ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs BAN 1st Test: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 8ನೇ ಬ್ಯಾಟರ್ ರಿಷಭ್ ಪಂತ್

IND vs BAN 1st Test: Rishabh Pant Became The 8th Indian Batsman To Hit 50 Sixes In Test Cricket

ಬುಧವಾರ, ಡಿಸೆಂಬರ್ 14ರಂದು ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಂದು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರಿಗಿಂತ ಮುಂಚಿತವಾಗಿ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು 5ನೇ ಕ್ರಮಾಂಕಕ್ಕೆ ಬಡ್ತಿ ನೀಡಿ ತಂಡದ ಮ್ಯಾನೇಜ್‌ಮೆಂಟ್ ಕಳಿಸಿತು.

ಭಾರತ ತಂಡವು ಮೊದಲ ಅವಧಿಯಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರ ಬ್ಯಾಕ್-ಟು-ಬ್ಯಾಕ್ ವಿಕೆಟ್ ಸೇರಿದಂತೆ 3 ವಿಕೆಟ್‌ಗೆ 55 ರನ್‌ ಗಳಿಸಿ ಹೆಣಗಾಡುತ್ತಿರುವಾಗ ಬಾಂಗ್ಲಾದೇಶದ ಸ್ಪಿನ್ನರ್‌ಗಳಿಗೆ ಠಕ್ಕರ್ ನೀಡಲು ರಿಷಭ್ ಪಂತ್ ಅವರನ್ನು ಮೈದಾನಕ್ಕೆ ಕಳುಹಿಸಲಾಯಿತು.

IND vs BAN 1st Test: ಧೋನಿ ನಂತರ ಈ ಸಾಧನೆಗೈದ 2ನೇ ಭಾರತೀಯ ವಿಕೆಟ್ ಕೀಪರ್ ರಿಷಭ್ ಪಂತ್IND vs BAN 1st Test: ಧೋನಿ ನಂತರ ಈ ಸಾಧನೆಗೈದ 2ನೇ ಭಾರತೀಯ ವಿಕೆಟ್ ಕೀಪರ್ ರಿಷಭ್ ಪಂತ್

ರಿಷಭ್ ಪಂತ್ 45 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 46 ರನ್ ಗಳಿಸಿ ಔಟಾದರು. ಅವರ ಈ ಪ್ರದರ್ಶನದ ವೇಳೆ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ 4,000 ಅಂತಾರಾಷ್ಟ್ರೀಯ ರನ್‌ಗಳು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು.

ವೇಗವಾಗಿ 50 ಸಿಕ್ಸರ್ ಬಾರಿಸಿದ ಎರಡನೇ ಭಾರತೀಯ

ವೇಗವಾಗಿ 50 ಸಿಕ್ಸರ್ ಬಾರಿಸಿದ ಎರಡನೇ ಭಾರತೀಯ

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರು ರೋಹಿತ್ ಶರ್ಮಾ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 50 ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಭಾರತೀಯ ಆಟಗಾರರಾದರು. ರಿಷಭ್ ಪಂತ್ 54 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ನಾಯಕ ರೋಹಿತ್ ಶರ್ಮಾ 51 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

ಅಲ್ಲದೆ, ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ ಎಂಟನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿದರು. ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ 180 ಇನ್ನಿಂಗ್ಸ್‌ಗಳಲ್ಲಿ 91 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತದ ಮಾಜಿ ನಾಯಕ ಎಂಎಸ್ ಧೋನಿ 144 ಇನ್ನಿಂಗ್ಸ್‌ಗಳಲ್ಲಿ 78 ಸಿಕ್ಸರ್‌ಗಳನ್ನು ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿ

ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿ

1. ವೀರೇಂದ್ರ ಸೆಹ್ವಾಗ್ - 91 ಸಿಕ್ಸರ್‌ಗಳು

2. ಎಂಎಸ್ ಧೋನಿ - 78 ಸಿಕ್ಸರ್‌ಗಳು

3. ಸಚಿನ್ ತೆಂಡೂಲ್ಕರ್ - 69 ಸಿಕ್ಸರ್‌ಗಳು

4. ರೋಹಿತ್ ಶರ್ಮಾ - 64 ಸಿಕ್ಸರ್‌ಗಳು

5. ಕಪಿಲ್ ದೇವ್ - 61 ಸಿಕ್ಸರ್‌ಗಳು

6. ಸೌರವ್ ಗಂಗೂಲಿ - 57 ಸಿಕ್ಸರ್‌ಗಳು

7. ರವೀಂದ್ರ ಜಡೇಜಾ - 55 ಸಿಕ್ಸರ್‌ಗಳು

8. ರಿಷಭ್ ಪಂತ್ - 50 ಸಿಕ್ಸರ್‌ಗಳು

ಭಾರತ 90 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 278 ರನ್

ಭಾರತ 90 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 278 ರನ್

ಏತನ್ಮಧ್ಯೆ, ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದೆ.

ಚೇತೇಶ್ವರ ಪೂಜಾರ 90 ರನ್ ಗಳಿಸಿ ಔಟಾಗಿದ್ದರೆ, ಶ್ರೇಯಸ್ ಅಯ್ಯರ್ 82 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರು ಬ್ಯಾಟ್ಸ್‌ಮನ್‌ಗಳು ಐದನೇ ವಿಕೆಟ್‌ಗೆ 149 ರನ್‌ಗಳ ಜೊತೆಯಾಟ ನೀಡಿದರು.

ಬಾಂಗ್ಲಾದೇಶ ಪರ ಬೌಲಿಂಗ್‌ನಲ್ಲಿ ತೈಜುಲ್ ಇಸ್ಲಾಂ ಮೂರು ವಿಕೆಟ್ ಪಡೆದರೆ, ಮೆಹಿದಿ ಹಸನ್ ಮಿರಾಜ್ ಎರಡು ವಿಕೆಟ್ ಪಡೆದರು. ಮೊದಲ ಅವಧಿಯಲ್ಲಿ ಬಿದ್ದ ಕೆಎಲ್ ರಾಹುಲ್ ಅವರ ವಿಕೆಟ್ ಅನ್ನು ಖಲೀದ್ ಅಹ್ಮದ್ ಪಡೆದರು.

ರಿಷಭ್ ಪಂತ್ 128 ಪಂದ್ಯಗಳಲ್ಲಿ 4021 ರನ್

ರಿಷಭ್ ಪಂತ್ 128 ಪಂದ್ಯಗಳಲ್ಲಿ 4021 ರನ್

ಇನ್ನೂ ಈ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4000 ರನ್ ಗಳಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಎನಿಸಿಕೊಂಡರು. ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಆರಂಭಿಕ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಎಡಗೈ ಆಟಗಾರ ಈ ಸಾಧನೆ ಮಾಡಿದರು.

ಟೆಸ್ಟ್‌ ಮಾದರಿಯಲ್ಲಿ 4000ಕ್ಕೂ ಅಧಿಕ ರನ್ ಸಾಧನೆ ಮಾಡಿದ ಎಂಎಸ್ ಧೋನಿ ಭಾರತದ ಏಕೈಕ ಕೀಪರ್ ಆಗಿದ್ದರು. ಅವರು 535 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 15 ಶತಕಗಳು ಮತ್ತು 108 ಅರ್ಧ ಶತಕಗಳೊಂದಿಗೆ 44.74 ಸರಾಸರಿಯಲ್ಲಿ 17,092 ರನ್ ಗಳಿಸಿದ್ದಾರೆ.

ಇಲ್ಲಿಯವರೆಗೆ 128 ಪಂದ್ಯಗಳಲ್ಲಿ ರಿಷಭ್ ಪಂತ್ 33.78 ಸರಾಸರಿಯಲ್ಲಿ ಆರು ಶತಕಗಳು ಮತ್ತು 15 ಅರ್ಧ ಶತಕಗಳೊಂದಿಗೆ 4021 ರನ್ ಗಳಿಸಿದ್ದಾರೆ ಮತ್ತು ಅಜೇಯ 159 ರನ್ ಅತ್ಯಧಿಕ ರನ್ ಆಗಿದೆ.

Story first published: Wednesday, December 14, 2022, 18:52 [IST]
Other articles published on Dec 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X