ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ : ಈ ದಾಖಲೆಗಳ ಮೇಲೆ ವಿರಾಟ್ ಕೊಹ್ಲಿ ಕಣ್ಣು

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದೂಡಿಕೆಯಾದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದತ್ತ ಇದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಈ ಐತಿಹಾಸಿಕ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜೂನ್ 18ರಿಂದ ಆರಂಭವಾಗಲಿದೆ.

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಗೆಲ್ಲುವುದರ ಮೂಲಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಡಿಯಲ್ಲಿ ಮೊದಲ ಐಸಿಸಿ ಟ್ರೋಫಿಯೊಂದನ್ನು ಗೆಲ್ಲುವ ತವಕದಲ್ಲಿದ್ದಾರೆ. ಆದರೆ ನಾಯಕನಾಗಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಈಗಾಗಲೇ ಸಾಕಷ್ಟು ಸರಣಿಗಳಲ್ಲಿ ಜಯ ಸಾಧಿಸಿದ್ದು ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಟೀಂ ಇಂಡಿಯಾ ವಶಪಡಿಸಿಕೊಂಡಿತ್ತು.

ಅತ್ಯುತ್ತಮ ಟೆಸ್ಟ್ ಕ್ರಿಕೆಟ್‌ ನಾಯಕ ಮಾತ್ರವಲ್ಲದೇ ವಿರಾಟ್ ಕೊಹ್ಲಿ ಓರ್ವ ಅತ್ಯದ್ಭುತ ಟೆಸ್ಟ್ ಬ್ಯಾಟ್ಸ್‌ಮನ್‌ ಕೂಡ ಹೌದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ, ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಮೂಲಕ 3 ವಿಶೇಷ ದಾಖಲೆಗಳನ್ನು ಪೂರೈಸುವ ಹಂತದಲ್ಲಿದ್ದಾರೆ. ವಿರಾಟ್ ಕೊಹ್ಲಿ ಕಣ್ಣಿಟ್ಟಿರುವ ಆ 3ದಾಖಲೆಗಳ ಪಟ್ಟಿ ಮುಂದೆ ಇದೆ ಓದಿ.

ನ್ಯೂಜಿಲೆಂಡ್‌ ವಿರುದ್ಧ 1000 ಟೆಸ್ಟ್ ರನ್‌ಗಳು

ನ್ಯೂಜಿಲೆಂಡ್‌ ವಿರುದ್ಧ 1000 ಟೆಸ್ಟ್ ರನ್‌ಗಳು

ಟೆಸ್ಟ್‌ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಇದುವರೆಗೂ 773 ರನ್‌ಗಳನ್ನು ಬಾರಿಸಿದ್ದು 1000 ರನ್ ಪೂರೈಸಲು 227 ರನ್‌ಗಳ ಅಗತ್ಯತೆಯಿದ್ದು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ವಿರಾಟ್ ಕೊಹ್ಲಿ ಅವರಿಗೆ ಈ ಮೈಲಿಗಲ್ಲನ್ನು ಸಾಧಿಸಲು ಉತ್ತಮ ಅವಕಾಶವಾಗಿದೆ.

ಅತ್ಯಧಿಕ ದ್ವಿಶತಕಗಳು

ಅತ್ಯಧಿಕ ದ್ವಿಶತಕಗಳು

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಇದುವರೆಗೂ 7 ದ್ವಿಶತಕಗಳನ್ನು ಸಿಡಿಸಿದ್ದು ಭಾರತೀಯ ಕ್ರಿಕೆಟಿಗರ ಪೈಕಿ ಅತ್ಯಧಿಕ ಟೆಸ್ಟ್ ದ್ವಿಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಕೊಹ್ಲಿ ಈಗಾಗಲೇ ನಿರ್ಮಿಸಿದ್ದಾರೆ. ಶ್ರೀಲಂಕಾದ ಜಯವರ್ಧನೆ ಮತ್ತು ಇಂಗ್ಲೆಂಡ್‌ನ ಹ್ಯಾಮಂಡ್ ಕೂಡ ತಲಾ 7 ಟೆಸ್ಟ್ ದ್ವಿಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 8ನೇ ದ್ವಿಶತಕ ಬಾರಿಸಿದರೆ ಶ್ರೀಲಂಕಾದ ಜಯವರ್ಧನೆ ಮತ್ತು ಇಂಗ್ಲೆಂಡ್‌ನ ಹ್ಯಾಮಂಡ್‌ರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ದ್ವಿಶತಕ ಬಾರಿಸಿದ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಲಿದ್ದಾರೆ.

ನಾಯಕನಾಗಿ 6000 ರನ್‌ಗಳು

ನಾಯಕನಾಗಿ 6000 ರನ್‌ಗಳು

ವಿರಾಟ್ ಕೊಹ್ಲಿ ನಾಯಕನಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ಇದುವರೆಗೂ 5932 ರನ್‌ಗಳನ್ನು ಬಾರಿಸಿದ್ದು ನಾಯಕನಾಗಿ 6000 ರನ್ ಪೂರೈಸಲು 68 ರನ್‌ಗಳ ಅಗತ್ಯತೆಯಿದೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಈ ಮೈಲಿಗಲ್ಲನ್ನು ಮುಟ್ಟುವುದರ ಮೂಲಕ ವಿರಾಟ್ ಕೊಹ್ಲಿ ನಾಯಕನಾಗಿ 6000 ಟೆಸ್ಟ್ ರನ್ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆಯಲಿದ್ದಾರೆ. ವಿರಾಟ್ ಕೊಹ್ಲಿ ಹೊರತುಪಡಿಸಿ ಭಾರತದ ಮಾಜಿ ನಾಯಕರಾದ ಎಂ ಎಸ್ ಧೋನಿ 3454, ಸುನೀಲ್ ಗವಾಸ್ಕರ್ 3449 ಮತ್ತು ಅಜರುದ್ದೀನ್ 2856 ಟೆಸ್ಟ್ ರನ್‌ಗಳನ್ನು ನಾಯಕರಾಗಿ ಬಾರಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, May 10, 2021, 13:43 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X