2021ರ ವಾರ್ಷಿಕ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತದ ಆಟಗಾರರನ್ನು ಹುಡುಕಿದವರಿಗೆ ಆಶ್ಚರ್ಯ!

ಕಳೆದ ವರ್ಷ ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಏಕದಿನ ಸರಣಿಗಳು ನಡೆದಿದ್ದು, ಈ ಸರಣಿಗಳಲ್ಲಿ ವಿಶ್ವ ಕ್ರಿಕೆಟ್‌ನ ವಿವಿಧ ಆಟಗಾರರು ನೀಡಿದ ಪ್ರದರ್ಶನದ ಆಧಾರದ ಮೇಲೆ ಇದೀಗ ಐಸಿಸಿ 11 ಆಟಗಾರರನ್ನೊಳಗೊಂಡ 2021ರ ವಾರ್ಷಿಕ ತಂಡವನ್ನು ಪ್ರಕಟಿಸಿದೆ.

ಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿ

ಹೀಗೆ ಐಸಿಸಿ ಪ್ರಕಟಿಸಿರುವ ಕಳೆದ ವರ್ಷದ ವಾರ್ಷಿಕ ತಂಡದಲ್ಲಿ ಭಾರತದ ಯಾವೊಬ್ಬ ಆಟಗಾರನೂ ಕೂಡ ಸ್ಥಾನವನ್ನು ಪಡೆದುಕೊಳ್ಳದೇ ಇರುವುದು ಆಶ್ಚರ್ಯ ಮೂಡಿಸಿದೆ. ಹೌದು, ಐಸಿಸಿ ಕಳೆದ ವರ್ಷದ ವಾರ್ಷಿಕ ತಂಡ ಪ್ರಕಟಿಸಿದ ಕೂಡಲೇ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿಯನ್ನು ನೋಡಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದು ತಮ್ಮ ನೆಚ್ಚಿನ ತಂಡದ ಯಾವುದೇ ಆಟಗಾರನೂ ಕೂಡ ಪಟ್ಟಿಯಲ್ಲಿ ಇಲ್ಲದೇ ಇರುವುದರಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೊಹ್ಲಿ ಮಾಡಿದ ಈ ಕೆಲಸವನ್ನು ಬೇರೆಯವರು ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ ಎಂದು ಕಿಡಿಕಾರಿದ ಗವಾಸ್ಕರ್ಕೊಹ್ಲಿ ಮಾಡಿದ ಈ ಕೆಲಸವನ್ನು ಬೇರೆಯವರು ಮಾಡಿದ್ರೆ ಸುಮ್ಮನೆ ಇರುತ್ತಿದ್ರಾ ಎಂದು ಕಿಡಿಕಾರಿದ ಗವಾಸ್ಕರ್

ಇನ್ನು ಪಾಕಿಸ್ತಾನದ ಆಟಗಾರ ಫಖರ್ ಜಮಾನ್ ಐಸಿಸಿ ಪ್ರಕಟಿಸಿರುವ ಈ ವಾರ್ಷಿಕ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಆಶ್ಚರ್ಯವನ್ನು ಮೂಡಿಸಿದೆ. ಹೀಗೆ ಸಾಕಷ್ಟು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿರುವ 2021ರ ಐಸಿಸಿ ವಾರ್ಷಿಕ ಏಕದಿನ ಕ್ರಿಕೆಟ್ ತಂಡದಲ್ಲಿ ಯಾವ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ ಮತ್ತು ನಾಯಕತ್ವ ಯಾರ ಪಾಲಾಗಲಿದೆ ಎಂಬುದರ ಕುರಿತಾದ ಸಂಪೂರ್ಣ ವಿವರ ಈ ಕೆಳಕಂಡಂತಿದೆ..

ಐಸಿಸಿ 2021ರ ವಾರ್ಷಿಕ ಏಕದಿನ ಕ್ರಿಕೆಟ್ ತಂಡ

ಐಸಿಸಿ 2021ರ ವಾರ್ಷಿಕ ಏಕದಿನ ಕ್ರಿಕೆಟ್ ತಂಡ

ಐಸಿಸಿ ಪ್ರಕಟಿಸಿರುವ 2021ರ ವಾರ್ಷಿಕ ಏಕದಿನ ತಂಡ ಹೀಗಿದೆ: ಪಾಲ್ ಸ್ಟಿರ್ಲಿಂಗ್, ಜನ್ನೆಮನ್ ಮಲನ್, ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ರಾಸ್ಸಿ ವಾನ್ ಡೆರ್ ಡುಸ್ಸೆನ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್‌), ವನಿಂದು ಹಸರಂಗ, ಮುಸ್ತಫಿಜುರ್ ರೆಹಮಾನ್, ಸಿಮಿ ಸಿಂಗ್, ದುಷ್ಮಂತ ಚಮೀರಾ

