Ind vs Ban: ಢಾಕಾ ತಲುಪಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಸ್ವಾಗತ ಕೋರಿದ ಮಕ್ಕಳು

3 ಪಂದ್ಯಗಳ ಏಕದಿನ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಟೀಂ ಇಂಡಿಯಾ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದೆ. ಮುಂಬೈನಿಂದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಪ್ರಯಾಣ ಮಾಡಿದ್ದು, ನ್ಯೂಜಿಲೆಂಡ್‌ನಿಂದ ಶಿಖರ್ ಧವನ್ ಮತ್ತು ಇತರ ಆಟಗಾರರು ಶುಕ್ರವಾರ ಢಾಕಾಗೆ ಆಗಮಿಸಲಿದ್ದಾರೆ.

ಗುರುವಾರ ಢಾಕಾಗೆ ಬಂದಿಳಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಭಾರತ ತಂಡದ ಇತರೆ ಆಟಗಾರರನ್ನು ಮಕ್ಕಳು ಹೂ ನೀಡುವ ಮೂಲಕ ಸ್ವಾಗತಿಸಿದರು. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶಿಖರ್ ಧವನ್, ವಾಷಿಂಗ್ಟನ್ ಸುಂದರ್ ಮತ್ತು ಇತರರು ಶುಕ್ರವಾರ ಢಾಕಾದಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ ಢಾಕಾದಲ್ಲಿ ನಡೆಯಲಿದೆ. ಡಿಸೆಂಬರ್ 4, 7 ಮತ್ತು 10 ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 14 ಮತ್ತು ಡಿಸೆಂಬರ್ 22ರಂದು 2 ಟೆಸ್ಟ್ ಪಂದ್ಯಗಳು ಆರಂಭವಾಗುತ್ತವೆ.

IPL 2023: ಹರಾಜಿಗೆ ನೋಂದಾಯಿಸಿಕೊಂಡ ದೇಶ-ವಿದೇಶದ 991 ಆಟಗಾರರುIPL 2023: ಹರಾಜಿಗೆ ನೋಂದಾಯಿಸಿಕೊಂಡ ದೇಶ-ವಿದೇಶದ 991 ಆಟಗಾರರು

2022 ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಭಾರತ ತಂಡವು ಪ್ರತಿಯೊಬ್ಬ ಪ್ರಮುಖ ಭಾರತೀಯ ಆಟಗಾರರನ್ನು ಒಳಗೊಂಡಿದೆ.

ಬಾಂಗ್ಲಾದೇಶ ಏಕದಿನ ತಂಡವನ್ನು ಪ್ರಕಟಿಸಿದ್ದು, ತಮೀಮ್ ಇಕ್ಬಾಲ್‌ರನ್ನು ನಾಯಕರನ್ನಾಗಿ ಆಯ್ಕೆ ಮಾಡಿತ್ತು. ಆದರೆ, ತಮೀಮ್ ಇಕ್ಬಾಲ್ ಗಾಯಗೊಂಡಿರುವುದರಿಂದ ಬೇರೆ ನಾಯಕನನ್ನು ನೇಮಿಸುವ ಸಾಧ್ಯತೆ ಇದೆ. ಪ್ರಮುಖ ವೇಗಿ ತಸ್ಕಿನ್ ಅಹ್ಮದ್ ಕೂಡ ಬೆನ್ನು ನೋವಿನಿಂದಾಗಿ ಮೊದಲನೇ ಏಕದಿನ ಪಂದ್ಯದಲ್ಲಿ ಆಡುತ್ತಿಲ್ಲ. ಬಾಂಗ್ಲಾದೇಶ ತಂಡ ಟೆಸ್ಟ್ ಸರಣಿಗೆ ಇನ್ನೂ ತಂಡವನ್ನು ಪ್ರಕಟಿಸಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲು

ಟಿ20 ವಿಶ್ವಕಪ್ ನಂತರ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಟಿ20 ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತ್ತು. ಆದರೆ, ಏಕದಿನ ಸರಣಿಯನ್ನು 0-1 ಅಂತರದಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿದೆ.

ಬಾಂಗ್ಲಾದೇಶದ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್ ತಂಡವಾಗಿದ್ದರೂ, ಬಾಂಗ್ಲಾದೇಶ ಕೂಡ ಕಠಿಣ ಸವಾಲು ಹಾಕಲು ಸಿದ್ಧವಾಗಲಿದೆ. 2023ರ ಏಕದಿನ ವಿಶ್ವಕಪ್‌ಗೆ ಮುನ್ನ ಪ್ರತಿಯೊಬ್ಬ ಆಟಗಾರನಿಗೂ ಪ್ರತಿ ಪಂದ್ಯಗಳು ಕೂಡ ಮುಖ್ಯವಾಗುತ್ತವೆ.

ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಹಬಾಜ್ ಅಹ್ಮದ್, ಕೆಎಲ್ ರಾಹುಲ್, ರಿಷಬ್ ಪಂತ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಶಮಿ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್

ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೀಕರ್ ಭರತ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಸಿರಾಜ್, ಉಮೇಶ್ ಯಾದವ್

For Quick Alerts
ALLOW NOTIFICATIONS
For Daily Alerts
Story first published: Thursday, December 1, 2022, 23:04 [IST]
Other articles published on Dec 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X