ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜೋ ರೂಟ್ ಹೆಸರಿನಲ್ಲಿ ಮಾತ್ರ ಇದೆ ಈ ವಿಶೇಷ ದಾಖಲೆ

Virat Kohli, Rohit Sharma ಮತ್ತು Joe Root ಹೆಸರಿನಲ್ಲಿ ಮಾತ್ರ ಇದೆ ಈ ವಿಶೇಷ ದಾಖಲೆ | Oneindia Kannada

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ 20 ಸದಸ್ಯರ ನ್ಯೂಜಿಲೆಂಡ್ ತಂಡ ಈಗಾಗಲೇ ಸೌತಾಂಪ್ಟನ್ ತಲುಪಿದ್ದು ಟೀಮ್ ಇಂಡಿಯಾ ತಂಡದ ಕೆಲ ಸದಸ್ಯರು ಮುಂಬೈನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ರೋಹಿತ್ ಶರ್ಮಾಗೂ ಇದನ್ನೇ ಹೇಳಿದ್ದೆ; ಪಂತ್ ಮಾಡುತ್ತಿರುವ ತಪ್ಪು ತಿದ್ದಿಕೊಳ್ಳಲು ಕಪಿಲ್ ದೇವ್ ಸಲಹೆ

ನ್ಯೂಜಿಲೆಂಡ್ ತಂಡದ ವಿರುದ್ಧ ನಡೆಯಲಿರುವ ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ನಾಯಕತ್ವದಲ್ಲಿ ಮೊದಲ ಐಸಿಸಿ ಟ್ರೋಫಿಯನ್ನು ಟೀಮ್ ಇಂಡಿಯಾ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡದ ಪರ ಅದ್ಭುತ ಆಟವನ್ನಾಡಿ ಮಿಂಚಲಿದ್ದಾರೆ ಎನ್ನುವ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಐಸಿಸಿ ಟ್ರೋಫಿಗಳ ಪಂದ್ಯಗಳಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮದೇ ಆದ ವಿಶೇಷ ದಾಖಲೆಯನ್ನು ಸಹ ಹೊಂದಿದ್ದಾರೆ.

ಶೀಘ್ರದಲ್ಲಿಯೇ ಕೊಹ್ಲಿ ರೋಹಿತ್‌ಗೆ ನಾಯಕತ್ವ ಬಿಟ್ಟುಕೊಡುವುದು ಖಚಿತ ಎಂದ ಮಾಜಿ ಕ್ರಿಕೆಟಿಗ

ಹೌದು ಐಸಿಸಿಯ ಎಲ್ಲಾ ಟ್ರೋಫಿಗಳು ಒಳಗೊಂಡಂತೆ 3000ಕ್ಕಿಂತ ಅಧಿಕ ರನ್ ಬಾರಿಸಿರುವ ವಿಶ್ವದ 3 ಆಟಗಾರರ ಪೈಕಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ. ಇದುವರೆಗೂ ನಡೆದಿರುವ ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟ್ರೋಫಿಗಳನ್ನೊಳಗೊಂಡಂತೆ 3000ಕ್ಕಿಂತ ಅಧಿಕ ರನ್ ದಾಖಲಿಸಿರುವ ವಿಶ್ವದ ಮೂವರು ಆಟಗಾರರೆಂದರೆ ಭಾರತದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಇಂಗ್ಲೆಂಡ್ ತಂಡದ ಜೋ ರೂಟ್. ಈ ವಿಶೇಷ ದಾಖಲೆಯನ್ನು ಈ ಮೂವರು ಆಟಗಾರರು ತಮ್ಮ ಹೆಸರುಗಳಲ್ಲಿ ಬರೆದುಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, May 27, 2021, 15:26 [IST]
Other articles published on May 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X