ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಒತ್ತಡದಲ್ಲಿದ್ದರು: ಫಿಂಚ್

ICC World Cup 2019 : ಭಾರತದ ವಿರುದ್ಧ ಡೇವಿಡ್ ವಾರ್ನರ್ ಆಡಲಿಲ್ಲ ಯಾಕೆ ಗೊತ್ತಾ..? | Oneindia Kannada
ICC World Cup: David Warner was under pressure says Aaron Finch

ಲಂಡನ್, ಜೂನ್ 10: ಭಾರತ vs ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯದಲ್ಲಿ ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ತಮ್ಮ ಎಂದಿನ ಪ್ರಖರ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಈ ಪಂದ್ಯದಲ್ಲಿ ವಾರ್ನರ್ ಅರ್ಧಶತಕ (56 ರನ್) ಬಾರಿಸಿದ್ದರಾದರೂ ಅದಕ್ಕಾಗಿ 84 ಎಸೆತಗಳನ್ನು ಬಳಸಿಕೊಂಡಿದ್ದರು. ವಾರ್ನರ್ ಅವರ ಈ ನಿಧಾನಗತಿಯ ಬ್ಯಾಟಿಂಗ್‌ಗೆ ನಾಯಕ ಆ್ಯರನ್ ಫಿಂಚ್ ಕಾರಣ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾನುವಾರ (ಜೂನ್ 9) ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿಗೆ ಒಂದರ್ಥದಲ್ಲಿ ಡೇವಿಡ್ ವಾರ್ನರ್ ಕೂಡ ಕಾರಣವೆ. ಭಾರತ ನೀಡಿದ್ದ 353 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 50 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 316 ರನ್ ಬಾರಿಸಿ 36 ರನ್‌ಗಳಿಂದ ಸೋತಿತು. ಒಂದುವೇಳೆ ವಾರ್ನರ್ 56 ರನ್ನಿಗೆ ಹೆಚ್ಚುವರಿ 28 ಎಸೆತಗಳನ್ನು ಬಳಸಿಕೊಳ್ಳಲಿದ್ದರೂ ಆಸೀಸ್ ಗೆಲುವಿಗೆ ಅವಕಾಶವಿತ್ತು.

ನನ್ನನ್ನು ತಂಡದಿಂದ ಹೊರದಬ್ಬಿದ್ದಾರೆ: ಕಣ್ಣೀರಿಟ್ಟ ಸ್ಫೋಟಕ ಬ್ಯಾಟ್ಸ್‌ಮನ್ನನ್ನನ್ನು ತಂಡದಿಂದ ಹೊರದಬ್ಬಿದ್ದಾರೆ: ಕಣ್ಣೀರಿಟ್ಟ ಸ್ಫೋಟಕ ಬ್ಯಾಟ್ಸ್‌ಮನ್

ಪಂದ್ಯದ ಬಳಿಕ ಮಾತನಾಡಿದ ಆ್ಯರನ್ ಫಿಂಚ್, 'ಡೇವಿಡ್ ವಾರ್ನರ್ ಆಡುವಾಗ ವೈಯಕ್ತಿಕ ಪ್ಲ್ಯಾನಾಗಲಿ ಅಥವಾ ತಂಡ ಪ್ಲ್ಯಾನಾಗಲಿ ಏನೂ ಇರಲಿಲ್ಲ. ಸಾಲದ್ದಕ್ಕೆ ಭಾರತದ ಬೌಲರ್‌ಗಳು ಅದ್ಭುತ ಬೌಲಿಂಗ್ ಕೂಡ ಪ್ರದರ್ಶನಿಸಿದರು. ಹೀಗಾಗಿ ವಾರ್ನರ್ ಒತ್ತಡಕ್ಕೀಡಾದರು' ಎಂದಿರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ 'ಸಿಕ್ಸ್‌ ಕಿಂಗ್‌'ನ ಕಡೇ ಮಾತುಗಳುಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ 'ಸಿಕ್ಸ್‌ ಕಿಂಗ್‌'ನ ಕಡೇ ಮಾತುಗಳು

'ಅವರು (ಭಾರತದ ಬೌಲರ್‌ಗಳು) ರನ್ ಕದಿಯಲು ಸಾಧ್ಯವಾಗದಂತ ಎಸೆತಗಳನ್ನು ಎಸೆದರು. ಹೀಗಾಗಿ ಪಂದ್ಯಾರಂಭದಲ್ಲಿ ನಮಗೆ ರನ್ ಗಳಿಸಲೇ ಸಾಧ್ಯವಾಗಲಿಲ್ಲ' ಎಂದು ಫಿಂಚ್ ವಿವರಿಸಿದರು. ಈ ಪಂದ್ಯದ ಬಳಿಕ ಆಸ್ಟ್ರೇಲಿಯಾ ಆಡಿರುವ ಮೂರರಲ್ಲಿ 2 ಜಯ ಕಂಡಿದ್ದರೆ, ಭಾರತ 2ರಲ್ಲಿ ಎರಡೂ ಗೆಲುವು ದಾಖಲಿಸಿದಂತಾಗಿದೆ.

Story first published: Monday, June 10, 2019, 17:43 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X