ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS 1st T20: ಹರ್ಮನ್‌ಪ್ರೀತ್ ಬಳಗಕ್ಕೆ ಆಸೀಸ್ ಮಹಿಳೆಯರ ಸವಾಲು; ಆಡುವ ಬಳಗ, ಪಂದ್ಯದ ವಿವರ

IND vs AUS: India Women vs Australia Women 1st T20 Match Preview, Playing 11, Match Details

ಶುಕ್ರವಾರ, ಡಿಸೆಂಬರ್ 9ರಂದು ನವಿ ಮುಂಬೈನಲ್ಲಿ ಪ್ರಾರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಕಠಿಣ ಸವಾಲೊಡ್ಡಲು ಸಿದ್ಧವಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಎರಡು ತಿಂಗಳು ಬಾಕಿ ಇರುವಾಗ, ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತೀಯ ಮಹಿಳಾ ತಂಡವು ಐದು ಟಿ20 ಪಂದ್ಯಗಳ ನಂತರ ಹೇಗೆ ಸಜ್ಜಾಗಿರುತ್ತಾರೆ ಎಂಬುದನ್ನು ಕಾದು ನೊಡಬೇಕು.

ರೋಹಿತ್ ಶರ್ಮಾ ODI ನಾಯಕತ್ವದಿಂದ ವಜಾಗೊಂಡರೆ, ಆ ಹುದ್ದೆಗೆ ಈ ನಾಲ್ವರ ಪೈಪೋಟಿ!ರೋಹಿತ್ ಶರ್ಮಾ ODI ನಾಯಕತ್ವದಿಂದ ವಜಾಗೊಂಡರೆ, ಆ ಹುದ್ದೆಗೆ ಈ ನಾಲ್ವರ ಪೈಪೋಟಿ!

ಮಹಿಳಾ ತಂಡದ ಮುಖ್ಯ ಕೋಚ್ ರಮೇಶ್ ಪೊವಾರ್ ಅವರನ್ನು ಟಿ20 ಸರಣಿಗೂ ಮೊದಲೇ ಎನ್‌ಸಿಎಗೆ ವರ್ಗಾವಣೆ ಮಾಡಲಾಗಿದೆ ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಹೃಷಿಕೇಶ್ ಕಾನಿಟ್ಕರ್ ಅವರನ್ನು ನಿಯೋಜಿತ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಭಾರತ ಮಹಿಳಾ ತಂಡವು ಅಕ್ಟೋಬರ್‌ನಲ್ಲಿ ಏಷ್ಯಾಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಾರ್ಹ.

ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ ನಡೆದ ಕೊನೆಯ ಮುಖಾಮುಖಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಹೋರಾಟ ನಡೆಸಿದರೂ ಪಂದ್ಯ ಗೆಲ್ಲುವಲ್ಲಿ ವಿಫಲವಾಗಿತ್ತು.

ಸ್ಮೃತಿ ಮಂಧಾನ ಹೆಚ್ಚಿನ ರನ್ ಗಳಿಸುವ ನಿರೀಕ್ಷೆ

ಸ್ಮೃತಿ ಮಂಧಾನ ಹೆಚ್ಚಿನ ರನ್ ಗಳಿಸುವ ನಿರೀಕ್ಷೆ

ತವರಿನಲ್ಲಿ ನಡೆಯುವ ಟಿ20 ಸರಣಿಯಲ್ಲಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಹೆಚ್ಚಿನ ರನ್ ಗಳಿಸುವ ನಿರೀಕ್ಷೆ ಇದೆ. ಇದೇ ವೇಳೆ ಮುಂದಿನ ತಿಂಗಳು ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಶಾರ್ಟ್ ಬಾಲ್ ವಿರುದ್ಧದ ದೌರ್ಬಲ್ಯವನ್ನು ಮೆಟ್ಟಿ ನಿಂತು ಬ್ಯಾಟಿಂಗ್ ಮಾಡಬೇಕಿದೆ.

ಇನ್ನು ಜೆಮಿಮಾ ರೋಡ್ರಿಗಸ್ ರಾಷ್ಟ್ರೀಯ ತಂಡಕ್ಕೆ ಮರಳಿದ ನಂತರ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಸ್ಥಿರವಾಗಿ ಆಡುತ್ತಿದ್ದಾರೆ. ಹರ್ಲೀನ್ ಡಿಯೋಲ್ ಮತ್ತು ಯಾಸ್ತಿಕಾ ಭಾಟಿಯಾ ಅವರು ಚಾಲೆಂಜರ್ ಟ್ರೋಫಿಯಲ್ಲಿ ಹೆಚ್ಚಿನ ರನ್ ಗಳಿಸಿ ಭರವಸೆ ಮೂಡಿಸಿದ್ದಾರೆ.

ಭಾರತ ಮಹಿಳಾ vs ಆಸ್ಟ್ರೇಲಿಯಾ ತಂಡಗಳ ಮೊದಲ ಟಿ20 ಪಂದ್ಯದ ವಿವರ

ಭಾರತ ಮಹಿಳಾ vs ಆಸ್ಟ್ರೇಲಿಯಾ ತಂಡಗಳ ಮೊದಲ ಟಿ20 ಪಂದ್ಯದ ವಿವರ

ದಿನಾಂಕ - ಡಿಸೆಂಬರ್ 9, ಶುಕ್ರವಾರ ನಡೆಯಲಿದೆ.

ಸ್ಥಳ - ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ

ಪಂದ್ಯದ ಸಮಯ - ಮೊದಲ ಟಿ20 ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸಂಜೆ 6.30ಕ್ಕೆ ಟಾಸ್ ನಡೆಯಲಿದೆ.

ಭಾರತ ಮಹಿಳಾ vs ಆಸ್ಟ್ರೇಲಿಯಾ ಮಹಿಳಾ ತಂಡಗಳ ಮೊದಲ ಟಿ20 ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಲಭ್ಯವಿದೆ.

ಭಾರತ vs ಆಸ್ಟ್ರೇಲಿಯಾ ಮಹಿಳಾ ತಂಡಗಳ ಸಂಭಾವ್ಯ 11ರ ಬಳಗ

ಭಾರತ vs ಆಸ್ಟ್ರೇಲಿಯಾ ಮಹಿಳಾ ತಂಡಗಳ ಸಂಭಾವ್ಯ 11ರ ಬಳಗ

ಭಾರತ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ಎಸ್ ಮೇಘನಾ, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್

ಆಸ್ಟ್ರೇಲಿಯಾ: ಅಲಿಸ್ಸಾ ಹೀಲಿ (ನಾಯಕಿ), ಬೆತ್ ಮೂನಿ, ಎಲಿಸ್ಸೆ ಪೆರ್ರಿ, ಆಶ್ಲೀಗ್ ಗಾರ್ಡ್ನರ್, ತಾನ್ಯಾ ಮೆಕ್‌ಗ್ರಾತ್, ಕಿಮ್ ಗಾರ್ತ್, ಅಲಾನಾ ಕಿಂಗ್, ಎನ್ ಕ್ಯಾರಿ, ಎ ಸದರ್ಲ್ಯಾಂಡ್, ಜೆಸ್ ಜೊನಾಸೆನ್, ಮೇಗನ್ ಶುಟ್

Story first published: Friday, December 9, 2022, 12:11 [IST]
Other articles published on Dec 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X