ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್

Ind vs Aus Test: Shreyas Iyer Shares Picture About Takes Acupressure Treatment

ಬೆನ್ನು ನೋವಿನಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್ ನಂತರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೂಡ ಹೊರಬಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಘೋಷಿಸಿರುವ ತಂಡದಲ್ಲಿ ಅಯ್ಯರ್ ಸ್ಥಾನ ಪಡೆದುಕೊಂಡಿಲ್ಲ. ಏಕದಿನ ಸರಣಿಗಾದರೂ ಅವರು ತಂಡಕ್ಕೆ ವಾಪಸಾಗಲು ಪ್ರಯತ್ನ ಪಡುತ್ತಿದ್ದಾರೆ.

ಬೆನ್ನು ನೋವಿಗೆ ಅವರು ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದ ಇದೊಂದು ದುಸ್ವಪ್ನ ಎಂದು ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಪಿನ್ ಸಹಾಯದಿಂದ ಚಿಕಿತ್ಸೆ ಪಡೆಯುವುದನ್ನು ಕಾಣಬಹುದು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಶ್ರೇಯಸ್ ಅಯ್ಯರ್ ತೋಳಿನಲ್ಲಿ ಪಿನ್ ಸೇರಿಸುವುದರಿಂದ, ಹೆಚ್ಚಿನ ನೋವನ್ನು ಅನುಭವಿಸಬೇಕಾಗುತ್ತದೆ. ಅದಕ್ಕಾಗಿಯೇ ಅವರು ಇದನ್ನು ದುಸ್ವಪ್ನ ಎಂದು ಕರೆದಿದ್ದಾರೆ.

IND vs NZ 1st T20: ಟಿ20 ಸರಣಿಯ ಮೊದಲ ಪಂದ್ಯಕ್ಕಾಗಿ ಆರಂಭಿಸಿದ ಟೀಂ ಇಂಡಿಯಾIND vs NZ 1st T20: ಟಿ20 ಸರಣಿಯ ಮೊದಲ ಪಂದ್ಯಕ್ಕಾಗಿ ಆರಂಭಿಸಿದ ಟೀಂ ಇಂಡಿಯಾ

2022ರಲ್ಲಿ ಶ್ರೇಯಸ್ ಅಯ್ಯರ್ ಏಕದಿನ ಮಾದರಿಯಲ್ಲಿ ಭಾರತಕ್ಕೆ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಂಡದಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದ ಅವರು ಗಾಯಕ್ಕೆ ತುತ್ತಾಗಿದ್ದು ಪ್ರಮುಖ ಹಿನ್ನಡೆಯಾಗಿದೆ.

Ind vs Aus Test: Shreyas Iyer Shares Picture About Takes Acupressure Treatment

ಕಾದು ನೋಡಲು ಬಿಸಿಸಿಐ ನಿರ್ಧಾರ

ಕಳೆದ ವರ್ಷ ಟಿ20 ವಿಶ್ವಕಪ್‌ಗೆ ಮುನ್ನ ಜಸ್ಪ್ರೀತ್ ಬುಮ್ರಾ ವಿಚಾರದಲ್ಲಿ ಅವಸರ ಮಾಡಿದ್ದ ಬಿಸಿಸಿಐ ಸಾಕಷ್ಟು ದೊಡ್ಡ ಪಾಠ ಕಲಿತಿದೆ. 2023ರ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್‌ ಇರುವ ಕಾರಣ, ಬಿಸಿಸಿಐ ಶ್ರೇಯಸ್ ಅಯ್ಯರ್ ವಿಚಾರದಲ್ಲಿ ಅವಸರ ಮಾಡದಿರಲು ನಿರ್ಧರಿಸಿದೆ. ಅಯ್ಯರ್ ಸಂಪೂರ್ಣವಾಗಿ ಫಿಟ್‌ ಆಗುವವರೆಗೂ ಅವರು ಮತ್ತೆ ತಂಡಕ್ಕೆ ಮರಳುವುದು ಅಸಾಧ್ಯ.

Ind vs Aus Test: Shreyas Iyer Shares Picture About Takes Acupressure Treatment

ಆರು ವರ್ಷಗಳ ನಂತರ ಭಾರತದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿ

ಆರು ವರ್ಷಗಳ ನಂತರ ಭಾರತದಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಟೆಸ್ಟ್ ಸರಣಿಗಾಗಿ ಎರಡೂ ತಂಡಗಳು ಕಾಯುತ್ತಿವೆ. ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ ಈ ಟೆಸ್ಟ್ ಸರಣಿ ಪ್ರಮುಖವಾಗಿದೆ. ಸರಣಿಯಲ್ಲಿ ಗೆದ್ದರೆ ಮಾತ್ರ ಭಾರತ ಫೈನಲ್ ತಲುಪಲಿದೆ. ಆಸ್ಟ್ರೇಲಿಯಾ ಈಗಾಗಲೇ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ಆಸ್ಟ್ರೇಲಿಯಾ ತವರಿನಲ್ಲಿ ಸತತವಾಗಿ ಎರಡು ಬಾರಿ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿದ್ದು, ಅದಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದು ಫೆಬ್ರವರಿ 1 ರಿಂದ ಟೆಸ್ಟ್‌ಗೆ ತಯಾರಿ ಆರಂಭಿಸಲಿದ್ದಾರೆ.

Story first published: Friday, January 27, 2023, 5:40 [IST]
Other articles published on Jan 27, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X