ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಶ್ರೇಯಾಂಕ ಪಟ್ಟಿ: ಸೂರ್ಯಕುಮಾರ್ ಯಾದವ್, ವೆಂಕಟೇಶ್ ಐಯ್ಯರ್ ಭಾರೀ ಏರಿಕೆ

ICC t20 rankings: Indian batter Suryakumar and Venkatesh Iyer make big jumps in recent rankings

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಮುಕ್ತಾಯವಾಗಿದ್ದು ಮತ್ತೊಂದು ಸರಣಿಯನ್ನಾಡಲು ಭಾರತ ತಂಡ ಸಜ್ಜಾಗಿದೆ. ಈ ಸಂದರ್ಭದಲ್ಲಿ ಐಸಿಸಿ ನೂತನ ಟಿ20 ಶ್ರೇಯಾಂಕಪಟ್ಟಿ ಬಿಡುಗಡೆಗೊಳಿಸಿದ್ದು ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಇಬ್ಬರು ಆಟಗಾರರು ಭಾರೀ ಏರಿಕೆ ಕಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಮಿಂಚು ಹರಿಸಿದ ಭಾರತದ ಮಧ್ಯಮಕ್ರಮಾಂಕದ ಆಟಗಾರರಾದ ಸೂರ್ಯಕುಮಾರ್ ಯಾದವ್ ಹಾಗೂ ಆಲ್‌ರೌಂಡರ್ ವೆಂಕಟೇಶ್ ಐಯ್ಯರ್ ಬ್ಯಾಟಿಂಗ್ ವಿಭಾಗದಲ್ಲಿ ದೊಡ್ಡ ಪ್ರಗತಿ ಸಾಧಿಸಿದ್ದಾರೆ.

ಬ್ಯಾಟರ್‌ಗಳ ವಿಭಾಗದಲ್ಲಿ ಸೂರ್ಯಕುಮಾರ್ ಯಾದವ್ 21ನೇ ಸ್ಥಾನಕ್ಕೆ ಏರಿಕೆ ಕಂಡಿದ್ದರೆ ಇತ್ತೀಚೆಗಷ್ಟೇ ಟಿ20 ಮಾದರಿಗೆ ಪದಾರ್ಪಣೆ ಮಾಡಿರುವ ವೆಂಕಟೇಶ್ ಐಯ್ಯರ್ 115ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧಧ ಸರಣಿಯಲ್ಲಿ ಈ ಇಬ್ಬರು ಕೂಡ ಅದ್ಭುತವಾದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಸೂರ್ಯಕುಮಾರ್ ಯಾದವ್ ವಿಂಡೀಸ್ ವಿರುದ್ಧಧ ಸರನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಭಾರತ ವಿರುದ್ಧ ಕಣಕ್ಕಿಳಿಯುವ ಮೊದಲೇ ಲಂಕಾಗೆ ಹಿನ್ನಡೆ: ಶ್ರೀಲಂಕಾದ ಬೌಲಿಂಗ್ ಬ್ರಹ್ಮಾಸ್ತ್ರವೇ ಇಲ್ಲಭಾರತ ವಿರುದ್ಧ ಕಣಕ್ಕಿಳಿಯುವ ಮೊದಲೇ ಲಂಕಾಗೆ ಹಿನ್ನಡೆ: ಶ್ರೀಲಂಕಾದ ಬೌಲಿಂಗ್ ಬ್ರಹ್ಮಾಸ್ತ್ರವೇ ಇಲ್ಲ

