ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಅಮಾನತುಗೊಳಿಸುವಂತೆ ಬಿಸಿಸಿಐ ಕೋರಿದ ಸಚಿನ್ ಅಭಿಮಾನಿ!

ಸಚಿನ್ ಗೆ ಅವಮಾನ ಮಾಡಿದ ICC..! | Ben Stokes | Oneindia Kannada
ICC repeats Ben Stokes over Sachin Tendulkar ‘greatest cricketer’ comment

ನವದೆಹಲಿ, ಆಗಸ್ಟ್ 29: ಇಂಗ್ಲೆಂಡ್‌ ಆಲ್‌ ರೌಂಡರ್ ಬೆನ್ ಸ್ಟೋಕ್ಸ್‌ ಹೊಗಳುವ ಭರದಲ್ಲಿ ಅವರನ್ನು ಸರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನೆಂದು ಬಿಂಬಿಸಲು ಹೊರಟ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಅನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಕ್ರಿಕೆಟ್ ಅಭಿಮಾನಿ ಐಸಿಸಿಯನ್ನು ಅಮಾನತುಗೊಳಿಸುವಂತೆ ತಮಾಷೆಯಾಗಿ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.

ಭಾರತ vs ವಿಂಡೀಸ್: ಧೋನಿ ಧಾಖಲೆ ಸರಿಗಟ್ಟಲಿದ್ದಾರೆ ವಿರಾಟ್ ಕೊಹ್ಲಿಭಾರತ vs ವಿಂಡೀಸ್: ಧೋನಿ ಧಾಖಲೆ ಸರಿಗಟ್ಟಲಿದ್ದಾರೆ ವಿರಾಟ್ ಕೊಹ್ಲಿ

ಇಂಗ್ಲೆಂಡ್‌-ಆಸ್ಟ್ರೇಲಿಯಾ ನಡುವಣ 3ನೇ ಆ್ಯಷಸ್ ಟೆಸ್ಟ್‌ನಲ್ಲಿ ಬೆನ್ ಸ್ಟೋಕ್ಸ್ ಮಾರಕ ಬೌಲಿಂಗ್, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಸೋಲಬೇಕಿದ್ದ ಇಂಗ್ಲೆಂಡ್ ಪವಾಡ ರೀತಿಯಲ್ಲಿ ಗೆದ್ದಿತ್ತು. ಆ ಬಳಿಕ ಐಸಿಸಿ ವಿವಾದಾತ್ಮಕವಾಗಿ ಟ್ವೀಟ್‌ ಮಾಡಿತ್ತು.

ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮತ್ತು ಬೆನ್ ಸ್ಟೋಕ್ಸ್ ಅವರಿರುವ ಚಿತ್ರವನ್ನು ಬಳಸಿ ಟ್ವೀಟ್ ಮಾಡಿದ್ದ 'ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್' ಅಧಿಕೃತ ಖಾತೆ, 'ಸರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಮತ್ತು ಸಚಿನ್ ತೆಂಡೂಲ್ಕರ್' ಎಂದು ಬರೆದುಕೊಂಡಿತ್ತು. ನೆಟ್ಟಿಗರು ಐಸಿಸಿ ಕಾಲೆಳೆಯೋಕೆ ಅಲ್ಲಿಂದ ಶುರು ಮಾಡಿದ್ದರು.

ಇರುವೆ ಬಿಟ್ಟುಕೊಂಡ ಐಸಿಸಿ

ಕ್ರಿಕೆಟ್ ವರ್ಲ್ಡ್ ಕಪ್‌ ಟ್ವೀಟ್‌ ಅನ್ನು ರೀ ಟ್ವೀಟ್ ಮಾಡಿದ್ದ ಐಸಿಸಿ ಮತ್ತೆ ಮೈಮೇಲೆ ಇರುವೆ ಬಿಟ್ಟುಕೊಂಡಿತ್ತು. 'ನಿಮಗೆ ಹೇಳಿದೆ' ಎಂದು ಟ್ವೀಟ್‌ ಜೊತೆಗೆ ಬರೆದುಕೊಂಡಿದ್ದ ಐಸಿಸಿ ಮುಂದೆ ಕಣ್ಣು ಹೊಡೆಯುವ ಇಮೋಜಿ ಇರಿಸಿ ಅದರ ಮುಂದೆ ಕ್ರಿಕೆಟ್ ವರ್ಲ್ಡ್ ಕಪ್‌ ಟ್ವಿಟರ್ ಲಿಂಗ್‌ ಅನ್ನು ಹಾಕಿಕೊಂಡಿದೆ.

