ಓವಲ್ ಟೆಸ್ಟ್: ಪಂದ್ಯಶ್ರೇಷ್ಠ ಪ್ರಶಸ್ತಿಗೆ ನನಗಿಂತ ಈ ಆಟಗಾರ ಅರ್ಹ ಎಂದ ರೋಹಿತ್ ಶರ್ಮಾ!

Shardhul Thakur ಬಗ್ಗೆ ಟ್ವಿಟರ್ ಏನು ಹೇಳುತ್ತಿದೆ ಗೊತ್ತಾ | Oneindia Kannada

ಬಹು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಫಲಿತಾಂಶದೊಂದಿಗೆ ಮುಗಿದಿದ್ದು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 157 ರನ್‌ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ 50 ವರ್ಷಗಳ ಬಳಿಕ ಓವಲ್ ಕ್ರೀಡಾಂಗಣದಲ್ಲಿ ಜಯಗಳಿಸಿದ ದಾಖಲೆಯನ್ನು ಮಾಡಿದೆ.

4ನೇ ಟೆಸ್ಟ್ ಕೊನೆಯ ದಿನದಾಟದಿಂದ ಭಾರತದ ಇಬ್ಬರು ಆಟಗಾರರು ಔಟ್; 5ನೇ ಟೆಸ್ಟ್‌ಗೂ ಅನುಮಾನ?4ನೇ ಟೆಸ್ಟ್ ಕೊನೆಯ ದಿನದಾಟದಿಂದ ಭಾರತದ ಇಬ್ಬರು ಆಟಗಾರರು ಔಟ್; 5ನೇ ಟೆಸ್ಟ್‌ಗೂ ಅನುಮಾನ?

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಮುಗಿದ ನಂತರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದ್ದವು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದ ಮೇಲೆ ಕ್ರೀಡಾಭಿಮಾನಿಗಳಲ್ಲಿ ದೊಡ್ಡಮಟ್ಟದ ನಿರೀಕ್ಷೆಗಳು ಇದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಭಾರತ ತಂಡ 191 ರನ್‌ಗಳಿಗೆ ಆಲ್ ಔಟ್ ಆಯಿತು, ಇನ್ನು ಇಂಗ್ಲೆಂಡ್ ತಂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಸಿ 99 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಮಂಕಾಗಿದ್ದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 466 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 368 ರನ್‌ಗಳ ಗುರಿಯನ್ನು ನೀಡಿತು. ಟೀಮ್ ಇಂಡಿಯಾ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ 210 ರನ್‌ಗಳಿಗೆ ಆಲ್ ಔಟ್ ಆಗುವ ಮೂಲಕ ಸರಣಿಯಲ್ಲಿ ತನ್ನ ಎರಡನೇ ಸೋಲನ್ನು ಕಂಡಿತು.

 ಓವಲ್ ಜಯದ ಮೂಲಕ ದೊಡ್ಡ ದಾಖಲೆ ಬರೆದ ಕೊಹ್ಲಿ; ಬೆಸ್ಟ್ ಕ್ಯಾಪ್ಟನ್ ಎನ್ನಲು ಇದಕ್ಕಿಂತ ಇನ್ನೇನು ಬೇಕು? ಓವಲ್ ಜಯದ ಮೂಲಕ ದೊಡ್ಡ ದಾಖಲೆ ಬರೆದ ಕೊಹ್ಲಿ; ಬೆಸ್ಟ್ ಕ್ಯಾಪ್ಟನ್ ಎನ್ನಲು ಇದಕ್ಕಿಂತ ಇನ್ನೇನು ಬೇಕು?

ಹೀಗೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಗೆಲುವನ್ನು ಸಾಧಿಸುವುದರ ಮೂಲಕ ಸದ್ಯ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯನ್ನು ಸಾಧಿಸಿದೆ. ಈ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 127 ರನ್ ಬಾರಿಸಿ ಅತ್ಯದ್ಬುತ ಆಟವನ್ನಾಡಿದ ರೋಹಿತ್ ಶರ್ಮಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆದರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ ತನಗಿಂತ ಈ ಪ್ರಶಸ್ತಿಗೆ ಬೇರೊಬ್ಬ ಆಟಗಾರ ಅರ್ಹ ಎಂದು ಈ ಕೆಳಕಂಡಂತೆ ಮಾತನಾಡಿದ್ದಾರೆ.

ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹ

ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕವನ್ನು ಬಾರಿಸಿ ಮಿಂಚಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ನಂತರ ಪಂದ್ಯದ ಕುರಿತು ಮಾತನಾಡಿದ ರೋಹಿತ್ ಶರ್ಮಾ ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆಯಲು ನನಗಿಂತ ಶಾರ್ದೂಲ್ ಠಾಕೂರ್ ಹೆಚ್ಚು ಅರ್ಹಎಂದು ಹೇಳಿಕೆ ನೀಡಿದ್ದಾರೆ. ಶಾರ್ದೂಲ್ ಠಾಕೂರ್ ಮ್ಯಾಚ್ ವಿನ್ನಿಂಗ್ ಆಟವನ್ನು ಆಡಿದ್ದಾರೆ, ತಂಡ ಕಷ್ಟದಲ್ಲಿದ್ದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹನಾದ ಆಟಗಾರ ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.

 ಶಾರ್ದೂಲ್ ಠಾಕೂರ್ ಆಟವನ್ನು ಕೊಂಡಾಡಿದ ರೋಹಿತ್ ಶರ್ಮ

ಶಾರ್ದೂಲ್ ಠಾಕೂರ್ ಆಟವನ್ನು ಕೊಂಡಾಡಿದ ರೋಹಿತ್ ಶರ್ಮ

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಶಾರ್ದೂಲ್ ಠಾಕೂರ್ ಅರ್ಹ ಆಟಗಾರ ಎಂದು ಹೇಳಿಕೆ ನೀಡಿದ ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್ ಆಟವನ್ನು ಕೊಂಡಾಡಿದ್ದಾರೆ. ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೇ 100 ರನ್ ದಾಟಿದ ಸಂದರ್ಭದಲ್ಲಿ ಶಾರ್ದೂಲ್ ಠಾಕೂರ್ ವಿಕೆಟ್ ಪಡೆದರು ಹಾಗೂ ಸ್ಫೋಟಕ ಆಟಗಾರ ಜೋ ರೂಟ್ ವಿಕೆಟ್‍ನ್ನೂ ಕೂಡ ಪಡೆದ ಶಾರ್ದೂಲ್ ಠಾಕೂರ್ ಮೊದಲ ಮತ್ತು ಎರಡನೇ ಇನ್ನಿಂಗ್ಸ್ ಎರಡರಲ್ಲೂ ಅರ್ಧಶತಕ ಬಾರಿಸಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದರು ಎಂದು ರೋಹಿತ್ ಶರ್ಮಾ ಶಾರ್ದೂಲ್ ಠಾಕೂರ್ ಅವರ ಆಟವನ್ನು ಕೊಂಡಾಡಿದ್ದಾರೆ. ಅದರಲ್ಲಿಯೂ 30 ಎಸೆತಗಳಲ್ಲಿ ಟೆಸ್ಟ್ ಅರ್ಧ ಶತಕವನ್ನು ಪೂರೈಸಿದ್ದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ ಎಂದು ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

 ಶಾರ್ದೂಲ್ ಠಾಕೂರ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ

ಶಾರ್ದೂಲ್ ಠಾಕೂರ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ

ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ನಿಜಕ್ಕೂ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿದರು. ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 36 ಎಸೆತಗಳಲ್ಲಿ 57 ರನ್ ಬಾರಿಸಿ ಮಿಂಚಿದ ಶಾರ್ದೂಲ್ ಠಾಕೂರ್ ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ 60 ರನ್ ಬಾರಿಸಿ ಅದ್ಬುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. ಕೇವಲ ಬ್ಯಾಟಿಂಗ್ ವಿಭಾಗ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಶಾರ್ದೂಲ್ ಠಾಕೂರ್ ಉತ್ತಮ ಪ್ರದರ್ಶನ ನೀಡಿದರು. ಮೊದಲನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆದಿದ್ದ ಶಾರ್ದೂಲ್ ಠಾಕೂರ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರಾದ ರೊರಿ ಬರ್ನ್ಸ್ ಮತ್ತು ಜೋ ರೂಟ್ ಅವರ ವಿಕೆಟ್ ಪಡೆಯುವುದರ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.

For Quick Alerts
ALLOW NOTIFICATIONS
For Daily Alerts
Story first published: Tuesday, September 7, 2021, 10:51 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X