ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಗೆ 80 ವರ್ಷವಾದರೂ ನನ್ನ ತಂಡದಲ್ಲಿ ಇರುತ್ತಾರೆ: ಎಬಿಡಿ

I would play MS Dhoni in my team even if hes 80, and in a wheelchair: AB de Villiers

ನವದೆಹಲಿ, ಅಕ್ಟೋಬರ್ 23: ಭಾರತದ ಮಾಜಿ ನಾಯಕ, ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ, ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ.

ವಿಕೆಟ್ ಹಿಂದೆ ಧೋನಿ ಈಗಲೂ ಅದೇ ಚುರುಕುತನ ತೋರಿಸುತ್ತಿದ್ದಾರೆ. ವಿಕೆಟ್ ನಡುವೆ ಓಡುವಾಗಲೂ ಧೋನಿಗೆ 37 ವರ್ಷ ವಯಸ್ಸಾಗಿದೆ ಎಂದು ನಂಬುವುದು ಕಷ್ಟ. ಫಿಟ್ನೆಸ್ ವಿಚಾರದಲ್ಲಿಯೂ ಧೋನಿ ಅದೇ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಕೊಹ್ಲಿ ನಾಯಕರಾಗಿದ್ದರೂ ಹೆಚ್ಚಿನ ಬದಲಾವಣೆಗಳು ನಡೆಯುವುದು ಧೋನಿಯ ಸೂಚನೆಗಳಿಗೆ ಅನುಗುಣವಾಗಿ.

ಸನ್‌ರೈಸರ್ಸ್ ಮೇಲೆ ಶಿಖರ್ ಧವನ್ ಕೋಪ: ಮುಂಬೈ ಇಂಡಿಯನ್ಸ್ ಸೇರ್ಪಡೆ ಸಾಧ್ಯತೆ ಸನ್‌ರೈಸರ್ಸ್ ಮೇಲೆ ಶಿಖರ್ ಧವನ್ ಕೋಪ: ಮುಂಬೈ ಇಂಡಿಯನ್ಸ್ ಸೇರ್ಪಡೆ ಸಾಧ್ಯತೆ

ಆದರೆ, ಬ್ಯಾಟಿಂಗ್ ವಿಚಾರದಲ್ಲಿ ಧೋನಿ ಹಿಂದಿನಂತಿಲ್ಲ. ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯವಿದ್ದ ಧೋನಿ ಬ್ಯಾಟಿಂಗ್ ವಿಚಾರದಲ್ಲಿ ಮಂಕಾಗಿದ್ದಾರೆ. ಅವರಿಂದ ಹೆಲಿಕಾಪ್ಟರ್ ಸಿಕ್ಸರ್‌ಗಳು ಮೂಡಿಬರುತ್ತಿಲ್ಲ. ಆಕ್ರಮಣಕಾರಿ ಆಟವನ್ನು ಮರೆತಂತೆ ಕಾಣಿಸುತ್ತಿದೆ.

ಇತ್ತ ರಿಷಬ್ ಪಂತ್ ಅವರಂತಹ ಯುವ ಆಟಗಾರರು ಭಾರತ ತಂಡದಲ್ಲಿ ಭರವಸೆ ಮೂಡಿಸಿದ್ದಾರೆ. ಹೀಗಾಗಿ 2019ರ ವಿಶ್ವಕಪ್‌ನಲ್ಲಿ ಧೋನಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಭಾರತೀಯ ಕ್ರಿಕೆಟ್‌ಗೆ ಬರುತ್ತಿದ್ದಾರೆ ಮೊದಲ ಮಹಿಳಾ ಅಂಪೈರ್ ಭಾರತೀಯ ಕ್ರಿಕೆಟ್‌ಗೆ ಬರುತ್ತಿದ್ದಾರೆ ಮೊದಲ ಮಹಿಳಾ ಅಂಪೈರ್

ಈ ಕಾರಣದಿಂದಲೇ ಧೋನಿ ನಿವೃತ್ತರಾಗಿ, ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಕೊಹ್ಲಿ ಬಳಗಕ್ಕೆ ಸ್ಫೂರ್ತಿಯಾಗಿರಲು ಅವರು ತಂಡದಲ್ಲಿ ಇರಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಇದರ ಮಧ್ಯೆ ಧೋನಿ ಬೆಂಬಲಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ನಿಂತಿದ್ದಾರೆ. ಧೋನಿ ನಿವೃತ್ತರಾಗಬೇಕೆಂಬ ಒತ್ತಾಯವನ್ನು ಅವರು 'ತಮಾಷೆ' ಎಂದು ಕರೆದಿದ್ದಾರೆ.

ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ ಹಲವು ದಾಖಲೆಗಳನ್ನು ಸೃಷ್ಟಿಸಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜೋಡಿ

ಪ್ರತಿ ವರ್ಷವೂ ಭಾರತ ಆಡುವ ಎಲ್ಲ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿಯೂ ಧೋನಿ ಆಡಲಿದ್ದಾರೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಅವರು 80 ವರ್ಷ ದಾಟಿ ಗಾಲಿಕುರ್ಚಿಯ ಮೇಲೆ ಕುಳಿತುಕೊಳ್ಳುವಂತಾಗಿದ್ದರೂ ತಂಡದಲ್ಲಿ ಇರಬೇಕು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಧೋನಿ ನಿವೃತ್ತರಾಗಿ ಹೊಸಬರಿಗೆ ದಾರಿ ಮಾಡಿಕೊಡಬೇಕೆ ಎಂಬ ಪ್ರಶ್ನೆಗೆ ಡಿವಿಲಿಯರ್ಸ್, 'ನೀವೆಲ್ಲ ತಮಾಷೆ ಮಾಡುತ್ತೀರಿ. ಇಲ್ಲ. ನನ್ನ ತಂಡದಲ್ಲಿ ಧೋನಿ ಅವರಿದ್ದರೆ ಪ್ರತಿ ವರ್ಷದ ಪ್ರತಿ ದಿನವೂ ಅವರನ್ನು ಆಡಿಸುತ್ತೇನೆ. ಅವರಿಗೆ 80 ವರ್ಷವಾಗಲಿ, ಗಾಲಿ ಕುರ್ಚಿಯ ಮೇಲೆ ಕುಳಿತಿರಲಿ, ಅವರು ನನ್ನ ತಂಡದಲ್ಲಿ ಆಡುತ್ತಲೇ ಇರುತ್ತಾರೆ. ಅವರೊಬ್ಬ ಅದ್ಭುತ ಆಟಗಾರ. ಅವರ ದಾಖಲೆಗಳತ್ತ ನೋಡಿ. ಅಂತಹ ಆಟಗಾರನನ್ನು ಕೈಬಿಡಲು ನೀವು ಬಯಸುತ್ತೀರಾ? ನೀವು ಬಯಸಬಹುದು. ಆದರೆ ನಾನು ಖಂಡಿತಾ ಬಯಸುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Story first published: Tuesday, October 23, 2018, 15:02 [IST]
Other articles published on Oct 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X