ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಪ್ರಕಟವಾದ ತಂಡದಲ್ಲಿ ಈ ಮೂವರಿಗೆ ಅವಕಾಶ ನೀಡಿದ್ದೇ ಆ‍ಶ್ಚರ್ಯ!

IND vs ENG: 3 surprise picks in Team Indias test squad for England tour

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿರುವಾಗಲೇ ಬಿಸಿಸಿಐ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡವನ್ನು ಘೋಷಣೆ ಮಾಡಿದೆ. ತವರಿನಲ್ಲೇ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾದ ತಂಡದಿಂದ ಹಿರಿಯರಿಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲಾಗಿದೆ.

ಗಂಡು ಮಗುವಿಗೆ ತಂದೆಯಾದ ಖುಷಿ ಹಂಚಿಕೊಂಡ ಕೇನ್ ವಿಲಿಯಮ್ಸನ್ಗಂಡು ಮಗುವಿಗೆ ತಂದೆಯಾದ ಖುಷಿ ಹಂಚಿಕೊಂಡ ಕೇನ್ ವಿಲಿಯಮ್ಸನ್

ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಮುಂದೂಡಿಕೆಯಾಗಿತ್ತು. ಈ ಟೆಸ್ಟ್ ಪಂದ್ಯ ಜುಲೈ ತಿಂಗಳಿನಲ್ಲಿ ನಡೆಯಲಿದ್ದು, 17 ಆಟಗಾರರ ತಂಡವನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದ್ದು, ಈ ಹಿಂದೆ ಇದೇ ಸರಣಿಗೆ ಇಂಗ್ಲೆಂಡ್‌ ಪ್ರವಾಸವನ್ನು ಕೈಗೊಂಡಿದ್ದ ಹಲವು ಆಟಗಾರರು ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಕೆಲ ಅಟಗಾರರು ಕಾರಣಾಂತರಗಳಿಂದ ತಂಡದಿಂದ ಹೊರಗುಳಿದಿದ್ದಾರೆ.

ಐಪಿಎಲ್‌ನಲ್ಲಿ ಮಿಂಚಿದರೂ ಇಲ್ಲ ಬೆಲೆ: ಈ ಐವರಿಗೆ ಟೀಮ್ ಇಂಡಿಯಾ ಅವಕಾಶ ನೀಡದೇ ಕಡೆಗಣಿಸಿದ ಬಿಸಿಸಿಐ!ಐಪಿಎಲ್‌ನಲ್ಲಿ ಮಿಂಚಿದರೂ ಇಲ್ಲ ಬೆಲೆ: ಈ ಐವರಿಗೆ ಟೀಮ್ ಇಂಡಿಯಾ ಅವಕಾಶ ನೀಡದೇ ಕಡೆಗಣಿಸಿದ ಬಿಸಿಸಿಐ!

ಹೀಗಾಗಿ ಕೆಲ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಈ ಕೆಳಕಂಡ ಮೂವರು ಆಟಗಾರರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಿರುವುದು ಆಶ್ಚರ್ಯವನ್ನು ಮೂಡಿಸಿದೆ.

1. ಪ್ರಸಿದ್ಧ್ ಕೃಷ್ಣ

1. ಪ್ರಸಿದ್ಧ್ ಕೃಷ್ಣ

ಏಕದಿನ ಕ್ರಿಕೆಟ್ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ಆಡಿರುವ 7 ಪಂದ್ಯಗಳಲ್ಲಿ 13 ವಿಕೆಟ್ ಪಡೆಯುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇನ್ನು ಯಾವುದೇ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದ ಅನುಭವವಿರದ ಪ್ರಸಿದ್ಧ್ ಕೃಷ್ಣ ಇದೀಗ ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವುದು ಆಶ್ಚರ್ಯ ಮೂಡಿಸಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಸಾಧಾರಣ ಪ್ರದರ್ಶನ ನೀಡಿರುವ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್‌ ನೆಲದಲ್ಲಿ ನಿರೀಕ್ಷಿಸಿದ ಬೌಲಿಂಗ್ ಮಾಡುತ್ತಾರಾ ಎಂಬ ಅನುಮಾನ ಅನೇಕರಲ್ಲಿದೆ.

