ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳಪೆ ಫಾರ್ಮ್: ಇನ್ನೂ ಹೆಚ್ಚು ಮಕ್ಕಳನ್ನು ಹೊಂದಿ; ಕೊಹ್ಲಿಗೆ ಈ ಟಿಪ್ಸ್ ಕೊಟ್ಟಿದ್ಯಾರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಆಟಗಾರ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಋತುವಿನಲ್ಲಿ ರನ್‌ ಬರ ಎದುರಿಸುತ್ತಿದ್ದು, ಇದು ಆರ್‌ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.

ಕಳೆದ 15 ವರ್ಷಗಳಿಂದ ಐಪಿಎಲ್ ಟ್ರೋಪಿ ಗೆಲ್ಲದಿದ್ದರೂ ಆರ್‌ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್‌ಗೆ ಮನಸೋತಿದ್ದರು. ಆದರೆ ಕಳೆದ 2 ವರ್ಷಗಳಿಂದ ಒಂದೇ ಒಂದು ಶತಕ ದಾಖಲಾಗದಿರುವುದು ನಿಜಕ್ಕೂ ಬೇಸರ ತರಿಸಿದೆ.

ಐಪಿಎಲ್ 2022ರಲ್ಲಿ ಈ ಬಲಗೈ ಬ್ಯಾಟ್ಸ್‌ಮನ್ ಇದುವರೆಗೆ 10 ಪಂದ್ಯಗಳಲ್ಲಿ 20.67ರ ಸರಾಸರಿಯಲ್ಲಿ 186 ರನ್ ಗಳಿಸಿದ್ದು, ಇದು ರನ್ ಮಷಿನ್‌ಗೆ ತಕ್ಕುದಾದ ಪ್ರದರ್ಶನವಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವುದು ಉತ್ತಮವೆಂದು ಅಭಿಪ್ರಾಯಪಟ್ಟಿದ್ದಾರೆ.

Have Couple More Kids And Enjoy Love: Delhi Capitals David Warners Advice To Virat Kohli

ಈ ಮಧ್ಯೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಮತ್ತು ಸ್ಟಾರ್ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಡೇವಿಡ್ ವಾರ್ನರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ರನ್‌ಗಳ ಕೊರತೆಯ ನಂತರ 'ಬೇಸಿಕ್ಸ್‌ಗೆ ಅಂಟಿಕೊಳ್ಳಿ' ಎಂದು ಸಲಹೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಲೀನ್ ಪ್ಯಾಚ್ ಮೂಲಕ ಸಾಗುತ್ತಿದ್ದಾರೆ ಮತ್ತು ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಭಾರತದ ಮಾಜಿ ನಾಯಕ ಗುಜರಾತ್ ಟೈಟನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು. ಆದರೆ ಅವರು 58 ರನ್ ಗಳಿಸಲು 53 ಎಸೆತಗಳನ್ನು ತೆಗೆದುಕೊಂಡರು.

ಉತ್ತಮ ಫಾರ್ಮ್‌ನಲ್ಲಿರುವ ಡೇವಿಡ್ ವಾರ್ನರ್, ಪ್ರತಿಯೊಬ್ಬ ಆಟಗಾರನೂ ಲೀನ್ ಪ್ಯಾಚ್ ಮೂಲಕ ಹೋಗುತ್ತಾನೆ ಎಂದ ಅವರು, ಈ ವೇಳೆ ಒಂದೆರಡು ಮಕ್ಕಳನ್ನು ಹೊಂದಲು ವಿರಾಟ್ ಕೊಹ್ಲಿಗೆ ಮಹತ್ವದ ಸಲಹೆ ನೀಡಿದರು.

Have Couple More Kids And Enjoy Love: Delhi Capitals David Warners Advice To Virat Kohli

"ಇನ್ನೂ ಒಂದೆರಡು ಮಕ್ಕಳನ್ನು ಹೊಂದಿರಿ ಮತ್ತು ಆ ಪ್ರೀತಿಯನ್ನು ಆನಂದಿಸಿ. ಫಾರ್ಮ್ ತಾತ್ಕಾಲಿಕ ಮತ್ತು ಕ್ಲಾಸ್ ಶಾಶ್ವತವಾಗಿರುತ್ತದೆ, ಆದ್ದರಿಂದ ನೀವು ಕ್ಲಾಸ್ ಅನ್ನು ಕಳೆದುಕೊಳ್ಳುವುದಿಲ್ಲ. ಇದು ಪ್ರಪಂಚದ ಪ್ರತಿಯೊಬ್ಬ ಆಟಗಾರರಿಗೂ ಸಂಭವಿಸುತ್ತದೆ,'' ಎಂದು ವಾರ್ನರ್ YouTube ಚಾನೆಲ್ 'ಸ್ಪೋರ್ಟ್ಸ್ ಯಾರಿ'ಗೆ ತಿಳಿಸಿದರು.

"ನೀವು ಎಷ್ಟೇ ಉತ್ತಮ ಆಟಗಾರರಾಗಿದ್ದರೂ, ನೀವು ಕೆಲವು ಸಂದರ್ಭಗಳಲ್ಲಿ ಈ ಏರಿಳಿತಗಳನ್ನು ಹೊಂದಬೇಕಾಗುತ್ತದೆ. ಕೆಲವೊಮ್ಮೆ ನೀವು ಅಲ್ಲಿಗೆ ಹಿಂತಿರುಗುವ ಮೊದಲು ಪ್ರದರ್ಶನದ ಉಬ್ಬರವಿಳಿತವು ಬಹಳ ದೂರದಲ್ಲಿರಬಹುದು. ಅದಕ್ಕಾಗಿ ಮೂಲಭೂತ ಅಂಶಗಳಿಗೆ ಅಂಟಿಕೊಳ್ಳಿ," ಎಂದು ವಾರ್ನರ್ ಸಲಹೆ ನೀಡಿದ್ದಾರೆ.

ಐಪಿಎಲ್ 2022ರಲ್ಲಿ, ಆರ್‌ಸಿಬಿ ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸತತವಾಗಿ ಎರಡು ಬಾರಿ ಗೋಲ್ಡನ್ ಡಕ್‌ಔಟ್ ಸೇರಿದಂತೆ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 186 ರನ್ ಗಳಿಸಿದ್ದಾರೆ.

Mahipal Lomror ಆಟಕ್ಕೆ ಅಭಿಮಾನಿಗಳು ಖುಷ್ | Oneindia Kannada

ಈ ನಡುವೆ ಬುಧವಾರದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಜ್ಜಾಗಿದ್ದು, ಎರಡೂ ತಂಡಗಳು ಈ ವರ್ಷದಲ್ಲಿ ಮತ್ತೊಮ್ಮೆ ಪರಸ್ಪರ ಹಣಾಹಣಿ ನಡೆಸಲಿವೆ.

Story first published: Thursday, May 5, 2022, 10:43 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X