ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಗ್ನಿ ಪರೀಕ್ಷೆ ಎದುರಿಸಲು ರೋಹಿತ್ ಪಡೆ ಸಜ್ಜು: ಅಡಿಲೇಡ್‌ಗೆ ಬಂದಿಳಿದ ಟೀಮ್ ಇಂಡಿಯಾ

Ind vs Ban: Team India reach Adelaide for must win match against Bangladesh

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಮೊದಲ ಎರಡು ಪಂದ್ಯವನ್ನು ಗೆದ್ದ ಬಳಿಕ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಹಿನ್ನಡೆ ಅನುಭವಿಸಿದಂತಾಗಿದೆ. ಹೀಗಾಗಿ ಟೀಮ್ ಇಂಡಿಯಾಗೆ ಮುಂದಿನ ಬಾಂಗ್ಲಾದೇಶದ ವಿರುದ್ಧದ ಪಂದ್ಯ ಮಹತ್ವದ್ದಾಗಿದ್ದು ಸೆಇಫೈನಲ್ ಹಂತಕ್ಕೆ ಹಾದಿ ಸುಗಮಗೊಳಿಸಬೇಕಾದರೆ ಈ ಪಂದ್ಯದಲ್ಲಿ ಗೆಉವು ಅನಿವಾರ್ಯವಾಗಿದೆ.

ಬಾಂಗ್ಲಾದೇಶದ ವಿರುದ್ಧದ ಸೂಪರ್ 12 ಹಂತದ ಪಂದ್ಯದಲ್ಲಿ ಭಾಗಿಗುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಸೋಮವಾರ ಅಡಿಲೇಡ್‌ಗೆ ಬಂದಿಳಿದಿದೆ. ಸುದೀರ್ಘ ವಿಮಾನ ಪ್ರಯಾಣದ ಬಳಿಕ ರೋಹಿತ್ ಶರ್ಮಾ ಪಡೆ ಸೋಮವಾರ ವಿಶ್ರಾಂತಿ ಪಡೆಯಲಿದ್ದು ಮಂಗಳವಾರ ಅಭ್ಯಾಸವನ್ನು ನಡೆಸಲಿದೆ. ಮತ್ತೊಂದೆಡೆ ಶಕೀಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ತಂಡ ಕೂಡ ಬ್ರಿಸ್ಬೇನ್‌ನಿಂದ ಅಡಿಲೇಡ್‌ಗೆ ಪ್ರಯಾಣ ಬೆಳೆಸಿದೆ.

T20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗT20 World Cup 2022: ಸೂರ್ಯಕುಮಾರ್ ಬೌಲರ್‌ಗಳ ಮನಸ್ಸಿನೊಂದಿಗೆ ಆಡುತ್ತಾರೆ; ಪಾಕ್ ಕ್ರಿಕೆಟಿಗ

ಬುಧವಾರ ನಡೆಯಲಿದೆ ಪಂದ್ಯ

ಬುಧವಾರ ನಡೆಯಲಿದೆ ಪಂದ್ಯ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಈ ಕುತೂಹಲಕಾರಿ ಕದನ ಬುಧವಾರ ನಡೆಯಲಿದೆ. ಸೂಪರ್ 12 ಹಂತದ ಎರಡನೇ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ತಂಡ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ಇನ್ನು ಬಾಂಗ್ಲಾದೇಶ ತಂಡ ಮೂರನೇ ಸ್ಥಾನದಲ್ಲಿದ್ದು ಸೆಮಿಫೈನಲ್ ಮೇಲೆ ಸಹಜವಾಗಿಯೇ ಕಣ್ಣಿಟ್ಟಿದೆ.

ಅಡಿಲೇಡ್‌ನಲ್ಲಿ ಯಾರಿಗೆ ಮೇಲುಗೈ

ಅಡಿಲೇಡ್‌ನಲ್ಲಿ ಯಾರಿಗೆ ಮೇಲುಗೈ

ಆಸ್ಟ್ರೇಲಿಯಾದ ಕ್ರೀಡಾಂಗಣಗಳ ಪೈಕಿ ಬ್ಯಾಟಿಂಗ್‌ಗೆ ಹೆಚ್ಚು ನೆರವು ನೀಡುವ ಪಿಚ್‌ ಪೈಕಿ ಅಡಿಲೇಡ್ ಕೂಡ ಒಂದಾಗಿದೆ. ಟೀಮ್ ಇಂಡಿಯಾ ಬಲಿಷ್ಠವಾದ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದು ಪಿಚ್‌ನ ಲಾಭವನ್ನು ಅದ್ಣುತವಾಗಿ ಬಳಸಿಕೊಳ್ಳುವ ನಿರೀಕ್ಷೆಯಿದೆ. ಅದರಲ್ಲೂ ಟೀಮ್ ಇಂಡಿಯಾದ ಆಟಗರರಾದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್‌ನಲ್ಲಿದ್ದು ಈ ಪಿಚ್‌ನಲ್ಲಿ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಸವಾರಿ ಮಾಡುವ ಉತ್ಸಾಹದಲ್ಲಿದ್ದಾರೆ. ಆದರೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸ್ವಲ್ಪ ಎಡವಿದರೂ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿರುವ ಕಾರಣ ಜವಾಬ್ಧಾರಿಯುತ ಪ್ರದರ್ಶನ ನೀಡಬೇಕಿದೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್(ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್

ಬಾಂಗ್ಲಾದೇಶ ಸ್ಕ್ವಾಡ್: ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಹಸನ್ ಮಹ್ಮದ್, ಮುಸ್ತಫಿಜುರ್ ರೆಹಮಾನ್, ಎಬಾಡೋತ್ ಇಸ್ಲಾಮ್, ಇಬಾಡೋತ್ ಇಸ್ಲಾಮಿನ್, , ಯಾಸಿರ್ ಅಲಿ

Story first published: Monday, October 31, 2022, 19:10 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X