ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದ ಭಾರತ ಟಿ20ಯಲ್ಲಿ ಕುಸಿತ

ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ಐಸಿಸಿ ಟ್ವೆಂಟಿ–20 ಅಂತರರಾಷ್ಟ್ರೀಯ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ದುಬೈ, ಮೇ 03 : ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿಕೆ ಕಂಡಿರುವ ಭಾರತ ತಂಡ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಕುಸಿತು ಕಂಡಿದೆ.

ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ಐಸಿಸಿ ಟ್ವೆಂಟಿ-20 ಅಂತರರಾಷ್ಟ್ರೀಯ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ಆರು ಪಾಯಿಂಟ್‌ ಗಳ ಕುಸಿತ ಕಂಡು 118 ಅಂಕಗಳನ್ನು ಹೊಂದಿದೆ.[ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಭಾರತ]

ICC T20 Rankings: India slip to 4th place, New Zealand on top after annual update

2009ರಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಗೆದ್ದುಕೊಂಡಿದ್ದ ಪಾಕಿಸ್ತಾನ ತಂಡ ಭಾರತಕ್ಕಿಂತ ಮೂರು ಪಾಯಿಂಟ್ಸ್ ಹೆಚ್ಚು ಪಡೆದು ಮೂರನೇ ಸ್ಥಾನದಲ್ಲಿದೆ.

5 ಅಂಕಗಳನ್ನು ಏರಿಕೆ ಕಂಡಿರುವ ಇಂಗ್ಲೆಂಡ್‌ 121 ಪಾಯಿಂಟ್ಸ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಎರಡು ಪಾಯಿಂಟ್ಸ್ ಗಳಲ್ಲಿ ಕುಸಿತ ಕಂಡರೂ ಎಯೊನ್ ಮಾರ್ಗನ್‌ ನಾಯಕತ್ವದ ನ್ಯೂಜಿಲೆಂಡ್ ತಂಡ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ಆರು ಸ್ಥಾನಗಳಲ್ಲಿ ಕುಸಿತ ಕಂಡು ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿದೆ. ಇನ್ನು ಆಸ್ಟ್ರೇಲಿಯಾ ಆರನೇ ಸ್ಥಾನದಲ್ಲಿದೆ.

ಟೆಸ್ಟ್ ಆಡದ ಆಫ್ಘಾನಿಸ್ತಾನ ಮತ್ತು ನೆದರ್ಲೆಂಡ್ಸ್ ತಂಡಗಳು ಕ್ರಮವಾಗಿ 90 ಮತ್ತು 49 ಪಾಯಿಂಟ್ಸ್ ಪಡೆದು ಒಂಬತ್ತು ಹಾಗೂ 14ನೇ ಸ್ಥಾನದಲ್ಲಿವೆ.

ಆಸ್ಟ್ರೇಲಿಯಾ ತಂಡವನ್ನು ಸೇರಿ ಮೊದಲ ಒಂಬತ್ತು ಸ್ಥಾನದಲ್ಲಿರುವ ತಂಡಗಳು ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿವೆ.

ಉಳಿದ ಎಂಟು ತಂಡಗಳು ಅರ್ಹತಾ ಸುತ್ತಿನ ಪಂದ್ಯ ಆಡಬೇಕಿದೆ. 2019ರಲ್ಲಿ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X