ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನದೀಂ, ಇರ್ಫಾನ್ ಅಹ್ಮದ್ ಗೆ ಆಜೀವ ನಿಷೇಧ ಶಿಕ್ಷೆ ಕೊಟ್ಟ ಐಸಿಸಿ

ICC bans Hong Kong players Irfan Ahmed, Nadeem Ahmed from all cricket for life

ದುಬೈ, ಆಗಸ್ಟ್ 26: ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ಹಾಂಗ್ ಕಾಂಗ್ ಕ್ರಿಕೆಟರ್ಸ್ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಕ್ರಮ ಜರುಗಿಸಿದೆ. ಇರ್ಫಾನ್ ಅಹ್ಮದ್ ಹಾಗೂ ನದೀಂ ಅಹ್ಮದ್ ಗೆ ಆಜೀವ ನಿಷೇಧ ಶಿಕ್ಷೆ ವಿಧಿಸಿದ್ದರೆ, ಮತ್ತೊಬ್ಬ ಆಟಗಾರ ಹಸೀಬ್ ಅಮ್ಜದ್ ಗೆ 5 ವರ್ಷಗಳ ನಿಷೇಧ ಹೇರಲಾಗಿದೆ.

ಐಸಿಸಿ ಭ್ರಷ್ಟಾಚಾರ ನಿಗ್ರಹ ನಿಯಮಗಳನ್ನು ಮೀರಿದ್ದರಿಂದ ಮೂವರು ಕ್ರಿಕೆಟರ್ ಗಳಿಗೆ ಶಿಕ್ಷೆ ವಿಧಿಸಲಾಗಿದೆ. ಮೂವರು ಪಂದ್ಯಗಳನ್ನು ಫಿಕ್ಸ್ ಮಾಡಿದ್ದಾರೆ ಹಾಗೂ ಫಿಕ್ಸ್ ಮಾಡಲು ಯತ್ನಿಸಿದ್ದಾರೆ, ಈ ಪ್ರಯತ್ನಗಳ ಬಗ್ಗೆ ಐಸಿಸಿಗೆ ತಿಳಿಸಿಲ್ಲ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಎಂಎಸ್ ಧೋನಿಯ ಹೊಸ ಸ್ಟೈಲ್ ಗೆ ಫ್ಯಾನ್ಸ್ ಫಿದಾ ಎಂಎಸ್ ಧೋನಿಯ ಹೊಸ ಸ್ಟೈಲ್ ಗೆ ಫ್ಯಾನ್ಸ್ ಫಿದಾ

ಹಾಂಗ್ ಕಾಂಗ್ ಹಾಗೂ ಸ್ಕಾಟ್ಲೆಂಡ್ ವಿರುದ್ಧ 2014ರ ಜನವರಿಯಲ್ಲಿ ನಡೆದ ಪಂದ್ಯ, ಹಾಂಗ್ ಕಾಂಗ್ ಹಾಗೂ ಕೆನಡಾ ನಡುವೆ ನಡೆದ 2014ರ ಜನವರಿ 17ರಂದು ನಡೆದ ಪಂದ್ಯ, 2014ರ ಮಾರ್ಚ್ 12ರಂದು ನಡೆದ ಹಾಂಗ್ ಕಾಂಗ್ ಹಾಗೂ ಜಿಂಬಾಬ್ವೆ ವಿರುದ್ಧದ ಪಂದ್ಯ, ಐಸಿಸಿ ವಿಶ್ವ ಟಿ20 ಅರ್ಹತಾ ಸುತ್ತಿನ ಪಂದ್ಯ ಜುಲೈ 2015ರ ಪಂದ್ಯ, 2016 ಐಸಿಸಿ ವಿಶ್ವ ಟಿ20 ಪಂದ್ಯಗಳನ್ನು ಇರ್ಫಾನ್ ಫಿಕ್ಸ್ ಮಾಡಲು ಯತ್ನಿಸಿದ್ದು ಸಾಬೀತಾಗಿದೆ. ಇದೇ ರೀತಿ ನದೀಂ ಕೂಡಾ 3 ಪಂದ್ಯ, ಹಸೀದ್ ಅಮ್ಜದ್ 3 ಪಂದ್ಯಗಳಲ್ಲಿ ಭ್ರಷ್ಟಾಚಾರ ಎಸಗಿರುವುದು ಸಾಬೀತಾಗಿರುವುದರಿಂದ ಐಸಿಸಿಯ 2012 ನಿಯಯಾವಳಿ ಸೆಕ್ಷನ್ 2.11, 2014ರ ಸೆಕ್ಷನ್ 2.1.3 ಸೇರಿದಂತೆ ವಿವಿಧ ನಿಯಮಾವಳಿಗಳ ಅನ್ವಯ ಕ್ರಮ ಜರುಗಿಸಲಾಗಿದೆ ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.

Story first published: Monday, August 26, 2019, 20:51 [IST]
Other articles published on Aug 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X