ಸ್ಟೀವ್ ಸ್ಮಿತ್ ಬದಲಿಗೆ ರಾಜಸ್ಥಾನ ತಂಡ ಸೇರಿದ ಹೆನಿರಿಕ್ ಕ್ಲಾಸೆನ್

Posted By:
Heinrich Klaasen replaces Steve Smith in Rajasthan Royals team

ಬೆಂಗಳೂರು, ಏಪ್ರಿಲ್ 02: ಚೆಂಡು ವಿರೂಪ ಪ್ರಕರಣಕ್ಕೆ ಸಿಕ್ಕಿ ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿರುವ ಸ್ಟೀವ್ ಸ್ಮಿತ್ ಬದಲಿಗೆ ರಾಜಸ್ಥಾನ ರಾಯಲ್ಸ್ ತಂಡವು ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಸ್ಮಿತ್ ಜೊತೆ ಸಹ ದೋಷಿಯಾಗಿ ನಿಷೇಧಕ್ಕೊಳಗಾಗಿರುವ ಡೇವಿಡ್ ವಾರ್ನರ್‌ ಅವರ ಬದಲಿಗೆ ಸನ್‌ರೈಸರ್ಸ್‌ ತಂಡವು ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಚೆಂಡು ವಿರೂಪ ಪ್ರಕರಣ ದೋಷಿ ವಾರ್ನರ್‌ ಕ್ರಿಕೆಟ್‌ನಿಂದ ನಿವೃತ್ತಿ

ಚೆಂಡು ವಿಊಪ ಪ್ರಕರಣದ ದೋಷಿಗಳಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್‌ ಅವರುಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾವು ಒಂದು ವರ್ಷದಗಳ ನಿಷೇಧ ಹೇರಿತ್ತು. ಬಿಸಿಸಿಐ ಕೂಡ ಈ ಇಬ್ಬರು ಆಟಗಾರರಿಗೆ ನಿಷೇಧ ಹೇರಿದ ಕಾರಣ ಇಬ್ಬರೂ ಸಹ ಐಪಿಎಲ್‌ನಲ್ಲಿ ಆಡುತ್ತಿಲ್ಲ.

Heinrich Klaasen replaces Steve Smith in Rajasthan Royals team

ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ರಾಜಸ್ಥಾನ ರಾಯಲ್ಸ್‌ನ ಅಜಿಂಕ್ಯಾ ರಹಾನೆ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಸನ್‌ರೈಸರ್ಸ್ ತಂಡದ ನಾಯಕತ್ವವನ್ನು ನ್ಯೂಜಿಲೆಂಡ್‌ನ ಆಟಗಾರ ಕೇನ್ ವಿಲಿಯಮ್ಸ್‌ ವಹಿಸಿಕೊಂಡಿದ್ದಾರೆ.

ಹೆನಿರಿಕ್ ಕ್ಲಾಸೆನ್ ಅವರು ಏಕದಿನ ಹಾಗೂ ಟಿ20 ಪಂದ್ಯವನ್ನು ಭಾರತದ ವಿರುದ್ಧವೇ ಪಾದಾರ್ಪಣೆ ಮಾಡಿದ್ದು, ದೊಡ್ಡ ಹೊಡೆತಗಳ ಆಟಗಾರ ಎಂಬ ಬಿರುದಾಂಕಿತರು. ಇಂಗ್ಲೆಂಡ್ ತಂಡದ ಓಪನರ್ ಬ್ಯಾಟ್ಸ್‌ಮನ್‌ ಅಲೆಕ್ಸ್ ಹೇಲ್ಸ್ ಸಹ ಬಿರುಸಿನ ಆಟಗಾರರಾಗಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 2, 2018, 17:31 [IST]
Other articles published on Apr 2, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