ಈ ಕಾರಣದಿಂದಲೇ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂದ ಇನ್ಜಮಾಮ್ ಉಲ್ ಹಕ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭದ ನೆರವಿನಿಂದ ಒಳ್ಳೆಯ ರನ್ ಕಲೆ ಹಾಕಿದೆ.

ಭಾರತ vs ಇಂಗ್ಲೆಂಡ್: ಅಶ್ವಿನ್‌ ಬದಲು ಇಶಾಂತ್‌ಗೆ ತಂಡದಲ್ಲಿ ಸ್ಥಾನ ನೀಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಕೊಹ್ಲಿಭಾರತ vs ಇಂಗ್ಲೆಂಡ್: ಅಶ್ವಿನ್‌ ಬದಲು ಇಶಾಂತ್‌ಗೆ ತಂಡದಲ್ಲಿ ಸ್ಥಾನ ನೀಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಕೊಹ್ಲಿ

ಆರಂಭಿಕ ಆಟಗಾರನಾಗಿ ಬಂದ ರೋಹಿತ್ ಶರ್ಮಾ 145 ಎಸೆತಗಳಲ್ಲಿ 83 ರನ್ ಬಾರಿಸಿದರೆ, ಮತ್ತೋರ್ವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಮೊದಲ ದಿನದಾಟದಂತ್ಯಕ್ಕೆ 248 ಎಸೆತಗಳಲ್ಲಿ ಅಜೇಯ 127 ರನ್ ಗಳಿಸಿ ಎರಡನೇ ದಿನದಾಟವನ್ನು ಆರಂಭಿಸಲು ಕಾಯುತ್ತಿದ್ದಾರೆ. ರೋಹಿತ್ ಶರ್ಮಾ ಪೆವಿಲಿಯನ್ ಸೇರಿದ ಬಳಿಕ ಮೈದಾನಕ್ಕೆ ಆಗಮಿಸಿದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಚೇತೇಶ್ವರ್ ಪೂಜಾರ ಕೇವಲ 9 ರನ್ ಬಾರಿಸಿ ನಿರಾಸೆ ಮೂಡಿಸಿದರು. ಚೇತೇಶ್ವರ್ ಪೂಜಾರ ಔಟ್ ಆಗುತ್ತಿದ್ದಂತೆ ಮೈದಾನಕ್ಕಿಳಿದ ಭಾರತದ ನಾಯಕ ವಿರಾಟ್ ಕೊಹ್ಲಿ 103 ಎಸೆತಗಳನ್ನು ಎದುರಿಸಿ 42 ರನ್ ಗಳಿಸಿ ಓಲ್ಲಿ ರಾಬಿನ್ಸನ್ ಎಸೆತದಲ್ಲಿ ಜೋ ರೂಟ್‌ಗೆ ಕ್ಯಾಚ್ ನೀಡಿ ಒಂದೊಳ್ಳೆ ಪ್ರದರ್ಶನ ನೀಡುವ ಹೊಸ್ತಿಲಲ್ಲಿ ಎಡವಿದರು.

ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾ

ಇನ್ನು ವಿರಾಟ್ ಕೊಹ್ಲಿ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಜೇಮ್ಸ್ ಆ್ಯಂಡರ್ಸನ್ ಮೊದಲನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಔಟ್ ಆಗಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಭಾರತದ ನಾಯಕ ಎಂಬ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಹಲವಾರು ಬಾರಿ ಕ್ಯಾಚ್ ನೀಡಿ ಪರದಾಡಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಕುರಿತು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಮಾತನಾಡಿದ್ದು ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದಾರೆ.

