ಐಸಿಸಿ ಉಪಾಧ್ಯಕ್ಷರಾಗಿ ಮರು ನೇಮಕಗೊಂಡ ಇಮ್ರಾನ್ ಖವಾಜಾ

ಸಿಂಗಾಪುರದ ಇಮ್ರಾನ್ ಖವಾಜಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎರಡು ವರ್ಷಗಳ ಅವಧಿಗೆ ಉಪಾಧ್ಯಕ್ಷರನ್ನಾಗಿ ಮರು ನೇಮಕ ಮಾಡಿದೆ.

IND vs NZ: ಕಿವೀಸ್ ವಿರುದ್ಧ ಮೊದಲ ಏಕದಿನ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಶಿಖರ್ ಧವನ್IND vs NZ: ಕಿವೀಸ್ ವಿರುದ್ಧ ಮೊದಲ ಏಕದಿನ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಶಿಖರ್ ಧವನ್

ಇಮ್ರಾನ್ ಖವಾಜಾ ಪ್ರಸ್ತುತ ಐಸಿಸಿ ಬೋರ್ಡ್‌ನಲ್ಲಿ ಸಹಾಯಕ ಸದಸ್ಯ ನಿರ್ದೇಶಕ ಸ್ಥಾನವನ್ನು ಹೊಂದಿದ್ದಾರೆ. ಜುಲೈ 2022ರಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಮರು ಚುನಾಯಿತರಾಗಿದ್ದಾರೆ. ಇಮ್ರಾನ್ ಖವಾಜಾ ಅವರು 2008ರಲ್ಲಿ ಐಸಿಸಿ ಮಂಡಳಿಗೆ ಮೊದಲ ಬಾರಿಗೆ ಆಯ್ಕೆಯಾದರು. 2017ರಿಂದ ಐಸಿಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಕೆಲವು ದಿನಗಳ ಹಿಂದೆ, ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಎರಡನೇ ಎರಡು ವರ್ಷಗಳ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

IND vs NZ 1st ODI : ಭಾರತ ವಿರುದ್ಧ ಶತಕ ಬಾರಿಸಿ 23 ವರ್ಷಗಳ ಹಳೆಯ ಏಕದಿನ ದಾಖಲೆ ಮುರಿದ ಟಾಮ್ ಲ್ಯಾಥಮ್IND vs NZ 1st ODI : ಭಾರತ ವಿರುದ್ಧ ಶತಕ ಬಾರಿಸಿ 23 ವರ್ಷಗಳ ಹಳೆಯ ಏಕದಿನ ದಾಖಲೆ ಮುರಿದ ಟಾಮ್ ಲ್ಯಾಥಮ್

ಜಿಂಬಾಬ್ವೆಯ ತವೆಂಗ್ವಾ ಮುಕುಹ್ಲಾನಿ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯಿಂದ ಹಿಂದೆ ಸರಿದ ನಂತರ ಗ್ರೆಗ್ ಬಾರ್ಕ್ಲೇ ಅವಿರೋಧವಾಗಿ ಆಯ್ಕೆಯಾದರು. ಐಸಿಸಿ ಮಂಡಳಿಯು ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಚುಕ್ಕಾಣಿ ಹಿಡಿಯಲು ತನ್ನ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿತು.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ತಿಂಗಳ ಆರಂಭದಲ್ಲಿ ನಡೆದ ಮಂಡಳಿ ಸಭೆಯಲ್ಲಿ ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ (F&CA) ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿಯ ಪುರುಷರ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, November 26, 2022, 5:45 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X