ಭಾರತ vs ಇಂಗ್ಲೆಂಡ್: ಓವಲ್ ಅಂಗಳದಲ್ಲಿ ಭಾರತಕ್ಕಿದೆ ಅತಿ ಕೆಟ್ಟ ಇತಿಹಾಸ, ಕಳಪೆ ಪಂದ್ಯಗಳ ಪಟ್ಟಿ ಇಲ್ಲಿದೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲವನ್ನು ಸಾಧಿಸಿವೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಯಾವುದೇ ಫಲಿತಾಂಶವಿಲ್ಲದೇ ಡ್ರಾನಲ್ಲಿ ಅಂತ್ಯಗೊಂಡಿತ್ತು. ನಂತರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ ಸರಣಿಯಲ್ಲಿ ಗೆಲುವಿನ ಖಾತೆ ತೆರೆಯುವುದರ ಮೂಲಕ ಮುನ್ನಡೆಯನ್ನು ಸಾಧಿಸಿತು. ಹೀಗೆ ಲಾರ್ಡ್ಸ್ ಅಂಗಳದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದ ಟೀಮ್ ಇಂಡಿಯಾ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರಣಿ ಸಹಿತ 76 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು.

'ಆ ಪಂದ್ಯವನ್ನು ನೆನಪಿಸಿಕೊಳ್ಳಿ'; ಉತ್ಸಾಹದಲ್ಲಿರುವ ಆಂಗ್ಲರಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗನ ಎಚ್ಚರಿಕೆ!'ಆ ಪಂದ್ಯವನ್ನು ನೆನಪಿಸಿಕೊಳ್ಳಿ'; ಉತ್ಸಾಹದಲ್ಲಿರುವ ಆಂಗ್ಲರಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗನ ಎಚ್ಚರಿಕೆ!

ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ 3 ಪಂದ್ಯಗಳು ಮುಗಿದ ಬಳಿಕ ಸರಣಿಯಲ್ಲಿ 1-1 ಸಮಬಲವನ್ನು ಸಾಧಿಸಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಪ್ಟೆಂಬರ್ 2 ರಿಂದ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನಾಲ್ಕನೇ ಪಂದ್ಯದತ್ತ ತಮ್ಮ ಚಿತ್ತ ನೆಟ್ಟಿವೆ. ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯ ಎರಡೂ ತಂಡಗಳಿಗೂ ಸಹ ಅತೀ ಪ್ರಮುಖವಾದ ಪಂದ್ಯವಾಗಿದ್ದು ಈ ಪಂದ್ಯದಲ್ಲಿ ಗೆಲುವನ್ನು ಸಾಧಿಸುವುದರ ಮೂಲಕ ಸರಣಿಯನ್ನು ಬಹುತೇಕ ತಮ್ಮ ಕೈವಶ ಮಾಡಿಕೊಳ್ಳುವ ಯೋಜನೆಯಲ್ಲಿವೆ.

ಆದರೆ ಓವಲ್ ಕ್ರೀಡಾಂಗಣದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲಲಿದೆ ಎಂದು ಹೇಳುವುದು ತೀರಾ ಕಷ್ಟ. ಏಕೆಂದರೆ ಓವೆಲ್ ಕ್ರೀಡಾಂಗಣದಲ್ಲಿ ಭಾರತ ಗೆದ್ದಿರುವುದು ಕೇವಲ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರ. ಹೌದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಓವಲ್ ಕ್ರೀಡಾಂಗಣದಲ್ಲಿ ಭಾರತ ಗೆದ್ದಿರುವುದು 1971ರಲ್ಲಿ ನಡೆದಿದ್ದ ಕೇವಲ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ. ಆ ಪಂದ್ಯವನ್ನು ಹೊರತುಪಡಿಸಿದರೆ ಓವಲ್ ಕ್ರೀಡಾಂಗಣದಲ್ಲಿ ನಡೆದಿರುವ ಬೇರೆ ಯಾವುದೇ ಟೆಸ್ಟ್ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಜಯವನ್ನು ಸಾಧಿಸಿಯೇ ಇಲ್ಲ.

ಭಾವುಕ ಸಂದೇಶದೊಂದಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್!ಭಾವುಕ ಸಂದೇಶದೊಂದಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಡೇಲ್ ಸ್ಟೇನ್!

