ಈ ಕಾರಣಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾರತ ಗೆಲ್ಲುವುದು ಕಷ್ಟ: ಸಂಜಯ್ ಮಂಜ್ರೇಕರ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಈ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಲಿದ್ದು ಯಾರು ಟೆಸ್ಟ್ ಮಾದರಿಯ ಚಾಂಪಿಯನ್ ಪಟ್ಟಕ್ಕೇರಿಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಈ ಐತಿಹಾಸಿಕ ಮುಖಾಮುಖಿಯಲ್ಲಿ ಗೆಲುವು ಸಾಧಿಸಲು ಎರಡು ತಂಡಗಳು ಕೂಡ ಬಲಿಷ್ಠ ತಂಡಗಳನ್ನು ಕಣಕ್ಕಿಳಿಸುತ್ತಿದೆ. ಭಾರತ ತಂಡ ಈಗಾಗಲೇ 20 ಆಟಗಾರರ ತಂಡವನ್ನು ಪ್ರಕಟಿಸಿದೆ. ಆದರೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಈ ಐತಿಹಾಸಿಕ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವುದು ಕಠಿಣ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಅದಕ್ಕೆ ಪ್ರಮುಖ ಕಾರಣವನ್ನು ಕೂಡ ಅವರು ನೀಡಿದ್ದಾರೆ. ಮುಂದೆ ಓದಿ..

ಐಪಿಎಲ್: ಪವರ್‌ಪ್ಲೇನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?

ಕೀವಿಸ್ ಗೆಲುವಿಗೆ ಪೂರಕ ವಾತಾವರಣ

ಕೀವಿಸ್ ಗೆಲುವಿಗೆ ಪೂರಕ ವಾತಾವರಣ

ಈ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತ ತಂಡಕ್ಕಿಂತ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು ಬೇಕಿರುವ ಪೂರಕ ಅವಕಾಶಗಳು ಹೆಚ್ಚಾಗಿದೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಂದ್ಯ ನಡೆಯುವ ಸೌಥಾಂಪ್ಟನ್ ಹಾಗೂ ನ್ಯೂಜಿಲೆಂಡ್‌ನ ವಾತಾವರಣ ಒಂದೇ ರೀತಿಯಾಗಿರುವುದು ಇದಕ್ಕೆ ಕಾರಣವೆಂದು ಮಂಜ್ರೇಕರ್ ಹೇಳಿಕೊಂಡಿದ್ದಾರೆ.

ವಾತಾವರಣದ ಲಾಭ

ವಾತಾವರಣದ ಲಾಭ

"ಕೇವಲ ಹವಾಮಾನ ಹಾಗೂ ಪಿಚ್ ವಿಚಾರಗಳನ್ನು ಗಮನಿಸಿಕೊಂಡರೆ ಸೌಥಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕಿಂತ ಹೆಚ್ಚಿನ ಅವಕಾಶವನ್ನು ಹೊಂದಿದೆ. ಭಾರತ ತಂಡಕ್ಕಿಂತ ಹೆಚ್ಚು ತವರಿನ ಪರಿಸ್ಥಿತಿಯ ಲಾಭವನ್ನು ಅವರು ಹೊಂದಿದ್ದಾರೆ. ವಿಶೇಷವಾಗಿ ನ್ಯೂಜಿಲೆಂಡ್ ತಂಡದಲ್ಲಿರುವ ಬೌಲರ್‌ಗಳು ಇಂತಾ ಪರಿಸ್ಥಿತಿಗಳಲ್ಲಿ ಸ್ವಾಭಾವಿಕವಾಗಿಯೇ ಅತ್ಯುತ್ತಮವಾಗಿರುತ್ತಾರೆ" ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾಗೆ ತಡೆ

ಟೀಮ್ ಇಂಡಿಯಾಗೆ ತಡೆ

"ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಭಾರತದಲ್ಲಿ ನಡೆಯುತ್ತಿದ್ದರೆ ನ್ಯೂಜಿಲೆಂಡ್ ತಂಡ ಮೂರೇ ದಿನದಲ್ಲಿ ಗಂಟುಮೂಟೆ ಕಟ್ಟಬೇಕಿತ್ತು. ಆದರೆ ಇದು ಇಂಗ್ಲೆಂಡ್‌ನಲ್ಲಿ ಆಡಲಾಗುತ್ತಿದೆ. ಅದು ಕೂಡ ಬೇಸಿಗೆಯ ಮೊದಲಾರ್ಧದಲ್ಲಿ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ನ್ಯೂಜಿಲೆಂಡ್ ತಂಡ ಭಾರತಕ್ಕೆ ದೊಡ್ಡ ತಡೆಯಾಗುವಂತೆ ಮಾಡಿದೆ" ಎಂದು ಸಂಜಯ್ ಮಂಜ್ರೇಕರ್ ಹೇಳಿಕೆಯನ್ನು ನೀಡಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ತಂಡ

ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ತಂಡ

ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಕ್ಯಾಪ್ಟನ್), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಆಕ್ಸಾರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ

For Quick Alerts
ALLOW NOTIFICATIONS
For Daily Alerts
Story first published: Friday, May 14, 2021, 13:01 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X