ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ವಿಂಡೀಸ್ ವಿರುದ್ಧ ಅನಗತ್ಯ ದಾಖಲೆ ಬರೆದ ಪಾಕಿಸ್ತಾನ

ICC World Cup 2019: Pakistan register unwanted record against West Indies

ನಾಟಿಂಗ್ಹ್ಯಾಮ್, ಮೇ 31: ಒಶಾನೆ ಥಾಮಸ್, ನಾಯಕ ಜೇಸನ್ ಹೋಲ್ಡರ್ ಮತ್ತು ಆ್ಯಂಡ್ರೆ ರಸೆಲ್ ಮಾರಕ ಬೌಲಿಂಗ್‌ಗೆ ನಲುಗಿದ ಪಾಕಿಸ್ತಾನ ತಂಡ, ಐಸಿಸಿ ವಿಶ್ವಕಪ್ 2ನೇ ಪಂದ್ಯದಲ್ಲಿ ವೆಸ್ಟ ಇಂಡೀಸ್ ವಿರುದ್ಧ ಕೇವಲ 105 ರನ್‌ಗೆ ಸರ್ವ ಪತನ ಕಂಡು ಇನ್ನಿಂಗ್ಸ್ ಮುಗಿಸಿತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ನಾಟಿಂಗ್ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಶುಕ್ರವಾರದ (ಮೇ 31) ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ 21.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 105 ರನ್‌ಗೆ ಇನ್ನಿಂಗ್ಸ್ ಮುಗಿಸಿ ಬೇಡದ ದಾಖಲೆಗೂ ಕಾರಣವಾಗಿದೆ. ಪಂದ್ಯದಲ್ಲಿ ಥಾಮಸ್ 27 ರನ್‌ಗೆ 4, ಹೋಲ್ಡರ್ 42 ರನ್‌ಗೆ 3 ಮತ್ತು ರಸೆಲ್ 4 ರನ್‌ಗೆ 2 ವಿಕೆಟ್ ಕೆಡವಿ ಪಾಕ್ ಮುಖಭಂಗಕ್ಕೆ ಕಾರಣರಾಗಿದ್ದರು.

ವೆಸ್ಟ್ ಇಂಡೀಸ್ vs ಪಾಕಿಸ್ತಾನ, ಮೇ 31, ವಿಶ್ವಕಪ್ Live ಸ್ಕೋರ್‌ಕಾರ್ಡ್

1
43645

ವಿಶ್ವಕಪ್‌: ಸೋಲಿಗೆ ಕಾರಣ ಹೇಳಿದ ದ.ಆಫ್ರಿಕಾ ನಾಯಕ ಫಾಫ್‌ ಡು'ಪ್ಲೆಸಿಸ್‌ವಿಶ್ವಕಪ್‌: ಸೋಲಿಗೆ ಕಾರಣ ಹೇಳಿದ ದ.ಆಫ್ರಿಕಾ ನಾಯಕ ಫಾಫ್‌ ಡು'ಪ್ಲೆಸಿಸ್‌

ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಪೇರಿಸಿದ 2ನೇ ಅತೀ ಕಡಿಮೆ ರನ್‌ ಆಗಿ ಶುಕ್ರವಾರದ ಪಂದ್ಯದ ಮೊತ್ತ ಗುರುತಿಸಿಕೊಂಡಿತು. ಇದಕ್ಕೂ ಮುನ್ನವೂ ಪಾಕ್ ತಂಡ ಅನೇಕ ಪಂದ್ಯಗಳಲ್ಲಿ ಅತೀ ಕಡಿಮೆ ರನ್ ಬಾರಿಸಿತ್ತು. ಇದರಲ್ಲಿ ಅಡಿಲೇಡ್‌ನಲ್ಲಿ 1992ರಲ್ಲಿ ಇಂಗ್ಲೆಂಡ್ ವಿರುದ್ಧ ಪೇರಿಸಿದ 74 ರನ್ ಅತ್ಯಂತ ಕಡಿಮೆ ತಂಡದ ಮೊತ್ತವೆಂಬ ದಾಖಲೆ ನಿರ್ಮಿಸಿದೆ.

ಪಾಕಿಸ್ತಾನ ಅತೀ ಕಡಿಮೆ ರನ್ ಗಳಿಸಿದ ವಿಶ್ವಕಪ್ ಪಂದ್ಯಗಳು
1. 74 ರನ್, ಇಂಗ್ಲೆಂಡ್ ವಿರುದ್ಧ, ಆಡಲೇಡ್, 1992
2. 105 ರನ್, ವೆಸ್ಟ್ ಇಂಡೀಸ್ ವಿರುದ್ಧ, ನಾಟಿಂಗ್ಹ್ಯಾಮ್, 2019
3. 132 ರನ್, ಆಸ್ಟ್ರೇಲಿಯಾ ವಿರುದ್ಧ, ಲಾರ್ಡ್ಸ್, 1999
4. 132 ರನ್, ಐರ್ಲೆಂಡ್ ವಿರುದ್ಧ, ಕಿಂಗ್ಸ್‌ಟನ್ 2007
5. 134 ಇಂಗ್ಲೆಂಡ್ ವಿರುದ್ಧ ಕೇಪ್ ಟೌನ್ 2003

23 ವರ್ಷಗಳ ಹಿಂದಿನ ವಿಶ್ವಕಪ್ ದಾಖಲೆ ಸರಿದೂಗಿಸಿದ ಬೆನ್ ಸ್ಟೋಕ್ಸ್!23 ವರ್ಷಗಳ ಹಿಂದಿನ ವಿಶ್ವಕಪ್ ದಾಖಲೆ ಸರಿದೂಗಿಸಿದ ಬೆನ್ ಸ್ಟೋಕ್ಸ್!

ಮತ್ತೊಂದು ಗಮ್ಮತ್ತಿನ ವಿಚಾರವೆಂದರೆ, ಪಾಕಿಸ್ತಾನ ತಂಡ ವಿಶ್ವಕಪ್ ಇತಿಹಾಸದಲ್ಲಿ ಅತೀ ಕಡಿಮೆ ರನ್ ಪೇರಿಸಿದ ಕೆಟ್ಟ ದಾಖಲೆಯಿರುವ 1992ರ ಇಸವಿಯಲ್ಲೇ ಪಾಕ್ ತಂಡ ಚೊಚ್ಚಲ ಮತ್ತು ಏಕಮಾತ್ರ ವಿಶ್ವಕಪ್ ಜಯಿಸಿತ್ತು. ಈ ಆವೃತ್ತಿಯಲ್ಲಿ ಇಮ್ರಾನ್ ಖಾನ್ ಅವರು ಪಾಕ್ ತಂಡವನ್ನು ಮುನ್ನಡೆಸಿದ್ದರು.

{headtohead_cricket_8_5}

Story first published: Friday, May 31, 2019, 18:14 [IST]
Other articles published on May 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X