಿಂದ ಸಾಧ್ಯ: ಡೇವಿಡ್ ವಾರ್ನರ್

ಸ್ಟೀವ್ ಸ್ಮಿತ್ ಈ ಹಿಂದೆ ಆಸ್ಟ್ರೇಲಿಯಾವನ್ನು ಮುನ್ನಡೆಸುತ್ತಿದ್ದರು. ಆದರೆ ಬಾಲ್ ಟ್ಯಾಂಪರಿಂಗ್‌ನಲ್ಲಿ ಸ್ಮಿತ್ ನಿಶೇಧಕ್ಕೆ ಒಳಗಾದಾಗ ನಾಯಕತ್ವದ ಜವಾಬ್ಧಾರಿ ಟಿಮ್ ಪೈನ್ ಹೆಗಲಿಗೆ ಬಿತ್ತು.

Story first published: Monday, December 2, 2019, 18:39 [IST]
Other articles published on Dec 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X