IND vs BAN: ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆಗೈದ ವೇಗದ ಭಾರತೀಯ ಬ್ಯಾಟರ್ ಶ್ರೇಯಸ್ ಅಯ್ಯರ್

ಬುಧವಾರ, ಡಿಸೆಂಬರ್ 7ರಂದು ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ ವೀರೋಚಿತ ಹೋರಾಟದ ಹೊರತಾಗಿಯೂ ಪ್ರವಾಸಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧ 5 ರನ್‌ಗಳ ರೋಚಕ ಸೋಲು ಕಂಡಿತು.

ಸ್ಪಿನ್ ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಜ್ ಅವರ ಸ್ಮರಣೀಯ ಶತಕದ ಸಹಾಯದಿಂದ ಬಾಂಗ್ಲಾದೇಶ ಅದ್ಭುತ ಗೆಲುವು ಸಾಧಿಸುವುದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿತು. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಡಿಸೆಂಬರ್ 10ರಂದು ಚಟ್ಟೋಗ್ರಾಮ್‌ನಲ್ಲಿ ನಡೆಯಲಿದೆ.

Team INDIA Schedule 2023 : ಶ್ರೀಲಂಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟTeam INDIA Schedule 2023 : ಶ್ರೀಲಂಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ

ಇದೇ ವೇಳೆ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಬಾಂಗ್ಲಾದೇಶ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು ಮತ್ತು ದಾಖಲೆ ಮುರಿಯುವುದನ್ನು ಮುಂದುವರೆಸಿದರು. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1,500 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು.

34 ಇನ್ನಿಂಗ್ಸ್‌ಗಳಲ್ಲಿ 49.48 ಸರಾಸರಿಯೊಂದಿಗೆ 1,534 ರನ್

34 ಇನ್ನಿಂಗ್ಸ್‌ಗಳಲ್ಲಿ 49.48 ಸರಾಸರಿಯೊಂದಿಗೆ 1,534 ರನ್

ಢಾಕಾದಲ್ಲಿ ಬುಧವಾರ ನಡೆದ ಬಾಂಗ್ಲಾದೇಶ ವಿರುದ್ಧದ ಭಾರತದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಈ ಸಾಧನೆ ಮಾಡಿದರು. 102 ಎಸೆತಗಳನ್ನು ಎದುರಿಸಿ ಆರು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳೊಂದಿಗೆ 80.39 ಸ್ಟ್ರೈಕ್‌ರೇಟ್‌ನಲ್ಲಿ 82 ರನ್ ಗಳಿಸಿ ಔಟಾದರು.

ಅಂತಿಮವಾಗಿ ಭಾರತ ತಂಡ ಐದು ರನ್‌ಗಳಿಂದ ಪಂದ್ಯವನ್ನು ಸೋತರೂ, ಶ್ರೇಯಸ್ ಅಯ್ಯರ್ ಅವರ ಶತಕ ಮತ್ತು ಸ್ಥಿರ ಬ್ಯಾಟಿಂಗ್ ರೋಹಿತ್ ಶರ್ಮಾ ಬಳಗಕ್ಕೆ ಧನಾತ್ಮಕ ಅಂಶ ಕಂಡುಬಂದಿದೆ.

ಭಾರತದ ಭರವಸೆಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಶ್ರೇಯಸ್ ಅಯ್ಯರ್ ಆಡಿದ 38 ಪಂದ್ಯಗಳ 34 ಇನ್ನಿಂಗ್ಸ್‌ಗಳಲ್ಲಿ 49.48 ಸರಾಸರಿಯೊಂದಿಗೆ 1,534 ರನ್ ಗಳಿಸಿದ್ದಾರೆ. ಅಯ್ಯರ್ ತಮ್ಮ ಏಕದಿನ ಕ್ರಿಕೆಟ್‌ನ ವೃತ್ತಿಜೀವನದಲ್ಲಿ ಎರಡು ಶತಕ ಮತ್ತು 14 ಅರ್ಧ ಶತಕಗಳನ್ನು ಗಳಿಸಿದ್ದು, ಅಜೇಯ 113 ಅತ್ಯುತ್ತಮ ಸ್ಕೋರ್ ಆಗಿದೆ.

36 ಇನ್ನಿಂಗ್ಸ್‌ಗಳಲ್ಲಿ 1,500 ರನ್‌ ಗಳಿಸಿದ್ದ ಕೆಎಲ್ ರಾಹುಲ್

36 ಇನ್ನಿಂಗ್ಸ್‌ಗಳಲ್ಲಿ 1,500 ರನ್‌ ಗಳಿಸಿದ್ದ ಕೆಎಲ್ ರಾಹುಲ್

36 ಇನ್ನಿಂಗ್ಸ್‌ಗಳಲ್ಲಿ 1,500 ರನ್‌ಗಳ ಗಡಿಯನ್ನು ತಲುಪಿದ್ದ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕಿದ್ದಾರೆ. ನಂತರ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ 38 ಇನ್ನಿಂಗ್ಸ್‌ಗಳಲ್ಲಿ ಈ ಹೆಗ್ಗುರುತನ್ನು ತಲುಪಿದ್ದಾರೆ.

ಶ್ರೇಯಸ್ ಅಯ್ಯರ್ 2022ರಲ್ಲಿ 16 ಪಂದ್ಯಗಳ 14 ಇನ್ನಿಂಗ್ಸ್‌ಗಳಲ್ಲಿ 60.08 ಸರಾಸರಿಯೊಂದಿಗೆ ಒಂದು ಶತಕ ಮತ್ತು ಆರು ಅರ್ಧಶತಕಗಳೊಂದಿಗೆ 721 ರನ್ ಗಳಿಸಿದ್ದಾರೆ. ಈ ವರ್ಷ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಅಜೇಯ 113 ರನ್‌ಗಳು. ಅಯ್ಯರ್ ಅವರು ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ಈ ವರ್ಷ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನಾಗಿದ್ದಾರೆ.

2022ರಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ

2022ರಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ

ನಮೀಬಿಯಾದ ಎಂಜಿ ಎರಾಸ್ಮಸ್ ಈ ವರ್ಷ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. 21 ಪಂದ್ಯಗಳ 20 ಇನ್ನಿಂಗ್ಸ್‌ಗಳಲ್ಲಿ 56ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಒಂದು ಶತಕ ಮತ್ತು ಎಂಟು ಅರ್ಧಶತಕಗಳೊಂದಿಗೆ 956 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ, ಭಾರತದ ಶ್ರೇಯಸ್ ಅಯ್ಯರ್ 2022ರಲ್ಲಿ ಏಕದಿನ ಪಂದ್ಯಗಳಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ಈ ಬಲಗೈ ಬ್ಯಾಟರ್ 2022ರಲ್ಲಿ ಏಕದಿನ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 21 ಇನ್ನಿಂಗ್ಸ್‌ಗಳಲ್ಲಿ 685 ರನ್ ಮತ್ತು ಶುಭಮನ್ ಗಿಲ್ 12 ಇನ್ನಿಂಗ್ಸ್‌ಗಳಲ್ಲಿ 638 ರನ್ ಗಳಿಸುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, December 8, 2022, 17:06 [IST]
Other articles published on Dec 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X