ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಟೂರ್ನಿಯ ಶ್ರೇಷ್ಠ ಆಟಗಾರ ಯಾರು? ಅಂತಿಮ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯರು!

ICC T20 World Cup 2022: The shortlisted names for the Player of the tournament

ಟಿ20 ವಿಶ್ವಕಪ್‌ನ ಅಂತಿಮ ಘಟ್ಟವನ್ನು ತಲುಪಿದ್ದು ಫೈನಲ್ ಪಂದ್ಯ ಮಾತ್ರವೇ ಬಾಕಿಯಿದೆ. ಭಾನುವಾರ ಅಂತಿಮ ಹಣಾಹಣಿ ನಡೆಯಲಿದ್ದು ಈ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ. ಈ ಪಟ್ಟವನ್ನು ಅಲಂಕರಿಸುವವರು ಯಾರು ಎಂಬ ಕುತೂಹಲ ಉಳಿದಿರುವಂತೆಯೇ ಈ ಬಾರಿಯ ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆಯುವ ಆಟಗಾರ ಯಾರು ಎಂಬುದು ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ಟೂರ್ನಿಯಲ್ಲಿ ಒಟ್ಟಾರೆಯಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಓರ್ವ ಆಟಗಾರನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರತಿಷ್ಠಿತ ಟೂರ್ನಿಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಳ್ಳಲು ಸಾಕಷ್ಟು ಶ್ರೇಷ್ಠ ಆಟಗಾರರ ಮಧ್ಯೆ ಪೈಪೋಟಿಗಳು ನಡೆಯುತ್ತವೆ. ಈಗ ಟೂರ್ನಿ ಅಂತಿಮ ಹಂತವನ್ನು ತಲುಪಿರುವ ಕಾರಣ ಐಸಿಸಿ ಈ ಪ್ರಶಸ್ತಿಗಾಗಿ ಪೈಪೋಟಿಯಲ್ಲಿರುವ 9 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕುತೂಹಲಕಾರಿ ಸಂಗತಿಯೆಂದರೆ ಈ ಪೈಕಿ ಮೊದಲ ಎರಡು ಸ್ಥಾನಗಳಲ್ಲಿ ಭಾರತೀಯ ಆಟಗಾರರೇ ಇದ್ದಾರೆ. ಇನ್ನು ಅಭಿಮಾನಿಗಳು ಕೂಡ ಈ ಪ್ರಶಸ್ತಿಗಾಗಿ ಅಂತಿಮ ಪಟ್ಟಿಯಲ್ಲಿರುವ ಆಟಗಾರರಿಗೆ ಓಟ್ ಮಾಡುವ ಮೂಲಕ ಭಾಗಿಯಾಗಲು ಐಸಿಸಿ ಅವಕಾಶ ನೀಡಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿ ಓಟ್ ಮಾಡುವ ಅವಕಾಶವಿದೆ.

ಬಿಗ್‌ಬ್ಯಾಷ್‌ನಲ್ಲಿ ಆಡಿದ್ದು ಆಂಗ್ಲರಿಗೆ ಅನುಕೂಲವಾಯಿತು, ಬಿಸಿಸಿಐ ಈ ಬಗ್ಗೆ ಯೋಚಿಸಲಿ ಎಂದ ದ್ರಾವಿಡ್ಬಿಗ್‌ಬ್ಯಾಷ್‌ನಲ್ಲಿ ಆಡಿದ್ದು ಆಂಗ್ಲರಿಗೆ ಅನುಕೂಲವಾಯಿತು, ಬಿಸಿಸಿಐ ಈ ಬಗ್ಗೆ ಯೋಚಿಸಲಿ ಎಂದ ದ್ರಾವಿಡ್

ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗಾಗಿ ಐಸಿಸಿ ಬಿಡುಗಡೆ ಮಾಡಿರುವ 9 ಆಟಗಾರರ ಪೈಕಿ ಇಬ್ಬರು ಭಾರತೀಯ ಆಟಗಾರರಾಗಿದ್ದರೆ ಇಬ್ಬರು ಪಾಕಿಸ್ತಾನದ ಆಟಗಾರರಿದ್ದಾರೆ. ಇನ್ನು ಶ್ರೀಲಂಕಾ ಹಾಗೂ ಜಿಂಬಾಬ್ವೆ ತಂಡದ ತಲಾ ಒಬ್ಬೊಬ್ಬ ಆಟಗಾರ ಹಾಗೂ ಇಂಗ್ಲೆಂಡ್ ತಂಡ ಮೂವರು ಆಟಗಾರರು ಈ ಪ್ರಶಸ್ತಿಯ ಅಂತಿಮ ಸ್ಪರ್ಧೆಯಲ್ಲಿದ್ದಾರೆ.

