ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಜೇಸನ್ ರಾಯ್‌ ಸ್ಫೋಟಕ ಶತಕ, ಬಾಂಗ್ಲಾ ಬೆಂಡೆತ್ತಿದ ಇಂಗ್ಲೆಂಡ್

ICC World Cup 2019 England vs Bangladesh, Match 12 - Live Score

ಕಾರ್ಡಿಫ್‌, ಜೂನ್ 8: ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ನಲ್ಲಿ ಶನಿವಾರ (ಜೂನ್ 8) ವಿಶ್ವಕಪ್ 12ನೇ ಪಂದ್ಯಲ್ಲಿ ಬಾಂಗ್ಲಾದೇಶ ವಿರುದ್ಧ ಆತಿಥೇಯ ಇಂಗ್ಲೆಂಡ್ 106 ರನ್ ಭರ್ಜರಿ ಗೆಲುವನ್ನಾಚರಿಸಿದೆ. ಜೇಸನ್ ರಾಯ್ ಸ್ಫೋಟಕ ಶತಕ ಆತಿಥೇಯರಿಗೆ ಗೆಲುವು ತಂದಿತು. ಇದರೊಂದಿಗೆ ಶಕೀಬ್ ಅಲ್ ಹಸನ್ ಬಾಂಗ್ಲಾ ಗೆಲುವಿಗಾಗಿ ಮಾಡಿದ ಹೋರಾಟ ವ್ಯರ್ಥವೆನಿಸಿತು.

ಮೈಖೇಲ್ ಕನ್ನಡ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟ

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಇಯಾನ್ ಮಾರ್ಗನ್ ಬಳಗಕ್ಕೆ ಆರಂಭಿಕ ಆಟಗಾರರಾದ ಜೇಸನ್ ರಾಯ್ ಮತ್ತು ಜಾನಿ ಬೇರ್ಸ್ಟೋವ್ ಅವರ ಭರ್ಜರಿ ಜೊತೆಯಾಟದ ಬೆಂಬಲ ದೊರೆಯಿತು. ಜೇಸನ್ ರಾಯ್ 153, ಜಾನಿ ಬೇರ್ಸ್ಟೋವ್ 51, ಜೋಸ್ ಬಟ್ಲರ್ 64, ಇಯಾನ್ ಮಾರ್ಗನ್ 35 ರನ್‌ ಸೇರಿಸಿದ್ದು ತಂಡದ ರನ್ ಹೆಚ್ಚಳಕ್ಕೆ ಗಣನೀಯವೆನಿಸಿತು.

ಸೇನೆ ಮುದ್ರೆಯಿರುವ ಗ್ಲೌಸ್ ಅನ್ನು ಧೋನಿ ಬಳಸುವಂತಿಲ್ಲ ಏಕೆ?

ಇಂಗ್ಲೆಂಡ್ 50 ಓವರ್‌ ಮುಕ್ತಾಯಕ್ಕೆ 6 ವಿಕೆಟ್ ನಷ್ಟದಲ್ಲಿ 386 ರನ್ ಗಳಿಸಿತು. ಇಂಗ್ಲೆಂಡ್ ಇನ್ನಿಂಗ್ಸ್‌ ವೇಳೆ ಬಾಂಗ್ಲಾದೇಶದ ಬೌಲರ್‌ಗಳಾದ ಮೊಹಮ್ಮದ್ ಸೈಫುದ್ದೀನ್ ಮತ್ತು ಮೆಹಿದಿ ಹಸನ್ ತಲಾ 2 ವಿಕೆಟ್‌ಗಳೊಂದಿಗೆ ಮಿಂಚಿದರು.

ಇಂಗ್ಲೆಂಡ್ vs ಬಾಂಗ್ಲಾದೇಶ ಪಂದ್ಯ, ಜೂನ್ 7, Live ಸ್ಕೋರ್‌ಕಾರ್ಡ್

1
43655

ಗುರಿ ಬೆನ್ನತ್ತಿದ ಬಾಂಗ್ಲಾದಿಂದ ತಮೀಮ್ ಇಕ್ಬಾಲ್ 19, ಸೌಮ್ಯ ಸರ್ಕಾರ್ 2, ಮುಷ್ಫಿಕರ್ ರಹೀಮ್ 44, ಮೊಹಮ್ಮದ್ ಮಿಥುನ್ 0 ರನ್‌ಗೆ ನಿರ್ಗಮಿಸಿರು. ಶಕೀಬ್ ಅಲ್ ಹಸನ್ (121 ರನ್) ಅವರ ಶತಕದಾಸರೆ ಲಭಿಸಿತಾದರೂ ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಬಾಂಗ್ಲಾ ಬೆಲೆ ತೆರಲೇಬೇಕಾಯ್ತು.

ಬಾಂಗ್ಲಾದೇಶ 48.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 280 ರನ್ ಪೇರಿಸಿ ಶರಣಾಯಿತು. ಜೋಫ್ರಾ ಆರ್ಚರ್ 3, ಬೆನ್ ಸ್ಟೋಕ್ಸ್ 3 ಮತ್ತು ಮಾರ್ಕ್ ವುಡ್ 2, ಲಿಯಾಮ್ ಪ್ಲಾಂಕೆಟ್ 1, ಆದಿಲ್ ರಶೀದ್ ತಲಾ 1 ವಿಕೆಟ್‌ನೊಂದಿಗೆ ಬಾಂಗ್ಲಾ ಸೋಲಿಗೆ ಕಾರಣರಾದರು. ಜೇಸನ್ ರಾಯ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಇಂಗ್ಲೆಂಡ್ ತಂಡ: ಜೇಸನ್ ರಾಯ್, ಜಾನಿ ಬೈರ್ಸ್ಟೊ, ಜೋ ರೂಟ್, ಇಯಾನ್ ಮಾರ್ಗನ್ (ಸಿ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್.

ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಮ್ (ವಿಕೆ), ಮೊಹಮ್ಮದ್ ಮಿಥುನ್, ಮಹಮ್ಮುದುಲ್ಲಾ, ಮೊಸಾದೆಕ್ ಹುಸೇನ್, ಮೊಹಮ್ಮದ್ ಸೈಫುದ್ದೀನ್, ಮೆಹಿದೀ ಹಸನ್, ಮಶ್ರಾಫೆ ಮೊರ್ತಾಜಾ (ಸಿ), ಮುಸ್ತಾಫಿಜರ್ ರಹಮಾನ್.

{headtohead_cricket_2_10}

Story first published: Monday, June 10, 2019, 10:51 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X