ಮತ್ತೆ ಶುರುವಾಗುತ್ತಾ ಭಾರತ vs ಪಾಕಿಸ್ತಾನ ಸರಣಿ? ಐಸಿಸಿ ತೆಗೆದುಕೊಂಡ ನಿರ್ಧಾರವಿದು!

ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಹಣಾಹಣಿ ಎಂದೇ ಖ್ಯಾತಿಯನ್ನು ಪಡೆದಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಅಂತಿಮವಾಗಿ ನಡೆದು ವರ್ಷಗಳೇ ಕಳೆದಿವೆ. ಐಸಿಸಿ ಕ್ರಿಕೆಟ್ ಲೀಗ್ ಪಂದ್ಯಗಳನ್ನು ಹೊರತುಪಡಿಸಿದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಉಳಿದ ಯಾವುದೇ ಸರಣಿಗಳಲ್ಲಿಯೂ ಭಾಗವಹಿಸುತ್ತಿಲ್ಲ.

ಹೀಗೆ ಹಲವಾರು ವರ್ಷಗಳಿಂದ ನಡೆಯದೇ ಇದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸರಣಿಯನ್ನು ಪುನರ್ ಆರಂಭಿಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ರಮೀಜ್ ರಾಜಾ ಮನಸ್ಸು ಮಾಡಿದ್ದರು. ಭಾರತ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳನ್ನು ಒಳಗೊಂಡಂತೆ 4 ತಂಡಗಳ ನಡುವಿನ ಏಕದಿನ ಸರಣಿಯನ್ನು ನಡೆಸಲು ಯೋಜನೆ ಸಿದ್ಧಪಡಿಸುತ್ತಿರುವುದಾಗಿ ಹೇಳಿಕೆ ನೀಡಿದ್ದ ರಮೀಜ್ ರಾಜಾ ಈ ವಿಷಯವನ್ನು ಐಸಿಸಿ ಸಭೆಯಲ್ಲಿಯೂ ಕೂಡ ಚರ್ಚಿಸುವುದಾಗಿ ಹೇಳಿದ್ದರು.

ಆ ಇಬ್ಬರಿಲ್ಲದೇ ಸಿಎಸ್‌ಕೆ ಸಾಲು ಸಾಲು ಸೋಲು ಕಂಡಿದೆ ಎಂದ ಹರ್ಭಜನ್; ಈ ಸಮಸ್ಯೆಗೆ ಸದ್ಯಕ್ಕಿಲ್ಲ ಪರಿಹಾರ!ಆ ಇಬ್ಬರಿಲ್ಲದೇ ಸಿಎಸ್‌ಕೆ ಸಾಲು ಸಾಲು ಸೋಲು ಕಂಡಿದೆ ಎಂದ ಹರ್ಭಜನ್; ಈ ಸಮಸ್ಯೆಗೆ ಸದ್ಯಕ್ಕಿಲ್ಲ ಪರಿಹಾರ!

ಅದರಂತೆ 2 ದಿನಗಳ ಕಾಲ ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಏಪ್ರಿಲ್ 10ರ ಭಾನುವಾರದಂದು ರಮೀಜ್ ರಾಜಾ ಈ ಸರಣಿಯನ್ನು ಪುನರ್ ಆರಂಭಿಸಲು ಬೇಡಿಕೆಯನ್ನು ಇಟ್ಟರು. ಆದರೆ ರಮೀಜ್ ರಾಜಾ ಅವರ ಈ ಬೇಡಿಕೆಯನ್ನು ಐಸಿಸಿ ತಳ್ಳಿಹಾಕಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸರಣಿಗಳನ್ನು ಏರ್ಪಡಿಸಲು ತಿರಸ್ಕರಿಸಿದೆ. ಇತ್ತ ಬಿಸಿಸಿಐನ ಗೌರವಾನ್ವಿತ ಕಾರ್ಯಾಧ್ಯಕ್ಷರಾದ ಜಯ್ ಶಾ ಇದೇ ಸಭೆಯ ವೇಳೆ ಐಸಿಸಿ ಕ್ರಿಕೆಟ್ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ.

KL Rahulಗೆ ಪಾಪ ಹೀಗಾಗಬಾರದಿತ್ತು | Oneindia Kannada

ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸರಣಿಯನ್ನು ಪುನರ್ ಆರಂಭಿಸುವ ಚಿಂತನೆ ನಡೆಸಿದ್ದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ರಮೀಜ್ ರಾಜಾಗೆ ಈ ಸಭೆಯ ಮೂಲಕ ಭಾರೀ ಹಿನ್ನಡೆಯಾಗಿದೆ. ಕಳೆದ ವರ್ಷ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದ್ದ ನ್ಯೂಜಿಲೆಂಡ್ ಇನ್ನೇನು ಕೆಲ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ ಎನ್ನುವಾಗ ಭದ್ರತೆಯ ಕಾರಣವನ್ನು ನೀಡಿ ಸರಣಿಯಿಂದ ಹಿಂದೆ ಸರಿದಿತ್ತು. ಹೀಗೆ ನ್ಯೂಜಿಲೆಂಡ್ ಹಿಂದೆ ಸರಿದ ನಂತರ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್‌ ಮನವೊಲಿಸಿ ವರ್ಷಗಳ ನಂತರ ತವರಿನಲ್ಲೇ ಆಸ್ಟ್ರೇಲಿಯಾ ವಿರುದ್ಧ ಸರಣಿಗಳನ್ನು ಏರ್ಪಡಿಸಿದ ಪಾಕಿಸ್ತಾನ ಟೆಸ್ಟ್, ಏಕದಿನ ಹಾಗೂ ಟಿ ಟ್ವೆಂಟಿ ಈ 3 ಸರಣಿಗಳನ್ನು ಕೂಡ ಯಶಸ್ವಿಯಾಗಿ ಆಯೋಜಿಸಿತ್ತು. ಹೀಗೆ ಆಸ್ಟ್ರೇಲಿಯಾ ವಿರುದ್ಧ ಸರಣಿಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತ ವಿರುದ್ಧದ ಸರಣಿಯನ್ನು ಆಯೋಜಿಸಲು ಹೋಗಿ ಕೈ ಸುಟ್ಟುಕೊಂಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, April 10, 2022, 23:11 [IST]
Other articles published on Apr 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X