ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಹಾಗೂ U-19 ಕ್ರಿಕೆಟ್‌ಗೆ ಕನಿಷ್ಟ ವಯೋಮಾನ ನಿಗದಿಪಡಿಸಿದ ಐಸಿಸಿ

ICC Introduced Minimum Age Policy to Play International Under-19 Cricket

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗುರುವಾರ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗದುಕೊಂಡಿದೆ. ಅಂತಾರಾಷ್ಟ್ರೀಯ ವುರುಷರ ಅಥವಾ ಮಹಿಳೆಯರ ಹಾಗೂ ಅಂಡರ್ 19 ಕ್ರಿಕೆಟ್‌ನಲ್ಲಿ ಕನಿಷ್ಟ ವಯೋಮಾನವನ್ನು ನಿಗದಿಪಡಿಸಿದೆ. ಇದರ ಅನ್ವಯ ಆಟಗಾರರು ಕನಿಷ್ಟ 15 ವರ್ಷವಾಗದೆ ಈ ವಿಭಾಗದ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಿಳಿಸಿದೆ.

"ಐಸಿಸಿ ಕ್ರಿಎಕಟ್ ಟೂರ್ನಿಗಳು, ದ್ವಿಪಕ್ಷೀಯ ಕ್ರಿಕೆಟ್ ಮತ್ತು ಅಂಡರ್ 19 ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರಿಕೆಟ್‌ನಲ್ಲಿ ಅನ್ವಯವಾಗುವಂತೆ ಆಟಗಾರರ ಸುರಕ್ಷತೆಯನ್ನು ಸುಧಾರಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕನಿಷ್ಠ ವಯಸ್ಸಿನ ನಿರ್ಬಂಧಗಳನ್ನು ಪರಿಚಯಿಸುವುದನ್ನು ಮಂಡಳಿ ದೃಢಪಡಿಸಿದೆ. ಪುರುಷರ, ಮಹಿಳೆಯರ ಅಥವಾ ಅಂಡರ್‌ 19 ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆಟಗಾರರು ಕನಿಷ್ಟ 15 ವರ್ಷ ಪೂರ್ಣವಾಗಿರಬೇಕು" ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನನಗೇ ಗೊತ್ತಿಲ್ಲದೆ ನನಗೆ ಕೊರೊನಾ ತಗುಲಿತ್ತು: ಮಾರ್ಕ್ ಬೌಚರ್ನನಗೇ ಗೊತ್ತಿಲ್ಲದೆ ನನಗೆ ಕೊರೊನಾ ತಗುಲಿತ್ತು: ಮಾರ್ಕ್ ಬೌಚರ್

"ಕೆಲ ವಿಶೇಷ ಸಂದರ್ಭಗಳಲ್ಲಿ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನಿಗೆ ಆಡಲು ಸದಸ್ಯ ಮಂಡಳಿ ಐಸಿಸಿಗೆ ಅರ್ಜಿ ಸಲ್ಲಿಸಬಹುದು. ಆಟಗಾರನ ಆಟದ ಅನುಭವ ಮತ್ತು ಮಾನಸಿಕ ಅಭಿವೃದ್ಧಿ ಮತ್ತು ಯೋಗಕ್ಷೇಮವು ಅಂತರಾಷ್ಟ್ರೀಯ ಕ್ರಿಕೆಟ್‌ನ ಬೇಡಿಕೆಗಳನ್ನು ನಿಭಾಯಿಸಲು ಸಮರ್ಥವಾಗಿದೆ ಎಂಬುದನ್ನು ಇದು ವ್ಯಕ್ತಪಡಿಸಿರಬೇಕು" ಎಂಬುದನ್ನು ಐಸಿಸಿ ಹೇಳಿದೆ.

ಇಲ್ಲಿಯವರೆಗೆ 15 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಕೆಲವೇ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ. ಪಾಕಿಸ್ತಾನದ ಹಸನ್ ರಾಜಾ ತಮ್ಮ 14ನೇ ವಯಸ್ಸಿನಲ್ಲಿ ಪಾಕಿಸ್ತಾನ ತಂಡದ ಪಾರವಾಗ ಆಡಿದ್ದಾರೆ. ರೊಮೇನಿಯಾದ ಘೆರಾಸಿಂ ಹಾಗೂ ಕಯವೈಟ್‌ನ ಭವ್ಸಾರ್ 14ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ತಂಡದಲ್ಲಿ ಪದಾರ್ಪಣೆಯನ್ನು ಮಾಡಿದ್ದಾರೆ.

Story first published: Friday, November 20, 2020, 11:27 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X