ಇದುವರೆಗೂ ಓವಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಟ್ಟು 13 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಟೀಮ್ ಇಂಡಿಯಾ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದ್ದರೆ, ಇಂಗ್ಲೆಂಡ್ ತಂಡ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ ಮತ್ತು 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಹೀಗೆ ಓವಲ್ ಕ್ರೀಡಾಂಗಣದಲ್ಲಿ ಅತಿ ಕೆಟ್ಟ ಟೆಸ್ಟ್ ಇತಿಹಾಸವನ್ನು ಹೊಂದಿರುವ ಟೀಮ್ ಇಂಡಿಯಾ ಮುಂಬರುವ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದರ ಮೂಲಕ 50 ವರ್ಷಗಳ ನಂತರ ಓವಲ್ ಕ್ರೀಡಾಂಗಣದಲ್ಲಿ ವಿಜಯದ ಪತಾಕೆಯನ್ನು ಹಾರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಭಾರತ 2008, 2014 ಮತ್ತು 2017ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಇದೇ ಓವಲ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯಗಳನ್ನಾಡಿದ್ದು ಆ ಪಂದ್ಯಗಳಲ್ಲಿ ಬಂದ ಫಲಿತಾಂಶ ಈ ಕೆಳಕಂಡಂತಿದೆ..

2007ರಲ್ಲಿ ಫಾಲೋಆನ್ ಮತ್ತು ಸೋಲು

2007ರಲ್ಲಿ ಫಾಲೋಆನ್ ಮತ್ತು ಸೋಲು

2007ರಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಭಾರತ ತಂಡ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 8 ರನ್‌ಗಳ ಸೋಲನ್ನು ಕಂಡಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿಯೇ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 591 ರನ್ ಗಳಿಸಿತ್ತು, ಇಂಗ್ಲೆಂಡ್ ಪರ ಇಯಾನ್ ಬೆಲ್ 235 ಮತ್ತು ಕೆವಿನ್ ಪೀಟರ್ಸನ್ 175 ರನ್ ಚಚ್ಚಿದ್ದರು. ಇತ್ತ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ರಾಹುಲ್ ದ್ರಾವಿಡ್ 146 ರನ್ ಬಾರಿಸಿ ಜವಾಬ್ದಾರಿಯುತ ಆಟವಾಡಿದರು, ಈ ಮೂಲಕ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 300 ರನ್ ಕಲೆ ಹಾಕಿ ಮತ್ತೆ ಫಾಲೋ ಆನ್ ನಿಯಮಕ್ಕೆ ಒಳಪಟ್ಟು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿ 283 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ 8 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತ್ತು.

2014ರಲ್ಲಿ ಹೀನಾಯ ಸೋಲು

2014ರಲ್ಲಿ ಹೀನಾಯ ಸೋಲು

2014 ರಲ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯಂತ ಹೀನಾಯವಾಗಿ ಸೋಲನ್ನು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಎಂಎಸ್ ಧೋನಿ ನೇತೃತ್ವದ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 148 ರನ್‌ಗಳಿಗೆ ಆಲ್ ಔಟ್ ಆಯಿತು, ಟೀಮ್ ಇಂಡಿಯಾ ಪರ ಎಂ ಎಸ್ ಧೋನಿ 82 ರನ್ ಕಲೆ ಹಾಕಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 486 ರನ್ ಗಳಿಸಿತು ಹಾಗೂ ಜೋ ರೂಟ್ 149 ರನ್ ಬಾರಿಸುವ ಮೂಲಕ ಭಾರತ ತಂಡದ ಮೊತ್ತಕ್ಕಿಂತ ಅಧಿಕ ರನ್ ಕಲೆಹಾಕಿದ್ದರು. ಹೀಗೆ 338 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 94 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಇಂಗ್ಲೆಂಡ್ ವಿರುದ್ಧ 244 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತ್ತು.

Bengaluru Bulls ಈ ಬಾರಿ ಯಾವ ಮಟ್ಟಕ್ಕೆ ಸಿದ್ದವಾಗಿದೆ | Pro Kabbadi Bengaluru | Oneindia Kannada
2018ರ ಪಂದ್ಯದಲ್ಲಿಯೂ ಸೋಲು

2018ರ ಪಂದ್ಯದಲ್ಲಿಯೂ ಸೋಲು

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕೊನೆಯದಾಗಿ ಓವಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು 2018ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ. ಈ ಪಂದ್ಯದಲ್ಲಿಯೂ ಇಂಗ್ಲೆಂಡ್ ವಿರುದ್ಧ ಭಾರತ 118 ರನ್‌ಗಳಿಂದ ಸೋಲನ್ನು ಅನುಭವಿಸಿತ್ತು.

ಹೀಗೆ ಓವಲ್ ಕ್ರೀಡಾಂಗಣದಲ್ಲಿ ನಡೆದಿರುವ ಪಂದ್ಯಗಳಲ್ಲಿ ಹೀನಾಯ ಸೋಲುಗಳನ್ನು ಕಂಡಿರುವ ಟೀಮ್ ಇಂಡಿಯಾ ಈ ಬಾರಿ ನಡೆಯುವ ಓವಲ್ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ..

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 31, 2021, 19:11 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X