ತಂಡದಲ್ಲಿ ಸ್ಥಾನ ಪಡೆದುಕೊಂಡ ಆಟಗಾರರ ಅಂಕಿ ಅಂಶ

ತಂಡದಲ್ಲಿ ಸ್ಥಾನ ಪಡೆದುಕೊಂಡ ಆಟಗಾರರ ಅಂಕಿ ಅಂಶ

ಇನ್ನು ಐಸಿಸಿ ಪ್ರಕಟಿಸಿರುವ ಈ ವಾರ್ಷಿಕ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರು ಎಷ್ಟು ರನ್ ಹಾಗೂ ಎಷ್ಟು ವಿಕೆಟ್ ಪಡೆದುಕೊಂಡಿದ್ದಾರೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

1. ಪೌಲ್ ಸ್ಟಿರ್ಲಿಂಗ್: ಐರ್ಲೆಂಡ್ ತಂಡದ ಆಟಗಾರ ಪೌಲ್ ಸ್ಟಿರ್ಲಿಂಗ್ 2021ರಲ್ಲಿ 14 ಏಕದಿನ ಪಂದ್ಯಗಳನ್ನಾಡಿದ್ದು 705 ರನ್ ಕಲೆ ಹಾಕುವುದರ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.

2. ಜನ್ನೆಮನ್ ಮಲನ್: 2021ರಲ್ಲಿ ಒಟ್ಟು 8 ಏಕದಿನ ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾದ ಜನ್ನೆಮನ್ ಮಲನ್ 509 ರನ್ ಗಳಿಸಿದ್ದಾರೆ.

3. ಬಾಬರ್ ಅಜಮ್ (ನಾಯಕ): ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 2021ರಲ್ಲಿ ಟೀಮ್ ಇಂಡಿಯಾದಷ್ಟೇ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೂ ಸಹ 405 ರನ್ ಗಳಿಸಿದ್ದಾರೆ. ಹಾಗೂ ಐಸಿಸಿ ಪ್ರಕಟಿಸಿರುವ ಈ ವಾರ್ಷಿಕ ತಂಡದಲ್ಲಿ ನಾಯಕನ ಸ್ಥಾನವನ್ನು ಕೂಡ ಬಾಬರ್ ಅಜಮ್ ಗಿಟ್ಟಿಸಿಕೊಂಡಿದ್ದಾರೆ.

4. ಫಖರ್ ಜಮಾನ್: ಈ ಪಟ್ಟಿಯಲ್ಲಿ ಪಾಕಿಸ್ತಾನದ ಫಖರ್ ಜಮಾನ್ ಹೆಸರನ್ನು ನೋಡಿದ ಹಲವಾರು ಕ್ರಿಕೆಟ್ ಅಭಿಮಾನಿಗಳು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಒಟ್ಟು 6 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಫಖರ್ ಜಮಾನ್ 365 ರನ್ ಗಳಿಸಿದ್ದರು. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಫಖರ್ ಜಮಾನ್ 193 ರನ್ ಸಿಡಿಸಿದ್ದು ಈತನಿಗೆ ಮುನ್ನಡೆ ತಂದುಕೊಟ್ಟಿದೆ.

5. ವಾನ್ ಡರ್ ಡಸನ್: ಸದ್ಯ ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಅಜೇಯ ಶತಕದಾಟ ಪ್ರದರ್ಶಿಸಿ ಮಿಂಚಿರುವ ದಕ್ಷಿಣ ಆಫ್ರಿಕಾ ವಾನ್ ಡರ್ ಡಸನ್ ಕಳೆದ ವರ್ಷ 8 ಏಕದಿನ ಪಂದ್ಯಗಳನ್ನಾಡಿ 342 ರನ್ ಗಳಿಸಿದ್ದರು.

