ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ದಿನ ನನಗೆ ಜಗತ್ತೇ ಅಂತ್ಯಗೊಂಡಂತೆ ಅನ್ನಿಸಿತ್ತು: ವಿರಾಟ್ ಕೊಹ್ಲಿ

I felt like it was the end of the world: Says Virat Kohli

ಬೆಂಗಳೂರು, ನವೆಂಬರ್ 13: ಮಾನಸಿಕ ಸಮಸ್ಯೆಯ ಕಾರಣ ನೀಡಿ 2016ರಲ್ಲಿ ಭಾರತ ಪ್ರವಾಸದಲ್ಲಿದ್ದ ಇಂಗ್ಲೆಂಡ್ ತಂಡದ ಮಾರ್ಕಸ್ ಟ್ರೆಸ್ಕೊಥಿಕ್, ಪ್ರವಾಸ ಸರಣಿಯ ಮಧ್ಯದಿಂದಲೇ ತವರಿಗೆ ವಾಪಸ್ಸಾದಾಗ ಅದು ಕ್ರಿಕೆಟ್‌ ಪರಿಣಿತರಿಗೆ ಅಷ್ಟೇನು ಸರಿ ಕಂಡಿರಲಿಲ್ಲ.

ಮೊದಲ ಟೆಸ್ಟ್‌ನಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆಯೇ ರೋಹಿತ್ ಸಾಧನೆಮೊದಲ ಟೆಸ್ಟ್‌ನಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆಯೇ ರೋಹಿತ್ ಸಾಧನೆ

ಆ ದಿನಗಳಲ್ಲಿ 'ಮಾನಸಿಕ ಸಮಸ್ಯೆ' ಕ್ರಿಕೆಟ್ ಆಟಗಾರನೊಬ್ಬ ಆಟ ನಿಲ್ಲಿಸುವ ಮಟ್ಟಿನ ಸಮಸ್ಯೆಯೆಂದು ಹೆಚ್ಚಿನವರಿಗೆ ಅನ್ನಿಸಿರಲಿಲ್ಲ. ಆದರೆ ಈಚಿನ ದಿನಗಳಲ್ಲಿ ಮಾನಸಿಕ ತೊಳಲಾಟವೇ ನಿಯಂತ್ರಿಸಿಕೊಳ್ಳಲಾಗದೆ ಕ್ರಿಕೆಟಿಗರು ಆಟ ಇಲ್ಲಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಐಪಿಎಲ್ 2020: ಟ್ರೆಂಟ್‌ ಬೌಲ್ಟ್ ಮುಂಬೈಗೆ, ಕೆ ಗೌತಮ್ ಪಂಜಾಬ್ ಪಾಲು!ಐಪಿಎಲ್ 2020: ಟ್ರೆಂಟ್‌ ಬೌಲ್ಟ್ ಮುಂಬೈಗೆ, ಕೆ ಗೌತಮ್ ಪಂಜಾಬ್ ಪಾಲು!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೂ ಒಂದೊಮ್ಮೆ ಇಂಥದ್ದೇ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಆ ದಿನ ಕೊಹ್ಲಿಗೆ ಜಗತ್ತೇ ಅಂತ್ಯಗೊಂಡಂತೆ ಅನ್ನಿಸಿತ್ತಂತೆ. ಈ ವಿಚಾರವನ್ನು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಆಟ ನಿಲ್ಲಿಸಿದ ಮ್ಯಾಕ್ಸ್‌ವೆಲ್

ಆಟ ನಿಲ್ಲಿಸಿದ ಮ್ಯಾಕ್ಸ್‌ವೆಲ್

ಇತ್ತೀಚೆಗೆ ಪಾಕಿಸ್ಥಾನಕ್ಕೆ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾನಸಿಕ ಕಾರಣಕ್ಕೆ ಸರಣಿ ಮಧ್ಯದಿಂದಲೇ ಕ್ರಿಕೆಟ್‌ನಿಂದ ಕೊಂಚ ಬಿಡುವ ಪಡೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದರು. ಅದಾಗಿ ಅವರ ಜೊತೆ ಆಟಗಾರ ನಿಕ್ ಮ್ಯಾಡಿನ್ಸನ್ ಕೂಡ ಮಾನಸಿಕ ಕಾರಣದಿಂದಾಗಿ ಮ್ಯಾಕ್ಸ್‌ವೆಲ್ ಅನುಸರಿಸುವುದಾಗಿ ಹೇಳಿಕೊಂಡಿದ್ದರು.

