ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭ್ಯಾಸ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್: ಶ್ರೀಕರ್ ಭರತ್ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ

S bharat

ವಿಕೆಟ್‌ಕೀಪರ್ ಬ್ಯಾಟರ್ ಶ್ರೀಕರ್ ಭರತ್ ಅವರು ಭಾರತ ಮತ್ತು ಲೀಸೆಸ್ಟರ್‌ಶೈರ್ ಕೌಂಟಿ ಕ್ಲಬ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಲೀಸೆಸ್ಟರ್‌ಶೈರ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೀಕರ್ ಭರತ್ ಅಜೇಯ 70 ರನ್ ಕಲೆಹಾಕಿದರು. ಇದರ ಪರಿಣಾಮವೇ ಅವರಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕರಾಗಿ ಬಡ್ತಿ ನೀಡಲಾಯಿತು. ಏಕಕಾಲದಲ್ಲಿ ಓಪನರ್ ಆಗಿ ಕಣಕ್ಕಿಳಿದ ಶ್ರೀಕರ್ ಭರತ್‌ ಶುಭಮನ್ ಗಿಲ್‌ರೊಂದಿಗೆ ಉತ್ತಮ ಇನ್ನಿಂಗ್ಸ್‌ ಆರಂಭಿಸಿದರು.

ಒಂದೆಡೆ ಶುಭಮನ್ ಗಿಲ್ 38 ರನ್‌ಗಳಿಸಿ ಔಟಾದ ಬಳಿಕ ಕ್ರೀಸ್‌ನಲ್ಲಿ ನೆಲೆಯೂರಿರುವ ಭರತ್ ಎರಡನೇ ದಿನದಾಟದಂತ್ಯಕ್ಕೆ 59 ಎಸೆತಗಳಲ್ಲಿ 31ರನ್ ಕಲೆಹಾಕುವ ಮೂಲಕ ಅಜೇಯರಾಗಿ ಮೂರನೇ ದಿನದಾಟ ಕಾಯ್ದುಕೊಂಡಿದ್ದಾರೆ.

ಓಪನರ್ ಆಗಿ ಶ್ರೀಕರ್ ಭರತ್‌ಗೆ ಬಡ್ತಿ ಸಿಕ್ಕಿದೆ

ಓಪನರ್ ಆಗಿ ಶ್ರೀಕರ್ ಭರತ್‌ಗೆ ಬಡ್ತಿ ಸಿಕ್ಕಿದೆ

ಈ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಆರಂಭಿಕರಾಗಿ ಬಂದಿದ್ದು ಗೊತ್ತೇ ಇದೆ. ಶುಭ್‌ಮನ್ ಗಿಲ್ ಅವರೊಂದಿಗೆ ರೋಹಿತ್ ಇನ್ನಿಂಗ್ಸ್ ಆರಂಭಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಕಣಕ್ಕೆ ಇಳಿಯಲಿಲ್ಲ. ಅವರ ಬದಲಿಗೆ ಓಪನರ್ ಆಗಿ ಕೆಎಸ್ ಭರತ್ ಅವರನ್ನು ಕಳುಹಿಸಿದ್ದು, ಪ್ರಯೋಗ ಯಶಸ್ವಿಯಾಯಿತು.

ಸುದೀರ್ಘ ಇನ್ನಿಂಗ್ಸ್ ಆಡುವ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸಿದ ಶ್ರೀಕರ್‌, ಟೆಸ್ಟ್ ಮಾದರಿಗೆ ತಕ್ಕಂತೆ ಬ್ಯಾಟಿಂಗ್ ಮಾಡಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ 59 ಎಸೆತಗಳನ್ನು ಎದುರಿಸಿ 31 ರನ್ ಗಳಿಸಿ ಅಜೇಯರಾಗುಳಿದಿದ್ದು, ಇದರಲ್ಲಿ ಐದು ಬೌಂಡರಿಗಳಿವೆ.