2. ಚೇತೇಶ್ವರ್ ಪೂಜಾರ

2. ಚೇತೇಶ್ವರ್ ಪೂಜಾರ

ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕೆಟ್ಟ ಫಾರ್ಮ್ ಹೊಂದಿ ವಿಫಲರಾಗಿರುವ ಚೇತೇಶ್ವರ್ ಪೂಜಾರ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ 3 ಟೆಸ್ಟ್ ಪಂದ್ಯಗಳಲ್ಲಿ 124 ರನ್ ಕಲೆಹಾಕಿ ವಿಫಲರಾಗಿದ್ದರು. ಹೀಗೆ ವಿಫಲರಾಗಿದ್ದ ಚೇತೇಶ್ವರ್ ಪೂಜಾರ ನಂತರ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಕೂಡ ಆಗಿರಲಿಲ್ಲ. ಇನ್ನು ಕಳೆದ ಬಾರಿ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾದ ಆಟಗರನಾಗಿದ್ದ ಚೇತೇಶ್ವರ್ ಪೂಜಾರ ಅಂತಿಮ ಟೆಸ್ಟ್ ಪಂದ್ಯ ಮುಂದೂಡುವ ಮುನ್ನ ನಡೆದಿದ್ದ 4 ಪಂದ್ಯಗಳ ಪೈಕಿ ಕೇವಲ ಎರಡು ಅರ್ಧಶತಕಗಳನ್ನು ಬಾರಿಸಿದ್ದು ಬಿಟ್ಟರೆ ದೊಡ್ಡ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಇನ್ನು ಶತಕ ಬಾರಿಸಿ ಮೂರು ವರ್ಷಗಳೇ ಕಳೆದಿರುವ ಚೇತೇಶ್ವರ್ ಪೂಜಾರಾಗೆ ಅವಕಾಶ ನೀಡಿದ್ದು ಆಶ್ಷರ್ಯವನ್ನು ಉಂಟುಮಾಡಿದೆ.

3. ಶ್ರೇಯಸ್ ಐಯ್ಯರ್

3. ಶ್ರೇಯಸ್ ಐಯ್ಯರ್

ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊರತಾಗಿಯೂ ಶ್ರೇಯಸ್ ಐಯ್ಯರ್‌ಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅವಕಾಶ ನೀಡಿದ್ದು ಆಶ್ಚರ್ಯ ಮೂಡಿಸಿದೆ. ಇನ್ನು ಇಲ್ಲಿಯವರೆಗೂ ಶ್ರೇಯಸ್ ಐಯ್ಯರ್ ತಾನಾಡಿರುವ 4 ಟೆಸ್ಟ್ ಪಂದ್ಯಗಳಲ್ಲಿ ಮೂರು ಅರ್ಧಶತಕಗಳು ಮತ್ತು ಒಂದು ಶತಕವನ್ನು ಬಾರಿಸಿದ್ದಾರೆ. ಆದರೆ, ಇಂಗ್ಲೆಂಡ್ ಪಿಚ್ ತುಂಬಾ ಬೌನ್ಸ್ ಆಗುವ ಸಾಧ್ಯತೆಗಳಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ದುಷ್ಮಂತ ಚಮೀರ ಮತ್ತು ಉಮ್ರಾನ್ ಮಲಿಕ್ ಎಸೆದ ಎಸೆತಗಳನ್ನು ಬಾರಿಸಲು ಕಷ್ಟ ಪಡುತ್ತಿದ್ದ ಶ್ರೇಯಸ್ ಐಯ್ಯರ್ ಇಂಗ್ಲೆಂಡ್ ನೆಲದಲ್ಲಿ ಯಾವ ರೀತಿ ಆಡುತ್ತಾರೋ ಕಾದುನೋಡಬೇಕಿದೆ.

Story first published: Monday, May 23, 2022, 16:44 [IST]
Other articles published on May 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X