6. ಶಕೀಬ್ ಅಲ್ ಹಸನ್: ಕಳೆದ ವರ್ಷ ಒಟ್ಟು 9 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್

277 ರನ್ ಕಲೆ ಹಾಕುವುದರ ಜತೆಗೆ 17 ವಿಕೆಟ್‍ಗಳನ್ನೂ ಸಹ ಪಡೆದಿದ್ದರು.

7. ಮುಶ್ಪೀಕರ್ ರಹೀಂ: ಕಳೆದ ವರ್ಷ ಒಟ್ಟು 9 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಶ್ಪೀಕರ್ ರಹೀಂ 407 ರನ್ ಕಲೆಹಾಕಿದ್ದರು.

8. ವನಿಂದು ಹಸರಂಗ: ಕಳೆದ ವರ್ಷ ಒಟ್ಟು 14 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಶ್ರೀಲಂಕಾದ ವನಿಂದು ಹಸರಂಗ 356 ರನ್ ಕಲೆಹಾಕುವುದರ ಜೊತೆಗೆ 12 ವಿಕೆಟ್‍ಗಳನ್ನೂ ಸಹ ಕಬಳಿಸಿದ್ದರು.

9. ಮುಸ್ತಫಿಜರ್ ರಹಮಾನ್: ಕಳೆದ ವರ್ಷ ಒಟ್ಟು 10 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಬಾಂಗ್ಲಾದೇಶದ ಮುಸ್ತಫಿಜರ್ ರಹಮಾನ್ 18 ವಿಕೆಟ್‍ಗಳನ್ನು ಪಡೆದಿದ್ದರು.

10. ಸಿಮಿ ಸಿಂಗ್: ಕಳೆದ ವರ್ಷ ಐರ್ಲೆಂಡ್ ತಂಡದ ಆಟಗಾರ ಸಿಮಿ ಸಿಂಗ್ 13 ಪಂದ್ಯಗಳಲ್ಲಿ ಕಣಕ್ಕಿಳಿದು 19 ವಿಕೆಟ್ ಕಬಳಿಸಿದ್ದು ಮಾತ್ರವಲ್ಲದೇ, ಬ್ಯಾಟಿಂಗ್‌ನಲ್ಲಿ 1 ಶತಕ ಹಾಗೂ 1 ಅರ್ಧಶತಕವನ್ನೊಳಗೊಂಡಂತೆ 280 ರನ್ ಕಲೆಹಾಕಿದ್ದರು.

11. ದುಷ್ಮಂತ ಚಮೀರ: ಶ್ರೀಲಂಕಾದ ಬೌಲರ್ ದುಷ್ಮಂತ ಚಮೀರ ಕಳೆದ ವರ್ಷದಲ್ಲಿ 14 ಏಕದಿನ ಪಂದ್ಯಗಳನ್ನಾಡಿ 20 ವಿಕೆಟ್ ಪಡೆದಿದ್ದರು.

ಏಕದಿನ ಮಾತ್ರವಲ್ಲ ಐಸಿಸಿಯ ಟಿ ಟ್ವೆಂಟಿ ವಾರ್ಷಿಕ ತಂಡದಲ್ಲಿಯೂ ಕೂಡ ಭಾರತೀಯರಿಗಿಲ್ಲ ಸ್ಥಾನ!

ಏಕದಿನ ಮಾತ್ರವಲ್ಲ ಐಸಿಸಿಯ ಟಿ ಟ್ವೆಂಟಿ ವಾರ್ಷಿಕ ತಂಡದಲ್ಲಿಯೂ ಕೂಡ ಭಾರತೀಯರಿಗಿಲ್ಲ ಸ್ಥಾನ!

ಇನ್ನು ಭಾರತ ತಂಡದ ಆಟಗಾರರು ಐಸಿಸಿ ಪ್ರಕಟಿಸಿರುವ ವಾರ್ಷಿಕ ಏಕದಿನ ತಂಡದಲ್ಲಿ ಮಾತ್ರವಲ್ಲದೇ ಐಸಿಸಿ ಪ್ರಕಟಿಸಿರುವ ವಾರ್ಷಿಕ ಟಿಟ್ವೆಂಟಿ ತಂಡದಲ್ಲಿಯೂ ಕೂಡಾ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಪಂಜಾಬ್ ಕಾಂಗ್ರೆಸ್ ನಲ್ಲಿ CM ಅಭ್ಯರ್ಥಿ ಗೊಂದಲ:ಸಿಧು ಚನ್ನಿ ನಡುವೆ ರೇಸ್ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Thursday, January 20, 2022, 16:26 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X