ಉತ್ತಮ ಇನ್ನಿಂಗ್ಸ್‌ ಆಡುವಲ್ಲಿ ಶುಭಮನ್ ವಿಫಲ

ಉತ್ತಮ ಇನ್ನಿಂಗ್ಸ್‌ ಆಡುವಲ್ಲಿ ಶುಭಮನ್ ವಿಫಲ

ಲೀಸೆಸ್ಟರ್‌ಶೈರ್ ಎರಡೂ ಇನ್ನಿಂಗ್ಸ್‌ನಲ್ಲಿ ಶುಭ್ ಮನ್ ಗಿಲ್ ಉತ್ತಮ ಇನ್ನಿಂಗ್ಸ್ ಆಡದ ಪರಿಣಾಮ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮೊದಲ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಗಿಲ್ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಗಿಲ್ ಮೊದಲ ಇನಿಂಗ್ಸ್‌ನಲ್ಲಿ 21 ರನ್ ಗಳಿಸಿದ್ದರು. 28 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 21 ರನ್ ಗಳಿಸಿ ಔಟಾದರು. ಅದೇ ವೇಳೆ ಕೆಎಸ್ ಭರತ್ ಸುದೀರ್ಘ ಇನ್ನಿಂಗ್ಸ್ ಆಡಿದರು. ಅವರು 111 ಎಸೆತಗಳನ್ನು ಎದುರಿಸಿ 70 ರನ್ ಗಳಿಸಿ ಅಜೇಯರಾಗಿ ಉಳಿದರು.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಶುಭಮನ್ 38ರನ್‌ಗೆ ಇನ್ನಿಂಗ್ಸ್ ಮುಗಿಸಿದ್ದಾರೆ.

ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್‌

ಭರತ್‌ಗೆ ಓಪನರ್ ಆಗಿ ಏಕೆ ಬಡ್ತಿ ನೀಡಲಾಗಿದೆ!

ಭರತ್‌ಗೆ ಓಪನರ್ ಆಗಿ ಏಕೆ ಬಡ್ತಿ ನೀಡಲಾಗಿದೆ!

ಕ್ರೀಸ್‌ನಲ್ಲಿ ಕೆ.ಎಸ್ ಭರತ್ ಆಡಿದ ರೀತಿ ಮತ್ತು ಪರಿಸ್ಥಿತಿಗೆ ಹೊಂದಿಕೊಂಡಿ ಆಡಿದ ಭರತ್ ಇನ್ನಿಂಗ್ಸ್‌ ನೋಡಿದ ರೋಹಿತ್ ಶರ್ಮಾ ಪ್ರಭಾವಿತರಾಗಿದ್ದರೆ. ಅದಕ್ಕಾಗಿಯೇ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಬದಲಿಗೆ ಓಪನರ್ ಆಗಿ ಭರತ್ ಅವರನ್ನು ಕಳುಹಿಸಿದರು.

ರೋಹಿತ್ ಇಟ್ಟಿದ್ದ ಭರವಸೆಯನ್ನು ಭರತ್ ಸುಳ್ಳಾಗಿಸಿಲ್ಲ. ಅವರು 59 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯರಾಗುಳಿದಿದ್ದು, ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಮತ್ತೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಗಿಲ್ ಔಟಾದ ಬಳಿಕ ಹನುಮ ವಿಹಾರಿ ಕ್ರೀಸ್‌ಗೆ ಇಳಿದಿದ್ದು, ಒಂಬತ್ತು ರನ್ ಗಳಿಸಿ ಅಜೇಯರಾಗುಳಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದೇ ದಿನ 500 ರನ್ ದಾಖಲಾಗಿದ್ದು ನಾಲ್ಕು ಬಾರಿ: ಯಾವಾಗೆಂದು ತಿಳಿಯಿರಿ

ಬರ್ಮಿಂಗ್‌ಹ್ಯಾಮ್‌ನಲ್ಲಿ ಅಂತಿಮ ಟೆಸ್ಟ್ ಪಂದ್ಯ

ಬರ್ಮಿಂಗ್‌ಹ್ಯಾಮ್‌ನಲ್ಲಿ ಅಂತಿಮ ಟೆಸ್ಟ್ ಪಂದ್ಯ

ಜುಲೈ 1ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಐದನೇ ಟೆಸ್ಟ್‌ಗೆ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಕೆಎಸ್ ಭರತ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯೂ ಕಡಿಮೆ. ಹೀಗಾಗಿ ಶುಭ್‌ಮಾನ್ ಗಿಲ್‌ ಜೊತೆಗೆ ಕೆಎಸ್ ಭರತ್ ಇನ್ನಿಂಗ್ಸ್‌ ಆರಂಭಿಸಬಹುದು.

ಅಭ್ಯಾಸ ಪಂದ್ಯದಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಯ ನಡುವೆ ಕ್ರೀಸ್ ಗೆ ಬಂದ ಕೆ.ಎಸ್ ಭರತ್ ಸಮಯೋಚಿತ ಆಟವಾಡಿದರು. ಅವರು ಗುಣಮಟ್ಟದ ಟೆಸ್ಟ್ ಕ್ರಿಕೆಟಿಗ ಎನಿಸಿದರು. ಕೆ.ಎಸ್.ಭರತ್ ಆರಂಭಿಕರಾಗಿ ಕಣಕ್ಕೆ ಇಳಿದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

Story first published: Saturday, June 25, 2022, 14:05 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X