ಒತ್ತಡದಿಂದ ಹೆಣಗಾಡಿದ್ದ ಕೊಹ್ಲಿ

ಒತ್ತಡದಿಂದ ಹೆಣಗಾಡಿದ್ದ ಕೊಹ್ಲಿ

2014ರಲ್ಲಿ ಭಾರತ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿಯೂ ಮಾನಸಿಕ ಒತ್ತಡದ ಸಮಸ್ಯೆ ಎದುರಿಸಿದ್ದರು. ಆವತ್ತು ಕೊಹ್ಲಿ ವೃತ್ತಿ ಬದುಕಿನ ಅತೀ ಕೆಟ್ಟ ಪ್ರದರ್ಶನ ನೀಡಿ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಳ್ಳಲಾಗದೆ ಒದ್ದಾಡಿದ್ದರು. ಆ ಪ್ರವಾಸ ಸರಣಿಯಲ್ಲಿ ಒಟ್ಟು 10 ಇನ್ನಿಂಗ್ಸ್‌ಗಳನ್ನಾಡಿದ್ದ ಕೊಹ್ಲಿ, ಕೇವಲ 134 ರನ್ ಗಳಿಸಿದ್ದರು.

ಜಗತ್ತೇ ಅಂತ್ಯಗೊಂಡಂತೆ ಅನ್ನಿಸಿತ್ತು

ಜಗತ್ತೇ ಅಂತ್ಯಗೊಂಡಂತೆ ಅನ್ನಿಸಿತ್ತು

'ನಾನೂ ನನ್ನ ವೃತ್ತಿ ಬದುಕಿನಲ್ಲಿ ಇಂಥದ್ದೇ ಸಂದರ್ಭವನ್ನು ಹಾದು ಬಂದಿದ್ದೇನೆ. ಆ ಕ್ಷಣ ನನಗೆ ಜಗತ್ತೇ ಕೊನೆಗೊಂಡಿದೆ ಅನ್ನಿಸಿತ್ತು. 2014ರಲ್ಲಿ ಇಂಗ್ಲೆಂಡ್‌ನಲ್ಲಿದ್ದಾಗ ನಾನು ಏನು ಮಾಡಬೇಕು, ಇನ್ನೊಬ್ಬರಿಗೆ ಏನು ಹೇಳಬೇಕು, ಬೇರೆಯವರಲ್ಲಿ ಏನು ಮಾತನಾಡಬೇಕು, ಇನ್ನೊಬ್ಬರಲ್ಲಿ ಏನು ಸಂವಹನ ನಡೆಸಬೇಕು ಅನ್ನೋದೇ ನಂಗೆ ಗೊತ್ತಾಗುತ್ತಿರಲಿಲ್ಲ.

ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು

ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು

'ಪ್ರತಿಯೊಬ್ಬರ ಬದುಕಿನಲ್ಲೂ ಬಂದೊದಗುವ ಇಂಥ ಸನ್ನಿವೇಶಗಳನ್ನು ನಾವು ಗೌರವದಿಂದ ಕಾಣಬೇಕು. ಇದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳಬೇಕಿಲ್ಲ. ಯಾಕೆಂದರೆ ಮನುಷ್ಯನ ಬದುಕಿನ ಒಂದು ಘಟ್ಟದಲ್ಲಿ ಇಂಥದೊಂದು ಸನ್ನಿವೇಶ ಬಂದೇ ಬರುತ್ತದೆ. ಹಾಗಾಗಿ ನಾವಿದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು,' ಎಂದು ಕೊಹ್ಲಿ, ಮ್ಯಾಕ್ಸ್‌ವೆಲ್‌ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.

Story first published: Thursday, November 14, 2019, 16:35 [IST]
Other articles published on Nov 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X