ವಿರಾಟ್ ಕೊಹ್ಲಿ ತನ್ನ ಆಕ್ರಮಣಶೀಲತೆಯನ್ನು ಬಿಡಬಾರದು

ವಿರಾಟ್ ಕೊಹ್ಲಿ ತನ್ನ ಆಕ್ರಮಣಶೀಲತೆಯನ್ನು ಬಿಡಬಾರದು

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 42 ರನ್ ಬಾರಿಸಿ ಪೆವಿಲಿಯನ್ ಕಡೆ ಪಯಣ ಬೆಳೆಸಿದರು. ವಿರಾಟ್ ಕೊಹ್ಲಿ ಆಡಿದ ಈ ಇನ್ನಿಂಗ್ಸ್ ಕುರಿತು ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಇಂಜಮಾಮ್ ಉಲ್ ಹಕ್ ವಿರಾಟ್ ಕೊಹ್ಲಿ ಯಾವುದೇ ಕಾರಣಕ್ಕೂ ತನ್ನ ಆಕ್ರಮಣಶೀಲತೆಯ ಗುಣವನ್ನು ಬಿಡಬಾರದು ಎಂದಿದ್ದಾರೆ. ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟವನ್ನು ಆಡಿದರೆ ಮಾತ್ರ ಆತನ ನಿಜವಾದ ಪ್ರದರ್ಶನವನ್ನು ನಾವು ನೋಡಬಹುದು ಎಂದು ಇಂಜಮಾಮ್ ಉಲ್ ಹಕ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಆಟದ ಸ್ಟ್ರೈಕ್ ರೇಟ್ ಇದಲ್ಲವೇ ಅಲ್ಲ!

ವಿರಾಟ್ ಕೊಹ್ಲಿ ಆಟದ ಸ್ಟ್ರೈಕ್ ರೇಟ್ ಇದಲ್ಲವೇ ಅಲ್ಲ!

ಇನ್ನು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 103 ಎಸೆತಗಳಲ್ಲಿ 42 ರನ್ ಬಾರಿಸಿ 40 ಸ್ಟ್ರೈಕ್ ರೇಟ್ ಜತೆಗೆ ತಮ್ಮ ಅಟವನ್ನು ಮುಗಿಸಿದರು. ಈ ಕುರಿತು ಸಹ ಮಾತನಾಡಿರುವ ಇಂಜಮಾಮ್ ಉಲ್ ಹಕ್ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಆಟವನ್ನು ಬಿಟ್ಟು ಬ್ಯಾಟ್ ಬೀಸಿದರೆ ಕಡಿಮೆ ಸ್ಟ್ರೈಕ್ ರೇಟ್ ಜೊತೆಗೆ ಈ ರೀತಿಯ ಆಟ ಬರುತ್ತದೆ, ಹೀಗಾಗಿ ವಿರಾಟ್ ಕೊಹ್ಲಿ ಎಂದಿನಂತೆ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಬೇಕಿದೆ ಎಂದು ಇಂಜಮಾಮ್ ಉಲ್ ಹಕ್ ಹೇಳಿದರು.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಟಗಾರರು ವಿಶೇಷ ಉಡುಪಿನಲ್ಲಿ ಕಂಡರು | Oneindia Kannada
ಒಂದೆರಡು ಪಂದ್ಯಗಳ ವಿಫಲತೆಗೆ ವಿರಾಟ್ ತಲೆಕೆಡಿಸಿಕೊಳ್ಳಬಾರದು

ಒಂದೆರಡು ಪಂದ್ಯಗಳ ವಿಫಲತೆಗೆ ವಿರಾಟ್ ತಲೆಕೆಡಿಸಿಕೊಳ್ಳಬಾರದು

ಇನ್ನೂ ಮುಂದುವರೆದು ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ ಕುರಿತು ಮಾತನಾಡಿದ ಇಂಜಮಾಮ್ ಉಲ್ ಹಕ್ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ತಲೆಕೆಡಿಸಿಕೊಂಡು ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂದು ನಿಧಾನ ಗತಿಯ ಆಟವನ್ನು ಆಡಿದ್ದಾರೆ. ಆದರೆ ನನ್ನ ಅಭಿಪ್ರಾಯ ಕೇಳುವುದಾದರೆ ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರ ಒಂದೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ತಲೆ ಕೆಡಿಸಿಕೊಳ್ಳಬಾರದು, ತಾವು ಯಾವಾಗಲೂ ಆಡುವ ಶೈಲಿಯಲ್ಲಿಯೇ ತಮ್ಮ ಬ್ಯಾಟಿಂಗ್‌ನ್ನು ಮುಂದುವರೆಸಬೇಕೆಂದು ಇಂಜಮಾಮ್ ಉಲ್ ಹಕ್ ಸಲಹೆ ನೀಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, August 13, 2021, 13:27 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X