ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೇನೆ ಮುದ್ರೆಯಿರುವ ಗ್ಲೌಸ್ ಅನ್ನು ಧೋನಿ ಬಳಸುವಂತಿಲ್ಲ ಏಕೆ?

ICC World Cup 2019 : ಭಾರತೀಯರ ಮನವಿಯನ್ನು ತಿರಸ್ಕರಿಸಿದ ICC..? | Oneindia Kannada

ಲಂಡನ್, ಜೂನ್ 08 : ಭಾರತದ ತಂಡದ ಪ್ರಮುಖ ಆಟಗಾರ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವಕಪ್‌ ವೇಳೆ ಧರಿಸಿದ್ದ ಗ್ಲೌಸ್ ವಿಶ್ವದಾದ್ಯಂತ ಸುದ್ದಿ ಮಾಡುತ್ತಿದೆ ಮತ್ತು ಭಾರತದಲ್ಲಿ ದೇಶಪ್ರೇಮದ ಅಲೆಯನ್ನೇ ಎಬ್ಬಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಧರಿಸಿದ್ದ ಕೀಪಿಂಗ್ ಗ್ಲೌಸ್‌ನ ಮೇಲೆ ಭಾರತೀಯ ಸೇನೆಯ ಬಲಿದಾನದ ಚಿತ್ರ ಇತ್ತು, ಇದು ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಣ್ಣು ಕುಕ್ಕಿತ್ತು. ಈ ಗ್ಲೌಸ್‌ ಅನ್ನು ಧರಿಸಿ ಕ್ರಿಕೆಟ್ ಆಡುವಂತಿಲ್ಲವೆಂದು ಐಸಿಸಿ ಧೋನಿಗೆ ಸೂಚನೆ ನೀಡಿದೆ.

ಎಂಎಸ್ ಧೋನಿ ಗ್ಲೌಸಿನಲ್ಲಿದ್ದ ಸೇನೆಯ ಮುದ್ರೆ ತೆಗೆಯುವಂತೆ ಹೇಳಿದ ಐಸಿಸಿ ಎಂಎಸ್ ಧೋನಿ ಗ್ಲೌಸಿನಲ್ಲಿದ್ದ ಸೇನೆಯ ಮುದ್ರೆ ತೆಗೆಯುವಂತೆ ಹೇಳಿದ ಐಸಿಸಿ

ಧೋನಿ ಅದೇ ಗ್ಲೌಸ್ ಬಳಸಲು ಅವಕಾಶ ನೀಡುವಂತೆ ಬಿಸಿಸಿಐ ಮನವಿ ಮಾಡಿತ್ತು. ಆದರೆ ಈ ಮನವಿಯನ್ನೂ ತಿರಸ್ಕರಿಸಿರುವ ಐಸಿಸಿ ಗ್ಲೌಸ್‌ನ ತಯಾರಕರ ಎರಡು ಲೋಗೋ ಬಿಟ್ಟು, ಗ್ಲೌಸ್‌ ಮೇಲೆ ಬೇರೆ ಇನ್ನಾವುದೇ ಚಿತ್ರಗಳಿರಬಾರದು ಎಂದು ಹೇಳಿದೆ.

ಧೋನಿ ಅವರು ಗ್ಲೌಸ್‌ ಮೇಲೆ ಬಳಸಿರುವ ಚಿಹ್ನೆಯೂ ಯಾವುದೇ ರಾಜಕೀಯ ಅಥವಾ ಲಾಭಾಪೇಕ್ಷೆಯ ಚಿಹ್ನೆಯಲ್ಲವಾದರೂ ಐಸಿಸಿಯು ಈ ರೀತಿಯ ಗ್ಲೌಸ್ ಅನ್ನು ಬಳಸುವುದಕ್ಕೆ ನಿಷೇಧ ಹೇರಿದೆ. ಇದು ಭಾರತದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಪಾಕ್ ತಂಡ ಮೈದಾನದಲ್ಲಿ ನಮಾಜ್ ಮಾಡುತ್ತವೆ

ಪಾಕ್ ತಂಡ ಮೈದಾನದಲ್ಲಿ ನಮಾಜ್ ಮಾಡುತ್ತವೆ

ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳಿಗೆ ಮೈದಾನದಲ್ಲಿಯೇ ನಮಾಜ್ ಮಾಡಲು ಅವಕಾಶ ಕೊಟ್ಟಿರುವ ಐಸಿಸಿ ಧೋನಿ ಅವರು ಅವರಿಷ್ಟದ ಗ್ಲೌಸ್ ಬಳಸಲು ಅನುಮತಿ ಏಕೆ ನಿರಾಕರಿಸುತ್ತಿದೆ ಎಂದು ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ.

