ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಸಾಂಪ್ರದಾಯಿಕ ಎಡಗೈ ಸ್ಪಿನ್ನರ್‌ಗಳಿಗಿಂತ ಭಿನ್ನ: ಅಕ್ಷರ್ ಪಟೇಲ್

Im different from classical left-arm spinners, says Axar Patel

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ತಂಡವಾಗಿ ಬದಲಾಗಿದೆ. ಡಿಸಿಯಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗ ಚೆನ್ನಾಗಿದೆ. ಬ್ಯಾಟ್ಸ್‌ಮನ್‌ಗಳಲ್ಲಿ ರಿಷಭ್ ಪಂತ್, ಶಿಖರ್ ಧವನ್, ಶ್ರೇಯಸ್ ಐಯ್ಯರ್ ಮೊದಲಾದವರು ಪ್ರಮುಖರಾಗಿದ್ದರೆ, ಬೌಲಿಂಗ್‌ನಲ್ಲಿ ಅನ್ರಿಕ್ ನಾರ್ಕಿಯಾ, ಕಾಗಿಸೊ ರಬಾಡಾ, ಆರ್‌ ಅಶ್ವಿನ್ ಮೊದಲಾದವರಿದ್ದಾರೆ. ಅಕ್ಷರ್ ಪಟೇಲ್ ಕೂಡ ಐಪಿಎಲ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್ಎಂಐ ಪ್ಲೇ ಆಫ್ಸ್‌ ಅವಕಾಶ ಮುಗಿದ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ರೋಹಿತ್

ಈವರೆಗೆ 10 ಇನ್ನಿಂಗ್ಸ್‌ಗಳನ್ನಾಡಿರುವ ಅಕ್ಷರ್ ಪಟೇಲ್, 16.73ರ ಸರಾಸರಿಯಂತೆ 15 ವಿಕೆಟ್ ಪಡೆದಿದ್ದಾರೆ. ಬೌಲಿಂಗ್‌ ಆಲ್ ರೌಂಡರ್ ಆಗಿರುವ ಎಡಗೈ ಆರ್ಥೊಡಾಕ್ಸ್ ಬೌಲಿಂಗ್‌ ಮಾಡ್ತಾರೆ. ಒಟ್ಟಾರೆ 107 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ಪಟೇಲ್ 95 ವಿಕೆಟ್‌ ದಾಖಲೆ ಹೊಂದಿದ್ದಾರೆ.

ಟೈಮ್ಸ್ ಆಫ್‌ ಇಂಡಿಯಾ ಜೊತೆಗೆ ಮಾತನಾಡಿದ ಗುಜರಾತ್ ಮೂಲದ, 27ರ ಹರೆಯದ ಅಕ್ಷರ್ ಪಟೇಲ್, "ನಮ್ಮ ತಂಡದಲ್ಲಿ ಆರ್‌ ಅಶ್ವಿನ್ ವಿಭಿನ್ನ ಮನಸ್ಥತಿ ಹೊಂದಿದ್ದಾರೆ. ಅವರ ಅರ್ಧದಷ್ಟು ಕೌಶಲಗಳು ನನಗಿದ್ದರೆ ನಾನು ಇನ್ನೂ ಉತ್ತಮವಾಗುತ್ತಿದೆ. ಆದರೆ ನಾನು ಉಳಿದ ಸಾಂದ್ರದಾಯಿಕ ಎಡಗೈ ಸ್ಪಿನ್ನರ್‌ಗಳಿಗಿಂತ ಸ್ವಲ್ಪ ಭಿನ್ನ. ನನ್ನ ಕೌಶಲಗಳೀಗ ಸುಧಾರಿಸಿವೆ," ಎಂದಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗಲಿದೆ ಡಿಆರ್‌ಎಸ್ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗಲಿದೆ ಡಿಆರ್‌ಎಸ್

ಅಕ್ಟೋಬರ್‌ 10ರಂದು ಐಪಿಎಲ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಡೆಲ್ಲಿ ಪರ ಅಕ್ಷರ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಲೀಗ್‌ ಹಂತದಲ್ಲಿ ಡೆಲ್ಲಿ 14 ಪಂದ್ಯಗಳಲ್ಲಿ 10ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಲೀಗ್ ಸ್ಪರ್ಧೆ ಮುಗಿಸಿತ್ತು.

Story first published: Sunday, October 10, 2021, 17:36 [IST]
Other articles published on Oct 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X