ನಾನು ಸುಧಾರಿಸುವ ಬಗ್ಗೆ ಕೊಹ್ಲಿ ಚೆನ್ನಾಗಿ ವಿವರಿಸಿ ಹೇಳಿದ್ದಾರೆ: ಜೈಸ್ವಾಲ್

ದುಬೈ: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್ ಈಗ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅವಕಾಶ ಸಿಕ್ಕಾಗೆಲ್ಲ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬುಧವಾರ (ಸೆಪ್ಟೆಂಬರ್ 29) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಮಧ್ಯೆ ಪಂದ್ಯ ನಡೆಯುತ್ತಿದ್ದಾಗ ಜೈಸ್ವಾಲ್ ಅವರು ವಿರಾಟ್ ಕೊಹ್ಲಿ ಜೊತೆ ಮಾತನಾಡುತ್ತಿದ್ದದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಜೈಸ್ವಾಲ್ ಮಾತನಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸಂದೇಶ ಬರೆದ ಡೇವಿಡ್ ವಾರ್ನರ್ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಸಂದೇಶ ಬರೆದ ಡೇವಿಡ್ ವಾರ್ನರ್

ಬುಧವಾರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಿದ್ದವು. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ಗೆದ್ದಿತ್ತು. ಪಂದ್ಯದ ಬಳಿಕ ಯಶಸ್ವಿ ಜೈಸ್ವಾಲ್ ಅವರು ವಿರಾಟ್ ಕೊಹ್ಲಿ ಜೊತೆಗೆ ಮಾತನಾಡಿದ್ದರು.

"ಕಡಿಮೆ ರನ್ ಅನ್ನು ದೊಡ್ಡ ರನ್‌ಗೆ ಪರಿವರ್ತನೆ ಮಾಡೋದು ಹೇಗೆಂದು ನಾನು ತಿಳಿದುಕೊಳ್ಳಲು ಬಯಸಿದ್ದೆ. ಈ ಕಾರಣಕ್ಕೆ ನಾನು ವಿರಾಟ್ ಭಯ್ಯ ಅವರಲ್ಲಿ ಮಾತನಾಡುತ್ತದ್ದೆ. ರನ್ ಗಳಿಸುವ ಮೂಲಕ ಹೇಗೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಮತ್ತು ಆ ಮೂಲಕ ಹೇಗೆ ತಂಡಕ್ಕೆ ನೆರವಾಗಬಹುದು ಎಂದು ನಾನು ಕೇಳಿದ್ದೆ," ಎಂದು ರಾಜಸ್ಥಾನ್ ರಾಯಲ್ಸ್ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದ ಒಂದು ವಿಡಿಯೋದಲ್ಲಿ ಜೈಸ್ವಾಲ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಕೆಟ್ಟ ಫಾರ್ಮ್ ಬಗ್ಗೆ ಕೊನೆಗೂ ಮೌನ ಮುರಿದ ಕೋಚ್ ಮಹೇಲಾ ಜಯವರ್ಧನೆಸೂರ್ಯಕುಮಾರ್ ಯಾದವ್ ಕೆಟ್ಟ ಫಾರ್ಮ್ ಬಗ್ಗೆ ಕೊನೆಗೂ ಮೌನ ಮುರಿದ ಕೋಚ್ ಮಹೇಲಾ ಜಯವರ್ಧನೆ

ತ್ರಿಪಾಟಿ ಹಿಡಿದ ಕ್ಯಾಚ್ ನಿಂದ Kl Rahul ಔಟ್ ಆಗ್ಲಿಲ್ಲ ಯಾಕೆ? | Oneindia Kannada

"ನನ್ನ ಗೊಂದಲಗಳಿಗೆ ವಿರಾಟ್ ತುಂಬಾ ಒಳ್ಳೆಯ ರೀತಿಯಲ್ಲಿ ವಿವರಣೆ ನೀಡಿದರು. ನಾನು ನನ್ನ ಗೇಮ್ ಹೇಗೆ ಸುಧಾರಿಸಬಹುದು ಎನ್ನುವ ಬಗ್ಗೆ ಹೇಳಿದರು. ಅಷ್ಟೇ ಅಲ್ಲ, ಪಂದ್ಯದ ವೇಳೆ ನಾನು ಹೇಗೆ ಎಲ್ಲಾ ಸಮಯದಲ್ಲೂ ಸಕಾರಾತ್ಮಕವಾಗಿ ಇರಬಹುದು ಎನ್ನುವ ಬಗ್ಗೆಯೂ ಮಾರ್ಗದರ್ಶನ ನೀಡಿದರು," ಎಂದು 19ರ ಹರೆಯದ ಜೈಸ್ವಾಲ್ ಹೇಳಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಆರ್ಆರ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿದ್ದ ಜೈಸ್ವಾಲ್ ಕ್ರಮವಾಗಿ 31, 36, 5 ಮತ್ತು 49 ರನ್ ಗಳಿಸಿದ್ದಾರೆ. ಈ ಸೀಸನ್‌ನಲ್ಲಿ ಜೈಸ್ವಾಲ್ ಬಾರಿಸಿದ ಅತ್ಯುತ್ತಮ ರನ್ 49.

For Quick Alerts
ALLOW NOTIFICATIONS
For Daily Alerts
Story first published: Friday, October 1, 2021, 21:42 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X