ನಾವು ಜೊತೆಗಿದ್ದೇವೆ, ಗ್ಲೌಸ್ ತೆಗೆಯಬೇಡಿ: ಧೋನಿ ಬೆಂಬಲಕ್ಕೆ ಸಾವಿರ ಟ್ವೀಟ್

ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಧೋನಿ

ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಧೋನಿ

ಧೋನಿ ಅವರು ಭಾರತೀಯ ಸೇನೆಯ ಲೆಫ್ಟಿನಂಕ್ ಕರ್ನಲ್ ಆಗಿದ್ದಾರೆ. ಈ ಹುದ್ದೆಯನ್ನು ಸೇನೆಯು ಅವರಿಗೆ ಗೌರವ ರೂಪವಾಗಿ ನೀಡಿದೆ. ಹಾಗಾಗಿಯೇ ಅವರು ಸೇನೆಯ ಮೇಲೆ ಗೌರವದಿಂದಾಗಿ ಬಲಿದಾನದ ಚಿಹ್ನೆಯನ್ನು ಗ್ಲೌಸ್‌ ಮೇಲೆ ಬಳಸಿದ್ದರು.

ವೆಸ್ಟ್‌ ಇಂಡೀಸ್ ನ ಶೆಲ್ಡನ್ ಸೇನೆಗೆ ಗೌರವಿಸುತ್ತಾರೆ

ವೆಸ್ಟ್‌ ಇಂಡೀಸ್ ನ ಶೆಲ್ಡನ್ ಸೇನೆಗೆ ಗೌರವಿಸುತ್ತಾರೆ

ವೆಸ್ಟ್‌ ಇಂಡೀಸ್‌ನ ಬೌಲರ್ ಶೆಲ್ಡನ್ ಕೊಟ್ರೆಲ್ ಅವರು ವಿಕೆಟ್ ಪಡೆದಾಗೆಲ್ಲಾ ಸೆಲ್ಯೂಟ್ ಹೊಡೆದು ತಮ್ಮ ಸೇನೆಗೆ ಗೌರವ ಸೂಚಿಸುತ್ತಾರೆ ಇದನ್ನು ಐಸಿಸಿ ವಿರೋಧಿಸಿಲ್ಲ. ಸೇನೆಯ ಅಧಿಕಾರಿ ಆಗಿರುವ ಶೆಲ್ಡನ್ ನನ್ನ ಜಮೈಕಾ ಡಿಫೆನ್ಸ್‌ ಫೋರ್ಸ್‌ಗೆ ಗೌರವ ಸೂಚಿಸಲು ಹೀಗೆ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಯಾವುದೇ ನಿರ್ಬಂಧ ಇಲ್ಲ ಆದರೆ ಧೋನಿಗೆ ಮಾತ್ರವೇ ನಿರ್ಬಂಧ ಹೇರಲಾಗಿದೆ.

ಐಸಿಸಿ ನಿಯಮ ಏನು ಹೇಳುತ್ತದೆ?

ಐಸಿಸಿ ನಿಯಮ ಏನು ಹೇಳುತ್ತದೆ?

ಐಸಿಸಿ ನಿಯಮದ ಪ್ರಕಾರ, ಪ್ರಾಯೋಜಿತದ ಹೊರತಾದ ಯಾವುದೇ ಚಿಹ್ನೆಯನ್ನು, ಹೇಳಿಕೆಯನ್ನು, ಅಕ್ಷರಗಳನ್ನು, ಪದಗಳನ್ನು ಕ್ರೀಡಾಪಟುಗಳು ಧರಿಸುವಂತಿಲ್ಲ, ಹಾಗಾಗಿಯೇ ಐಸಿಸಿ ಧೋನಿ ಅವರು ಬಲಿದಾನ ಚಿಹ್ನೆ ಇರುವ ಗ್ಲೌಸ್ ಬಳಸದಂತೆ ನಿರ್ಬಂಧ ಹೇರಿದೆ.

Story first published: Saturday, June 8, 2019, 12:22 [IST]
Other articles published on Jun 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X