ಟೀಮ್ ಇಂಡಿಯಾದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಮೊದಲ ಎರಡು ಸ್ಥಾನದಲ್ಲಿದ್ದರೆ ಪಾಕಿಸ್ಥಾನದ ವೇಗಿ ಶಾಹೀನ್ ಅಫ್ರಿದಿ ಹಾಗೂ ಶದಬ್ ಖಾನ್ ನಂತರದ ಸ್ಥಾನದಲ್ಲಿದ್ದಾರೆ. ಜಿಂಬಾಬ್ವೆ ತಂಡದ ಸಿಕಂದರ್ ರಾಜಾ, ಶ್ರೀಲಂಕಾದ ವನಿಂದು ಹಸರಂಗಾ ಕೂಡ ಈ ಪ್ರಶಸ್ತಿಗಾಗಿ ಪೈಪೋಟಿಯಲ್ಲಿದ್ದಾರೆ. ಬಳಿಕ ಇಂಗ್ಲೆಂಡ್ ತಂಡದ ಆಟಗಾರರಾದ ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್ ಹಾಗೂ ಸ್ಯಾಮ್ ಕರನ್ ಹೆಸರು ಕೂಡ ಇದೆ.

ಚಹಾಲ್, ರವಿ ಬಿಷ್ಣೋಯಿ ಬಿಟ್ಟು ಅಶ್ವಿನ್‌ರನ್ನು ನಾನು ಆಯ್ಕೆ ಮಾಡುತ್ತಿರಲಿಲ್ಲ: ಫಾರೂಕ್ ಎಂಜಿನಿಯರ್ಚಹಾಲ್, ರವಿ ಬಿಷ್ಣೋಯಿ ಬಿಟ್ಟು ಅಶ್ವಿನ್‌ರನ್ನು ನಾನು ಆಯ್ಕೆ ಮಾಡುತ್ತಿರಲಿಲ್ಲ: ಫಾರೂಕ್ ಎಂಜಿನಿಯರ್

ಯಾರ ಮುಡಿಗೆ ಚಾಂಪಿಯನ್ ಪಟ್ಟ: ಈ ಬಾರಿಯ ವಿಶ್ವಕಪ್‌ ಫೈನಲ್‌ನಲ್ಲಿ ಸೆಣೆಸಾಟ ನಡೆಸಲಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಈಗಾಗಲೇ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಒಂದೊಂದು ಬಾರಿ ಎತ್ತಿ ಹಿಡಿದ ಸಾಧನೆ ಮಾಡಿದೆ. ಪಾಕಿಸ್ತಾನ 2009ರಲ್ಲಿ ಈ ಸಾಧನೆ ಮಾಡಿದ್ದರೆ ಇಂಗ್ಲೆಂಡ್ ತಂಡ 2010ರಲ್ಲಿ ಪ್ರಶಸ್ತಿ ಗೆದ್ದು ಬೀಗಿತ್ತು. ಇದೀಗ ಎರಡನೇ ಬಾರಿ ಈ ಸಾಧನೆ ಮಾಡುವ ಅವಕಾಶ ಈ ಎರಡು ತಂಡಗಳಿಗೂ ಇದೆ. ಇದರಲ್ಲಿ ಯಾವ ತಂಡ ಮೇಲುಗೈ ಸಾಧಿಸಿ ಟೂರ್ನಿಯ ಚಾಂಪಿಯನ್ ತಂಡವಾಗಲಿದೆ ಎಂಬುದಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ. ಮುಂದಿನ ಭಾನುವಾರ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಈ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.

Story first published: Friday, November 11, 2022, 16:10 [IST]
Other articles published on Nov 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X