ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND A vs NZ A: ಸ್ಯಾಮ್ಸನ್, ತಿಲಕ್, ಶಾರ್ದೂಲ್ ಅರ್ಧಶತಕ; ಕಿವೀಸ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

IND A vs NZ A: Samson, Tilak, Shardul Thakur Scored Half-Century; India Clean Sweep Against New Zealand

ಭಾರತ ಎ ತಂಡದ ನಾಯಕ ಸಂಜು ಸ್ಯಾಮ್ಸನ್ ಮತ್ತೊಂದು ಅಮೋಘ ಅರ್ಧಶತಕ ಬಾರಿಸುವ ಮೂಲಕ ಚೆನ್ನೈನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಎ ತಂಡವನ್ನು 106 ರನ್‌ಗಳಿಂದ ಸೋಲಿಸಲು ಸಹಾಯ ಮಾಡಿದರು ಮತ್ತು ಮಂಗಳವಾರ 3-0 ಅಂತರದಿಂದ ಸರಣಿ ಕ್ಲೀನ್‌ಸ್ವೀಪ್ ಪೂರ್ಣಗೊಳಿಸಿದರು.

ICC ODI Ranking: ನಂ.5ರಲ್ಲಿ ವೃತ್ತಿಜೀವನ ಮುಗಿಸಿದ ಜೂಲನ್; ಹರ್ಮನ್‌ಪ್ರೀತ್, ಮಂಧಾನ ಜಿಗಿತICC ODI Ranking: ನಂ.5ರಲ್ಲಿ ವೃತ್ತಿಜೀವನ ಮುಗಿಸಿದ ಜೂಲನ್; ಹರ್ಮನ್‌ಪ್ರೀತ್, ಮಂಧಾನ ಜಿಗಿತ

ಸಂಜು ಸ್ಯಾಮ್ಸನ್ (54), ತಿಲಕ್ ವರ್ಮಾ (50) ಮತ್ತು ಶಾರ್ದೂಲ್ ಠಾಕೂರ್ (51) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಭಾರತ ಎ ತಂಡವು ಮೊದಲು ಬ್ಯಾಟ್ ಮಾಡಿದ ನಂತರ 49.3 ಓವರ್‌ಗಳಲ್ಲಿ 284 ರನ್ ಗಳಿಸಿತು.

ಸಂಜು ಸ್ಯಾಮ್ಸನ್ 68 ಎಸೆತಗಳಲ್ಲಿ 54 ರನ್

ಸಂಜು ಸ್ಯಾಮ್ಸನ್ 68 ಎಸೆತಗಳಲ್ಲಿ 54 ರನ್

ನಾಯಕ ಸಂಜು ಸ್ಯಾಮ್ಸನ್ ಅವರು ತಮ್ಮ ಜವಾಬ್ದಾರಿಯುತ ಇನ್ನಿಂಗ್ಸಿನಲ್ಲಿ 68 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಭಾರತ ಎ ತಂಡದ ನಾಯಕ 3 ಪಂದ್ಯಗಳ ಸರಣಿಯಲ್ಲಿ ಅತಿ ಹೆಚ್ಚಿನ ರನ್ ಸ್ಕೋರರ್ ಆಗಿ ಕೊನೆಗೊಳಿಸಿದರು.

ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಮೂರನೇ ವಿಕೆಟ್‌ಗೆ 99 ರನ್ ಸೇರಿಸಿದರು. ತಿಲಕ್ ಅವರ 62 ಎಸೆತಗಳ ಇನ್ನಿಂಗ್ಸ್ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಇನ್ನು ಕೆಳಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ಅವರ 33 ಎಸೆತಗಳ ಮಿಂಚಿನ ಬ್ಯಾಟಿಂಗ್‌ನಲ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಒಳಗೊಂಡಿದ್ದವು.

83 ರನ್ ಗಳಿಸಿದ ಡೇನ್ ಕ್ಲೀವರ್

83 ರನ್ ಗಳಿಸಿದ ಡೇನ್ ಕ್ಲೀವರ್

ಇನ್ನು ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಹತ್ತನೇ ಓವರ್‌ನಲ್ಲಿ ಚಾಡ್ ಬೋವ್ಸ್ ವಿಕೆಟ್ ಅನ್ನು ಕಳೆದುಕೊಂಡಿತು. ಆದರೆ ಒಂದು ಕಡೆ ವಿಕೆಟ್ ಬೀಳುತ್ತಲೇ ಇದ್ದಾಗ ಆರಂಭಿಕ ಆಟಗಾರ ಡೇನ್ ಕ್ಲೀವರ್ ಒಂದು ಕ್ರೀಸ್‌ನಲ್ಲಿ ನೆಲಕಚ್ಚಿ ಆಡುತ್ತಿದ್ದರು.

89 ಎಸೆತಗಳಲ್ಲಿ ವೀರೋಚಿತ 83 ರನ್ ಗಳಿಸಿದ ಡೇನ್ ಕ್ಲೀವರ್, ಭಾರತ ತಂಡವು ನ್ಯೂಜಿಲೆಂಡ್‌ನ ಆರನೇ ವಿಕೆಟ್ ಪಡೆದಾಗ ಔಟಾದರು. ರಾಜ್ ಬಾವಾ 5.3 ಓವರ್‌ಗಳಲ್ಲಿ 11 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಅಬ್ಬರದ ಪ್ರದರ್ಶನ ನೀಡಿದರು. ಅಂತಿಮವಾಗಿ ನ್ಯೂಜಿಲೆಂಡ್ ಎ 38.3 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು.

ಮೊದಲೆರಡು ಏಕದಿನ ಪಂದ್ಯ ಗೆದ್ದಿದ್ದ ಭಾರತ

ಮೊದಲೆರಡು ಏಕದಿನ ಪಂದ್ಯ ಗೆದ್ದಿದ್ದ ಭಾರತ

ಈ ಹಿಂದೆ ಮೊದಲೆರಡು ಏಕದಿನ ಪಂದ್ಯಗಳಲ್ಲಿಯೂ ಭಾರತ ಎ ತಂಡ ಜಯಭೇರಿ ಬಾರಿಸಿತ್ತು. 34 ಓವರ್‌ಗಳಲ್ಲಿ 220 ರನ್‌ಗಳನ್ನು ಬೆನ್ನಟ್ಟಿದ ಭಾರತ ಎರಡನೇ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಅದೇ ರೀತಿ ಭಾರತ ಮೊದಲ ಪಂದ್ಯವನ್ನು ಏಳು ವಿಕೆಟ್‌ಗಳು ಕೈಯಲ್ಲಿರುವಂತೆ 168 ರನ್‌ಗಳನ್ನು ಚೇಸ್ ಮಾಡಿ ಗೆದ್ದರು.

Story first published: Tuesday, September 27, 2022, 20:39 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X