ಸ್ಟೋಕ್ಸ್ ಹೊಗಳಿದ್ದೇಕೆ

ಸ್ಟೋಕ್ಸ್ ಹೊಗಳಿದ್ದೇಕೆ

3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕೇವಲ 67 ರನ್‌ಗೆ ಆಲ್ ಔಟ್ ಆಗಿತ್ತು. ಹೀಗಾಗಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ 358 ರನ್‌ಗಳ ಅಗತ್ಯವಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬೇಗನೆ ವಿಕೆಟ್ ಕಳೆದು ಸೋಲಿನಂಚಿನಲ್ಲಿತ್ತು. ಆದರೆ ಗಮನಾರ್ಹ ಬ್ಯಾಟಿಂಗ್ ತೋರಿಸಿದ್ದ ಸ್ಟೋಕ್ಸ್ ಅಜೇಯ 135 ರನ್ ಸೇರಿಸಿ ಇಂಗ್ಲೆಂಡ್ ತಂಡವನ್ನು 1 ವಿಕೆಟ್‌ನಿಂದ ಗೆಲ್ಲಿಸಿದ್ದರು.

ಸಚಿನ್‌ಗೆ ಹೆಚ್ಚು ಗೌರವ

ಐಸಿಸಿ ಇಂಥ ಕ್ಷುಲ್ಲಕ ಟ್ವೀಟ್‌ಗಳಿಗಿಂತ ಸಚಿನ್‌ಗೆ ಹೆಚ್ಚು ಗೌರವವಿದೆ. 90ರ ದಶಕದಲ್ಲಿ ಸಚಿನ್, ಭಾರತ ಕ್ರಿಕೆಟ್‌ ತಂಡವನ್ನು ಗೆಲ್ಲಿಸಲು ಅನೇಕ ಸಾರಿ ಹೊಯ್ದಾಡಿದ್ದರು. ವ್ಯತ್ಯಾಸವಿಷ್ಟೇ ಆಗ ಟ್ವಿಟರ್ರೇ ಇರಲಿಲ್ಲ ಎಂದು ತೌಕಿರ್ ಅಹ್ಮದ್ ಬರೆದುಕೊಂಡಿದ್ದಾರೆ.

ಕಣ್ಣುಬಿಟ್ಟು ನೋಡಿ

ಐಸಿಸಿಯ ಈ ಟ್ವೀಟ್ ಬಳಿಕ ಸಚಿನ್ ತನ್ನ ಕ್ರಿಕೆಟ್ ವೃತ್ತಿ ಬದುಕಿನ ಅಂಕಿ-ಅಂಶಗಳನ್ನು ಐಸಿಸಿಗೆ ತೋರಿಸುತ್ತಿರುವುದು ಎಂದು ಇನ್ನೊಂದು ತಮಾಷೆಯ ಟ್ವೀಟ್ ಇದೆ.

ಅಮಾನತುಗೊಳಿಸಿ

ಐಸಿಸಿಯ ಇಂಥ ಕ್ಷುಲ್ಲಕ ಟ್ವೀಟ್‌ಗಳಿಗಾಗಿ ಬಿಸಿಸಿಐ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಐಸಿಸಿಯನ್ನು ಅಮಾನತುಗೊಳಿಸಬೇಕು ಎಂದು ಇಲ್ಲೊಬ್ಬರು ಟ್ವೀಟ್ ಮೂಲಕ ಕೋರಿಕೊಂಡಿದ್ದಾರೆ (ಬಿಸಿಸಿಐಯು ಐಸಿಸಿ ಕೆಳಗಡೆ ಬರುತ್ತದೆ. ಬಿಸಿಸಿಐಯನ್ನು ಅಮಾನತುಗೊಳಿಸುವ ಹಕ್ಕು ಐಸಿಸಿಗಿದೆ ಹೊರತು ಐಸಿಸಿಯನ್ನು ಬಿಸಿಸಿಐ ಅಮಾನತುಗೊಳಿಸಲಾರದು. ಆದರಿದು ತಮಾಷೆಯ ಟ್ವೀಟ್ ಅಷ್ಟೇ).

Story first published: Thursday, August 29, 2019, 18:56 [IST]
Other articles published on Aug 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X