ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS Test: ಡೇವಿಡ್ ವಾರ್ನರ್ ಅಭ್ಯಾಸ ನೋಡಿ ಆಸ್ಟ್ರೇಲಿಯಾ ಆಟಗಾರರೇ ಸುಸ್ತು!

Ind vs Aus Test: David Warner Right Hand, Left Hand Batting Practice At Nets In Aluru

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಲು ಸಿದ್ಧವಾಗುತ್ತಿದ್ದಾರೆ. ಐಪಿಎಲ್‌ನಲ್ಲಿ ವಾರ್ನರ್ ಅತ್ಯುತ್ತಮ ಆಟವಾಡಿದರು, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದಲ್ಲಿ ಅವರ ಸಾಧನೆ ಅಷ್ಟೇನೂ ಉತ್ತಮವಾಗಿಲ್ಲ.

ಅದರಲ್ಲೂ ಭಾರತದ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ವಾರ್ನರ್ ಕಳಪೆ ಬ್ಯಾಟಿಂಗ್ ಅಂಕಿಅಂಶ ಹೊಂದಿದ್ದಾರೆ. ಭಾರತದಲ್ಲಿ ತಮ್ಮ ಬ್ಯಾಟಿಂಗ್ ದಾಖಲೆ ಉತ್ತಮಪಡಿಸಿಕೊಳ್ಳಲು ನಿರ್ಧರಿಸಿರುವ ಡೇವಿಡ್ ವಾರ್ನರ್ ಆಲೂರಿನಲ್ಲಿ ಅವಿರತ ಅಭ್ಯಾಸದಲ್ಲಿ ತೊಡಗಿದ್ದಾರೆ.

SA 20: ಫಾಫ್ ಡುಪ್ಲೆಸಿಸ್ ನಾಯಕನ ಆಟ: ಜೋಬರ್ಗ್‌ ಸೂಪರ್ ಕಿಂಗ್ಸ್‌ ತಂಡಕ್ಕೆ ಭರ್ಜರಿ ಜಯSA 20: ಫಾಫ್ ಡುಪ್ಲೆಸಿಸ್ ನಾಯಕನ ಆಟ: ಜೋಬರ್ಗ್‌ ಸೂಪರ್ ಕಿಂಗ್ಸ್‌ ತಂಡಕ್ಕೆ ಭರ್ಜರಿ ಜಯ

ಫೆಬ್ರವರಿ 9ರಿಂದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಸಿದ್ಧವಾಗುತ್ತಿದೆ. ಬೆಂಗಳೂರು ಹೊರವಲಯದ ಆಲೂರಿನಲ್ಲಿ ಬೀಡು ಬಿಟ್ಟಿರುವ ಕಾಂಗರೂ ಕಡೆ, 5 ದಿನಗಳ ಕಾಲ ಅಭ್ಯಾಸ ಮಾಡಲಿದ್ದಾರೆ. ಫೆಬ್ರವರಿ 7 ರಂದು ನಾಗ್ಪುರಕ್ಕೆ ತೆರಳಲಿದ್ದು, ಫೆಬ್ರವರಿ 9ರಿಂದ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಭಾನುವಾರ ಡೇವಿಡ್ ವಾರ್ನರ್ ನೆಟ್ಸ್‌ನಲ್ಲಿ ಸಾಕಷ್ಟು ಬೆವರಿಳಿಸಿದರು. ಎಡಗೈ ಆಟಗಾರನಾಗಿರುವ ಡೇವಿಡ್ ವಾರ್ನರ್ ಬಲಗೈನಲ್ಲಿ ಬ್ಯಾಟಿಂಗ್ ಮಾಡುವುದನ್ನು ಅಭ್ಯಾಸ ಮಾಡಿದರು. ಎಲ್ಲ ಆಟಗಾರರು ವಿಶ್ರಾಂತಿಯಲ್ಲಿದ್ದಾಗಲೂ ಡೇವಿಡ್ ವಾರ್ನರ್ ಮಾತ್ರ ನೆಟ್ಸ್‌ನಲ್ಲಿ ತಮ್ಮ ಬ್ಯಾಟಿಂಗ್ ಅಭ್ಯಾಸ ಮುಂದುವರೆಸಿದ್ದರು.

ಇನ್ನೊಂದು ವರ್ಷ ಅಷ್ಟೆ ಆಡುವುದು!

ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವುದು ಇನ್ನೊಂದು ವರ್ಷ ಅಷ್ಟೇ ಎನ್ನುವ ಮುನ್ಸೂಚನೆ ನೀಡಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಆಡುವ ಇಷ್ಟವಿದ್ದರೂ, ಅದು ತಂಡದ ಮ್ಯಾನೇಜ್‌ಮೆಂಟ್‌ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

2023ರಲ್ಲಿ ಉತ್ತಮ ಪ್ರದರ್ಶನ ನೀಡುವುದು ಅವರ ಉದ್ದೇಶವಾಗಿದೆ. ಅದರಲ್ಲೂ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕೆಂದು ಅವರು ಬಯಸಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ವಾರ್ನರ್ ತಂಡಕ್ಕೆ ಆಯ್ಕೆಯಾಗಬೇಕಾದರೆ ಈ ಸರಣಿಯಲ್ಲಿ ಆಡುವುದು ಮುಖ್ಯವಾಗಿದೆ.

Ind vs Aus Test: David Warner Right Hand, Left Hand Batting Practice At Nets In Aluru

ಭಾರತದ ವಿರುದ್ಧ ಡೇವಿಡ್ ವಾರ್ನರ್ ಅಂಕಿಅಂಶ

ಭಾರತದ ವಿರುದ್ಧ ಡೇವಿಡ್ ವಾರ್ನರ್ ಇದುವರೆಗೂ 34 ಟೆಸ್ಟ್ ಪಂದ್ಯಗಳನ್ನಾಡಿದ್ದು 33.76 ಸರಾಸರಿಯಲ್ಲಿ 1148 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ 4 ಶತಕ ಮತ್ತು 3 ಅರ್ಧಶತಕ ಸೇರಿವೆ. ಆದರೆ, ಭಾರತದಲ್ಲಿ ವಾರ್ನರ್ 16 ಟೆಸ್ಟ್ ಪಂದ್ಯಗಳನ್ನಾಡಿದ್ದು, 24.5 ಸರಾಸರಿಯಲ್ಲಿ 388 ರನ್ ಮಾತ್ರ ಗಳಿಸಿದ್ದಾರೆ. ಭಾರತದಲ್ಲಿ ಟೆಸ್ಟ್ ಮಾದರಿಯಲ್ಲಿ ವಾರ್ನರ್ ಇನ್ನೂ ಶತಕ ಗಳಿಸಲು ಸಾಧ್ಯವಾಗಿಲ್ಲ. ಅವರು ಮೂರು ಅರ್ಧಶತಕ ಮಾತ್ರ ಗಳಿಸಿದ್ದಾರೆ.

ಆದರೂ ಭಾರತದ ಅನುಭವಿ ಬೌಲಿಂಗ್ ವಿರುದ್ಧ ಸುಲಭವಾಗಿ ರನ್ ಗಳಿಸುವುದು ಸಾಧ್ಯವಿಲ್ಲ ಎಂದು ವಾರ್ನರ್ ಗೆ ತಿಳಿದಿದೆ. ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರಂತಹ ಅಪಾಯಕಾರಿ ಬೌಲರ್ ಗಳ ವಿರುದ್ಧ ಆಡಬೇಕಿದೆ.

Story first published: Sunday, February 5, 2023, 22:39 [IST]
Other articles published on Feb 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X