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ನೀಡಿದ ಈ ಪ್ರದರ್ಶನದ ಕಾರಣದಿಂದಾಗಿ ಸೂರ್ಯಕುಮಾರ್ ಯಾದವ್ ಶ್ರೇಯಾಂಕಪಟ್ಟಿಯಲ್ಲಿ 35 ಸ್ಥಾನಗಳ ಎರಿಕೆ ಕಂಡು 21ನೇ ಸ್ಥಾನವನ್ನು ತಲುಪಿದ್ದಾರೆ. ಇನ್ನು ವೆಂಕಟೇಶ್ ಐಯ್ಯರ್ ಬರೊಬ್ಬರಿ 203 ಸ್ಥಾನಗಳ ಏರಿಕೆ ಕಂಡಿದ್ದು 115ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಎರಡು ಸ್ಥಾನಗಳ ಕುಸಿತ ಕಂಡಿದ್ದು 6ನೇ ಸ್ಥಾನಕ್ಕೆ ಇಳಿದಿದ್ದಾರೆ. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟರ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಹಾಗೂ ಆಳ್‌ರೌಂಡರ್‌ಗಳ ವಿಭಾಗದಲ್ಲಿ ಭಾರತದ ಯಾವ ಆಟಗಾರ ಕೂಡ ಅಗ್ರ 10ರಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇನ್ನು ಭಾರತದ ವಿರುದ್ಧದ ಸರಣಿಯಲ್ಲಿ ಏಕಾಂಗಿ ಹೋರಾಟವನ್ನು ನೀಡಿದ ನಿಕೋಲಸ್ ಪೂರನ್ ಐದು ಸ್ಥಾನಗಳ ಏರಿಕೆ ಕಂಡಿದ್ದು 13ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಅಂತ್ಯವಾಗಿರುವ ಶ್ರೀಲಂಕಾ vs ಆಸ್ಟ್ರೇಲಿಯಾ ಟಿ20 ಸರಣಿ ಕೂಡ ಶ್ರೇಯಾಂಕಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಬೌಲರ್‌ಗಳ ವಿಭಾಗದಲ್ಲಿ ಆಸ್ಟ್ರೇಲಿಯಾದ ಆಷ್ಟನ್ ಅಗರ್ ಟಾಪ್ 10ರಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದು 9ನೇ ಸ್ಥಾನಕ್ಕೇರಿದ್ದಾರೆ. ಇನ್ನು ಶ್ರೀಲಂಕಾದ ಆಟಗಾರ ಮಹೇಶ್ ತೀಕ್ಷಣ ವೃತ್ತಿ ಜೀವನದ ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡಿದ್ದು 17ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ಭಾರತ vs ಶ್ರೀಲಂಕಾ ಪ್ರಥಮ ಟಿ20: ಪಂದ್ಯದ ಆರಂಭ, ನೇರಪ್ರಸಾರ ಹಾಗೂ ಸಂಭಾವ್ಯ ಪ್ಲೇಯಿಂಗ್ XIಭಾರತ vs ಶ್ರೀಲಂಕಾ ಪ್ರಥಮ ಟಿ20: ಪಂದ್ಯದ ಆರಂಭ, ನೇರಪ್ರಸಾರ ಹಾಗೂ ಸಂಭಾವ್ಯ ಪ್ಲೇಯಿಂಗ್ XI

ಆಸ್ಟ್ರೇಲಿಯಾ ಲೀಗ್ ಆಡೋಕೆ ನಾವ್ ರೆಡಿ ! ರೈನಾ ಭಾವುಕ ವೀಡಿಯೋ ವೈರಲ್ !! | Oneindia Kannada

ಇನ್ನು ಟೆಸ್ಟ್ ಮಾದರಿಯ ಶ್ರೇಯಾಂಕಪಟ್ಟಿಯಲ್ಲಿ ಟೀಮ್ ಇಂಡಿಯಾದ ನುತನ ನಾಯಕ ರೋಹಿತ್ ಶರ್ಮಾ 6ನೇ ಸ್ಥಾನದಲ್ಲಿದ್ದರೆ ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ. ಇನ್ನು ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಜಸ್ಪ್ರೀತ್ ಬೂಮ್ರಾ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ 10ನಲ್ಲಿರುವ ಭಾರತದ ಇಬ್ಬರು ಬೌಲರ್‌ಗಳಾಗಿದ್ದು ಕ್ರಮವಾಗಿ 2ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ. ಇನ್ನು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ 2ನೇ ಸ್ಥಾನದಲ್ಲಿದ್ದು ಮತ್ತೋರ್ವ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ 3ನೇ ಸ್ಥಾನದಲ್ಲಿದ್ದಾರೆ.

Story first published: Wednesday, February 23, 2022, 17:27 [IST]
Other articles published on Feb 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X