IND vs ENG: ಮೊದಲ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಜೋಸ್ ಬಟ್ಲರ್

ಮಂಗಳವಾರ (ಜುಲೈ 5) ನಡೆದ ಸರಣಿಯ ಐದನೇ ಮತ್ತು ಅಂತಿಮ ಮರುನಿಗದಿಪಡಿಸಿದ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಐತಿಹಾಸಿಕ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಸರಣಿಯನ್ನು ಸಮಬಲಗೊಳಿಸಿತು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಜಾನಿ ಬೈರ್‌ಸ್ಟೋವ್ ಅವರನ್ನು ಇಂಗ್ಲೆಂಡ್ ವೈಟ್-ಬಾಲ್ ನಾಯಕ ಜೋಸ್ ಬಟ್ಲರ್ ಹಾಡಿ ಹೊಗಳಿದರು.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಮಹತ್ವದ ಹೇಳಿಕೆವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಮಹತ್ವದ ಹೇಳಿಕೆ

ಜೋಸ್ ಬಟ್ಲರ್ ಅವರು ತಮ್ಮ ಟೆಸ್ಟ್ ತಂಡದ ಆಟಗಾರರನ್ನು ಭಾರತ ವಿರುದ್ಧದ ಟೆಸ್ಟ್ ಅನ್ನು 2-2ರಿಂದ ಸಮಬಲಗೊಳಿಸಿದ್ದಕ್ಕಾಗಿ ಅಭಿನಂದಿಸಿದರು. ಗುರುವಾರದಿಂದ (ಜುಲೈ 7) ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಈಗ ಭಾರತವನ್ನು ಎದುರಿಸಲಿದೆ ಮತ್ತು ಟೆಸ್ಟ್ ತಂಡದ ಪ್ರಭಾವಶಾಲಿ ಪ್ರದರ್ಶನದಿಂದ ವೈಟ್-ಬಾಲ್ ಪಂದ್ಯಕ್ಕೂ ಹುಡುಗರು ಪ್ರೇರೇಪಿತರಾಗಿದ್ದಾರೆ ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.

ಇಂಗ್ಲೆಂಡ್‌ನ ಗೆಲುವಿನ ಓಟವನ್ನು ಮುಂದುವರಿಸುತ್ತೇವೆ

ಇಂಗ್ಲೆಂಡ್‌ನ ಗೆಲುವಿನ ಓಟವನ್ನು ಮುಂದುವರಿಸುತ್ತೇವೆ

"ಇಂಗ್ಲೆಂಡ್ ಎಡ್ಜ್‌ಬಾಸ್ಟನ್‌ನಲ್ಲಿ ಏನು ಮಾಡಿದೆವು ಎಂಬುದನ್ನು ವೀಕ್ಷಿಸಲು ನಂಬಲಾಗುತ್ತಿಲ್ಲ. ನಾವು ಇನ್‌ಕ್ರೆಡಿಬಲ್ ಟೆಸ್ಟ್ ತಂಡದಿಂದ ಕ್ಯೂ ತೆಗೆದುಕೊಳ್ಳುತ್ತೇವೆ ಮತ್ತು ಇಂಗ್ಲೆಂಡ್‌ನ ಗೆಲುವಿನ ಓಟವನ್ನು ಮುಂದುವರಿಸುತ್ತೇವೆ," ಎಂದು ಸೀಮಿತ ಓವರ್‌ಗಳ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದರು.

ಮೆನ್ ಇನ್ ಬ್ಲೂ ತಂಡಕ್ಕೆ ಎಚ್ಚರಿಕೆ ನೀಡಿದ ಜೋಸ್ ಬಟ್ಲರ್

ಮೆನ್ ಇನ್ ಬ್ಲೂ ತಂಡಕ್ಕೆ ಎಚ್ಚರಿಕೆ ನೀಡಿದ ಜೋಸ್ ಬಟ್ಲರ್

ಮಾರ್ಚ್ 2022ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸೋಲಿನ ನಂತರ ಇಂಗ್ಲೆಂಡ್ ಎಲ್ಲಾ ಸ್ವರೂಪಗಳಲ್ಲಿ ಗೆಲುವಿನ ಓಟದಲ್ಲಿದೆ. ಅದರ ನಂತರ, ಇಂಗ್ಲೆಂಡ್ ತನ್ನ ಎಲ್ಲಾ 4 ಟೆಸ್ಟ್ ಪಂದ್ಯಗಳನ್ನು ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ 3 ಏಕದಿನ ಪಂದ್ಯಗಳನ್ನು ಗೆದ್ದಿದೆ. ಹೊಸ ನಾಯಕ ಜೋಸ್ ಬಟ್ಲರ್ ಭಾರತದ ವಿರುದ್ಧ ಮೊದಲ ಬಾರಿಗೆ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಅವರು ಮತ್ತು ಅವರ ಹುಡುಗರು ತಮ್ಮ ಗೆಲುವಿನ ಆವೇಗವನ್ನು ಮುಂದುವರಿಸುವ ಉತ್ಸಾಹದಲ್ಲಿದ್ದಾರೆ ಎಂದು ಜೋಸ್ ಬಟ್ಲರ್ ಮೆನ್ ಇನ್ ಬ್ಲೂ ತಂಡಕ್ಕೆ ಎಚ್ಚರಿಕೆ ನೀಡಿದರು.

ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಏಕದಿನ ನಾಯಕರಾಗಿದ್ದ ಇಯಾನ್ ಮಾರ್ಗನ್

ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಏಕದಿನ ನಾಯಕರಾಗಿದ್ದ ಇಯಾನ್ ಮಾರ್ಗನ್

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರು ಇಯಾನ್ ಮಾರ್ಗನ್ ಅವರ ಪ್ರಭಾವಶಾಲಿ ಪರಂಪರೆಯನ್ನು ನಿರ್ಮಿಸಲು ಹೊರಟಿದ್ದಾರೆ. ಇಯಾನ್ ಮಾರ್ಗನ್ ಇಂಗ್ಲೆಂಡ್ ತಂಡವನ್ನು 2019ರಲ್ಲಿ 50-ಓವರ್ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿಯುವಂತೆ ಮಾಡಿದರು. ಇಂಗ್ಲೆಂಡ್ ತಂಡವನ್ನು ವೈಟ್-ಬಾಲ್ ಪವರ್‌ಹೌಸ್ ಆಗಿ ಪರಿವರ್ತಿಸಿದರು, ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಏಕದಿನ ನಾಯಕರಾಗಿ ಕೊನೆಗೊಂಡರು.

ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಹೈಡ್ರಾಮಾ!! ವಿರಾಟ್ ಬಿಟ್ರೆ ಸಮರ್ಥ ನಾಯಕ ಯಾರು ಇಲ್ಲ | OneIndia Kannada
ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡ

ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 6, 2022, 21:01 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X